Cinisuddi Fresh Cini News 

ಗೋಲ್ಡನ್ ಜೂಬ್ಲಿ ಸಂಭ್ರಮದಲ್ಲಿ ಈಶ್ವರಿ ಸಂಸ್ಥೆ

ಚಿತ್ರರಂಗದಲ್ಲಿ ಒಂದು ಸಂಸ್ಥೆ 50 ವರ್ಷ ಪೂರೈಸಿದೆ ಎಂದರೆ ಅದು ಒಂದು ದೊಡ್ಡ ಸಾಧನೆಯೇ ಸರಿ. ಇಂಥ ಸಾಧನೆಗೆ ಮುನ್ನುಡಿ ಬರೆದಂಥ ವ್ಯಕ್ತಿ ಖ್ಯಾತ ನಿರ್ಮಾಪಕ ಎನ್. ವೀರಸ್ವಾಮಿ. 1970 ರಲ್ಲಿ ಸ್ಥಾಪನೆಗೊಂಡ ಈ ಈಶ್ವರಿ ಸಂಸ್ಥೆ ಇಂದಿಗೆ ಐವತ್ತನೇ ವರ್ಷದ ಸಂಭ್ರಮದಲ್ಲಿದೆ.

ಈ ಸಂಸ್ಥೆಯು 1971 ರಲ್ಲಿ ಡಾ. ರಾಜ್ ಕುಮಾರ್ ಅಭಿನಯದ ಕುಲಗೌರವ ಚಿತ್ರದ ಮೂಲಕ ನಿರ್ಮಾಣಕ್ಕೆ ಕೈ ಹಾಕಿತ್ತು. ತದನಂತರ ವಿಷ್ಣುವರ್ಧನ್ ಅಭಿನಯದ ನಾಗರಹಾವು , ಭೂತಯ್ಯನ ಮಗ ಅಯ್ಯು, ಅಂಬರೀಷ್ ಅಭಿನಯದ ಚಕ್ರವ್ಯೂಹ ಸೇರಿದಂತೆ ಹಲವಾರು ಚಿತ್ರಗಳನ್ನು ನಿರ್ಮಿಸಿತ್ತು.

ಆ ಬಳಿಕ ನಡೆದದ್ದು ಒಂದು ಇತಿಹಾಸ. ಈಶ್ವರಿ ಸಂಸ್ಥೆಯಲ್ಲಿ ತಯಾರಾದ ಸಿನಿಮಾಗಳು ಸೂಪರ್‌ ಹಿಟ್‌ ಆದವು. ಹಲವಾರು ಪ್ರಶಸ್ತಿ ಪುರಸ್ಕಾರಗಳು ಬಂದವು. ಚಿತ್ರರಂಗಕ್ಕೆ ಹಲವಾರು ನಟ, ನಟಿಯರು, ತಂತ್ರಜ್ಞರನ್ನ ಪರಿಚಯಿಸಿದ ಕೀರ್ತಿ ಈ ಈಶ್ವರಿ ಸಂಸ್ಥೆಗೆ ಸಲ್ಲುತ್ತದೆ.

ಹಾಗೆಯೇ 90ರ ದಶಕದ ಸಂಸ್ಥೆಯ ಹೆಗ್ಗಳಿಕೆ ಅವರ ಪುತ್ರ ರವಿಚಂದ್ರನ್‌ ಅವರಿಗೂ ಸಲುತ್ತದೆ. ಪ್ರೇಮಲೋಕ, ರಣಧೀರ, ಪುಟ್ನಂಜ, ರಾಮಾಚಾರಿ ಸೇರಿದಂತೆ ಹಲವು ಹಿಟ್‌ ಚಿತ್ರಗಳನ್ನು ಕೊಟ್ಟ ಹೆಮ್ಮೆ ರವಿಚಂದ್ರನ್‌ ಅವರದು.

ಬರೀ ನಿರ್ಮಾಪಕರಾಗಿ ಅಲ್ಲದೆ ನಿರ್ದೇಶಕರಾಗಿ ನಟರಾಗಿಯೂ ರವಿಚಂದ್ರನ್‌ ಬೆಳ್ಳಿ ಪರದೆ ಮೇಲೆ ಮಿಂಚುತ್ತಾ , ಇಡೀ ಭಾರತೀಯ ಚಿತ್ರರಂಗವೇ ಒಮ್ಮೆ ತಿರುಗುವಂತೆ ಮಾಡಿದಂತಹ ಕೀರ್ತಿ ಇವರಿಗೆ ಸಲ್ಲುತ್ತದೆ.

ತಂದೆ ವೀರಸ್ವಾಮಿ ಹುಟ್ಟುಹಾಕಿದ ಈಶ್ವರಿ ಸಂಸ್ಥೆಯನ್ನು ಈಗಲೂ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಈಗ ಅವರ ಜೊತೆ ಪುತ್ರರಾದ ಮನುರಂಜನ್‌ ಹಾಗೂ ವಿಕ್ರಮ್‌ ಕೂಡ ಇದ್ದಾರೆ. ಈಶ್ವರಿ ನಿರ್ಮಾಣ ಸಂಸ್ಥೆ ಈಗ 50 ವರ್ಷ ಸಂಭ್ರಮದಲ್ಲಿದೆ.

ಕೊರೋನಾ ಕಾಟ ಮುಗಿಯುತ್ತಿದ್ದಂತೆ ತಮ್ಮ ಈಶ್ವರಿ ಸಂಸ್ಥೆಯ 50 ನೇ ವರ್ಷದ ಸಂಭ್ರಮದ ಕಾರ್ಯಕ್ರಮದ ರೂಪರೇಷಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕ್ರೇಜಿಸ್ಟಾರ್ ವಿ .ರವಿಚಂದ್ರನ್ ನೀಡಬಹುದು ಎನ್ನಲಾಗುತ್ತಿದೆ.

Share This With Your Friends

Related posts