Cinisuddi Fresh Cini News 

ಅಪ್ಪ ಐ ಲವ್ ಯೂ ಪಾ

ಅಪ್ಪ ಅಪ್ಪ ನನಗೆ ನೀನು ಬೇಕಪ್ಪಾ… ಹೌದು ಮಕ್ಕಳು ತಾಯಿಯಷ್ಟೇ ತಂದೆಯನ್ನು ಬಹಳಷ್ಟು ಪ್ರೀತಿಸುತ್ತಾರೆ, ಹೆತ್ತು ಹೊತ್ತು ಸಲಹುವ ಅಮ್ಮ ತಮ್ಮ ಪ್ರೀತಿಯನ್ನು ಧಾರೆ ಎಳೆದು ಮಕ್ಕಳು ಬೆಳೆಸುತ್ತಾರೆ, ಮಕ್ಕಳ ಬೇಕು, ಬೇಡಗಳನ್ನು ನೋಡಿಕೊಳ್ಳುವುದೇ ಅಪ್ಪಾಘಿ..

ಆದ್ದರಿಂದಲೇ ಪ್ರತಿಯೊಂದು ಮಕ್ಕಳಿಗೂ ಅಪ್ಪನೇ ನಿಜವಾದ ಹೀರೋ. ನಮ್ಮ ತಾರಾಮಣಿಗಳಿಗೂ ಕೂಡ ಅಮ್ಮನಿಗಿಂತಲೂ ಅಪ್ಪನೆಂದರೆ ಬಲು ಇಷ್ಟಘಿ.

ಇದೇ ಭಾನುವಾರ ಅಪ್ಪಂದಿರ ದಿನಾಚರಣೆಯನ್ನು ಆಚರಿಸುತ್ತಿದ್ದು ಬಹಳಷ್ಟು ನಟೀಮಣಿಯರು ಬಾಲ್ಯದಿಂದಲೂ ಅಪ್ಪನೊಂದಿಗೆ ನಡೆದು ಬಂದ ಒಡನಾಟವನ್ನು ಹೊರಹಾಕಿದ್ದಾರೆ. ಕೊಡಗಿನ ಕುವರಿ, ಕಿರಿಕ್ ಪಾರ್ಟಿ ಶಾನ್ವಿ ರಶ್ಮಿಕಾಮಂದಣ್ಣ ಕೂಡ ತಮ್ಮ ತಂದೆಯೊಂದಿಗಿನ ಬಾಂಧವ್ಯವನ್ನು ಹಂಚಿಕೊಂಡಿದ್ದಾರೆ.

ಕೊರೊನಾ ಮಾರಿಯಿಂದ 3 ತಿಂಗಳಿಗೂ ಹೆಚ್ಚು ದಿನಗಳ ಕಾಲ ಲಾಕ್‍ಡೌನ್ ಆಗಿದ್ದಾಗ ಸದಾ ಬಿಜಿ ಇರುತ್ತಿದ್ದ ಸ್ಯಾಂಡಲ್‍ವುಡ್‍ನ ಸಾನ್ವಿಘಿ, ಗೀತಾಗೋವಿಂದನ ಗೀತಾ, ಡ್ರಿಯರ್ ಕಾಮ್ರೇಡ್‍ನ ಲಿಲ್ಲಿ ಹೆಚ್ಚು ಹೊತ್ತು ಕಳೆದಿದ್ದು ಕೂಡ ತಮ್ಮ ಪ್ರೀತಿಯ ತಂದೆಯೊಂದಿಗೆಯಂತೆ. ಅದನ್ನು ತಮ್ಮ ಸಾಮಾಜಿಕ ಜಾಲದಲ್ಲಿ ರಶ್ಮಿಕಾ ಮಂದಣ್ಣ ಹಂಚಿಕೊಂಡಿದ್ದಾರೆ.

ಲಾಕ್‍ಡೌನ್ ಆಗಿದ್ದರೂ ಕೂಡ ಸದಾ ಅಂತರ್ಜಾಲದಲ್ಲಿ ಬ್ಯುಸಿಯಾಗಿದ್ದ ರಶ್ಮಿಕಾ ಮಂದಣ್ಣ ತಮ್ಮ ಕುಟುಂಬದೊಂದಿಗೆ ಹಂಚಿಕೊಂಡ ಪ್ರತಿಯೊಂದು ಕ್ಷಣಗಳ ಅನುಭವ, ತನ್ನ ಮುದ್ದು ತಂಗಿಯ ಹುಟ್ಟುಹಬ್ಬದ ಫೋಟೋಗಳನ್ನು ಕೂಡ ಆಪ್‍ಲೋಡ್ ಮಾಡಿದ್ದರು.

ತಮ್ಮ ಬಾಲ್ಯದಲ್ಲಿನ ಫೋಟೋಗಳನ್ನು ಒಂದೆಡೆ ಸೇರಿಸಿ ಫೋ]ಟೋ ಶೂಟ್ ಮಾಡಿ ಅದಕ್ಕೆ ಸುಂದರವಾದ ಕಥೆಯನ್ನು ಹೆಣೆಯುವ ಮೂಲಕವೂ ಗಮನ ಸೆಳೆದಿದ್ದಾರೆ.

ರಶ್ಮಿಕಾ ತಮ್ಮ ಅಂತರ್ಜಾಲದ ಖಾತೆಯಲ್ಲಿ ತಂದೆಯೊಂದಿಗಿರುವ ಫೋ]ಟೋವನ್ನು ಹಾಕುವ ಮೂಲಕ ಅದಕ್ಕೆ ಸುಂದರವಾದ ಕಲ್ಪನೆಯನ್ನು ಕಟ್ಟಿಕೊಟ್ಟಿದ್ದಾರೆ ಡಿಯರ್ ಕಾಮ್ರೇಡ್‍ನ ಲಿಲ್ಲಿಘಿ. ಅದರಲ್ಲಿ ಶಾನ್ವಿ ತಮ್ಮ ತಂದೆಯೊಂದಿಗೆ ಹೊಂದಿರುವ ಮಧುರವಾದ ಭಾವನೆಯನ್ನು ಹಂಚಿಕೊಂಡಿದ್ದಾರೆ.

ಪ್ರತಿಯೊಬ್ಬ ತಂದೆಗೂ ತನ್ನ ಮಗು ಹುಟ್ಟುವ ಮುನ್ನ ಅನೇಕ ಕಲ್ಪನೆಗಳನ್ನು ಹೊಂದಿರುತ್ತಾರೆ, ಹಾಗೆಯೇ ನಮ್ಮ ತಂದೆಯೂ ಕೂಡ ನನ್ನ ಬಗ್ಗೆ ಅಪಾರ ಆಸೆಯನ್ನು ಹೊತ್ತಿದ್ದರು, ನನ್ನ ಮಗಳಿಗೆ ಉದ್ದ ಮೂಗು ಇರಬೇಕು, ನೀಳವಾದ ಕೂದಲಿರಬೇಕು, ಪುಟ್ಟ ಪುಟ್ಟ ಕಾಲುಗಳಿಗೆ ಕಾಲ್ಗೆಜ್ಜೆಯನ್ನು ಹಾಕಬೇಕು, ಆ ಕಾಲುಗಳು ತನ್ನ ಎದೆ ಮೇಲೆ ನರ್ತಿಸಬೇಕೆಂಬ ಹಲವು ಆಸೆಗಳನ್ನು ಇಟ್ಟುಕೊಂಡಿದ್ದರು ಎಂಬ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಆದರೆ ನಾನು ಮಗುವಾಗಿದ್ದಾಗ ತಂದೆ ಬ್ಯುಸಿನೆಸ್‍ನಲ್ಲಿ ಬ್ಯುಜಿಯಾಗಿದ್ದರಿಂದ ನನ್ನೊಂದಿಗೆ ಕಾಲ ಕಳೆಯಲು ಆಗಲಿಲ್ಲಘಿ, ನಾನು ಕೂಡ ಮನೆಯ ವಾತಾವರಣದಿಂದ ದೂರ ಉಳಿದು ಹಾಸ್ಟೆಲ್‍ಗಳಲ್ಲಿ ಇದ್ದುಕೊಂಡೇ ಪಿಜಿ ಪದವಿ ಮುಗಿಸಿದೆ, ನಂತರ ಚಿತ್ರರಂಗದಲ್ಲಿ ಬಂದು ಬಲು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡೆ, ನಂತರ ನಮ್ಮ ತಂದೆಯೊಂದಿಗೆ ಬ್ಯುಜಿನೆಸ್‍ನಲ್ಲೂ ತೊಡಗಿಸಿಕೊಂಡೆ. ನನ್ನ ಬೆಳವಣಿಗೆಗೆ ನಮ್ಮ ತಂದೆಯೇ ಆಧಾರ ಸ್ತಂಭ.

ನಮ್ಮಲ್ಲಿ ಕೆಲವರಿಗೆ ತಂದೆಗಿಂತ ತಾಯಿಯೆಂದರೆ ಹೆಚ್ಚು ಪ್ರೀತಿ, ಆದರೆ ತಂದೆಯನ್ನು ಅರ್ಥ ಮಾಡಿಕೊಂಡರೆ ಅವರೊಬ್ಬ ಉತ್ತಮ ಗೆಳೆಯನಾಗುತ್ತಾನೆ, ಅಪ್ಪ ತನ್ನೊಳಗಿನ ಭಾವನೆಗಳನ್ನು ಹೊರಹಾಕದಿದ್ದರೂ ಕೂಡ ಅಮ್ಮನಷ್ಟೇ ಅವರು ಕೂಡ ಅಷ್ಟೇ ಪ್ರೀತಿ ಹೊಂದಿರುತ್ತಾರೆ.

ನನ್ನ ತಂದೆಯಲ್ಲಿ ಅಡಗಿರುವ ಭಾವನೆಗಳನ್ನು ತಿಳಿದುಕೊಳ್ಳಲು ನನಗೆ ಬಹಳ ವರ್ಷಗಳು ಬೇಕಾದವು, ಈಗ ಯಾರಾದರೂ ನೀವು ನಿಮ್ಮ ಅಪ್ಪ , ಅಮ್ಮನಲ್ಲಿ ಯಾರನ್ನು ಹೆಚ್ಚು ಪ್ರೀತಿಸುತ್ತೀರಿ ಎಂದು ಕೇಳಿದರೆ, ನಮ್ಮ ತಂದೆಯನ್ನೇ ಹೆಚ್ಚು ಪ್ರೀತಿಸುತ್ತೇನೆ ಎಂಬುದು ನಿಮಗೆ ಅರ್ಥವಾಗುತ್ತದೆ ಎಂದು ಕಿರಿಕ್‍ಪಾರ್ಟಿಯ ಶಾನ್ವಿ ತಮ್ಮ ಹಾಗೂ ತಂದೆಯ ಬಾಂಧವ್ಯದ ಬಗ್ಗೆ ಸವಿಸ್ತಾರವಾಗಿ ಬರೆದುಕೊಂಡಿದ್ದಾರೆ.

Related posts