Cinisuddi Fresh Cini News Tv / Serial 

ಫ್ಯಾಷನ್ ಟಿವಿ ಕ್ಯಾಲೆಂಡರ್ ಬಿಡುಗಡೆ

ಫ್ಯಾಷನ್ ಜಗತ್ತಿನ ಕಾರ್ಯಕ್ರಮಗಳನ್ನು ನೋಡುವುದೇ ಸೊಗಸು. ಈ ಫ್ಯಾಷನ್ ಅನ್ನುವುದು ಹಿರಿತೆರೆಯಿರಲಿ, ಕಿರುತೆರೆಯಲ್ಲೂ ಈಗ ಸಾಕಷ್ಟು ಸದ್ದು ಮಾಡುತ್ತಿದೆ. ಅದರ ಅಂದವನ್ನು ಮತ್ತಷ್ಟು ಹೆಚ್ಚಿಸಲು ಇತ್ತೀಚೆಗೆ ಮಾಡೆಲ್‍ಗಳನ್ನೊಳಗೊಂಡ ಕ್ಯಾಲೆಂಡರ್‍ಗಳು ಕೂಡ ಹೊರಬರುತ್ತಿದೆ.

ಇತ್ತೀಚೆಗೆ ಅಂತಹ ಗ್ಲಾಮರ್‍ಯುಕ್ತ ಕ್ಯಾಲೆಂಡರ್ ಅನ್ನು ಕಮರ್ ಫಿಲಂ ಫ್ಯಾಕ್ಟರಿಯು ಹೈದ್ರಾಬಾದ್‍ನಲ್ಲಿ ಬಿಡುಗಡೆ ಮಾಡಿತು. ಹಿರಿಯ ನಿರ್ಮಾಪಕ ಮತ್ತು ವಿತರಕ ನರ್ಗಿಸ್‍ಬಾಬು ಅವರ ಮಗ ಕುಮಾರ್ ಅವರು ಎಫ್‍ಟೀವಿ ಕ್ಯಾಲೆಂಡರ್‍ಗಳ ವಿತರಣೆಯ ಹಕ್ಕು ಪಡೆದಿದ್ದು ಅಂದು ಸಮಾರಂಭದಲ್ಲಿ ಅವರು ಹಾಜರಿದ್ದರು.

2016ರಲ್ಲಿ ಬಾಕ್ಸ್ ಕ್ರಿಕೆಟ್ ಅನ್ನು ಆಯೋಜಿಸುವ ಮೂಲಕ ಗಮನ ಸೆಳೆದಿದ್ದ ಕುಮಾರ್ ಅವರು ಅಂದಿನಿಂದ ಮಾಡೆಲ್‍ಗಳ ಹಾಗೂ ನಟಿಮಣಿಯರ ಗ್ಲಾಮರ್ ಫೋಟೋಗಳನ್ನೊಳಗೊಂಡ ಕ್ಯಾಲೆಂಡರ್ ಅನ್ನು ಹೊರತರುತ್ತಿದ್ದಾರೆ. ಈ ಬಾರಿ ಅವರು ಹೊರತಂದಿರುವ ಕ್ಯಾಲೆಂಡರ್ ನಲ್ಲಿ ಚಿತ್ರರಂಗದ ತಾರೆಯರಾದ ಪ್ರಣೀತಾ, ಶುಭ್ರ ಅಯ್ಯಪ್ಪ, ನಭಾ ನಟೇಶ್, ಕಾರುಣ್ಯರಾಮ್, ಅಪೂರ್ವಗೌಡ, ಶಾನ್ವಿ ಶ್ರೀವಾಸ್ತವ ಅವರು ಫೋಜ್ ನೀಡುವ ಮೂಲಕ ಕ್ಯಾಲೆಂಡರ್‍ನ ಅಂದವನ್ನು ಹೆಚ್ಚಿಸಿದ್ದಾರೆ.

ಮಾರ್ಚ್ 2019 ರಿಂದ ಫೆಬ್ರುವರಿ 2020ರವರೆಗೂ ಇರುವ ಕ್ಯಾಲೆಂಡರ್‍ನ ಒಂದೊಂದು ಪುಟದಲ್ಲೂ ಸ್ಯಾಂಡಲ್‍ವುಡ್‍ನ ಈ ಆಧುನಿಕ ನಟಿ ಮಣಿಯರು ವಿವಿಧ ಬಗೆಯ ಪೇಜ್‍ಗಳಲ್ಲಿ ಪುಟದ ಅಂದವನ್ನು ಹೆಚ್ಚಿಸಿದ್ದಾರೆ. ವರ್ಣರಂಜಿತವಾಗಿ ನಡೆದ ಕ್ಯಾಲೆಂಡರ್ ಲಾಂಚ್ ಕಾರ್ಯಕ್ರಮದಲ್ಲಿ ರೂಪದರ್ಶಿಯರು ನಡೆಸಿಕೊಟ್ಟ ಫ್ಯಾಷನ್ ಶೋ ಕಾರ್ಯಕ್ರಮದ ಅಂದವನ್ನು ಹೆಚ್ಚಿಸುವಂತೆ ಮಾಡಿತ್ತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಿರ್ಮಾಪಕ, ನಿರ್ದೇಶಕ ಆರ್. ಚಂದ್ರು, ನಟಿಯರಾದ ವಾಣಿಶ್ರೀ, ಸೋನಿಕಾಗೌಡ, ಆದಿ ಲೋಕೇಶ್, ಹಿರಿಯ ವಿತರಕರುಗಳಾದ ಭಾಷಾ, ಮೋಹನ್‍ದಾಸ್ ಪೈ ಮೊದಲಾದ ಚಿತ್ರರಂಗದ ಪ್ರಮುಖರು ಹಾಜರಿದ್ದರು.

ಫ್ಯಾಷನ್ ಟೀವಿ ಮೂಲಕ ಗೀತೆಗಳು, ಸಿನಿಮಾವನ್ನು ಪ್ರಸಾರ ಮಾಡುವ ಮೂಲಕ ಸ್ಯಾಂಡಲ್‍ವುಡ್‍ಗೆ ನೆರವಾಗುತ್ತಿದ್ದು, ಈಗ ಕ್ಯಾಲೆಂಡರ್ ಮೂಲಕವು ಗಮನ ಸೆಳೆಯಲು ಹೊರಟಿದ್ದು ಕುಮಾರ್ ಅವರ ಪ್ರಯತ್ನವನ್ನು ಮೆಚ್ಚಲೇಬೇಕು.

Share This With Your Friends

Related posts