Bollywood Cinisuddi Fresh Cini News 

ಏಕ್ ಥಾ ಟೈಗರ್-3ನಲ್ಲೂ ಸಲ್ಲುಗೆ ಕತ್ರಿನಾ ಜೋಡಿ

ಸೂಪರ್‍ಸ್ಟಾರ್‍ಗಳಾದ ಸಲ್ಮಾನ್ ಖಾನ್, ಕತ್ರಿನಾ ಕೈಫ್ ಮತ್ತು ಸ್ಟಾರ್ ಡೈರೆಕ್ಟರ್ ಅಲಿ ಅಬ್ಬಾಸ್ ಝಫರ್ ಮತ್ತೊಂದು ಬಿಗ್ ಪ್ರಾಜೆಕ್ಟ್‍ನಲ್ಲಿ ಮತ್ತೆ ಒಗ್ಗೂಡಲು ಸಜ್ಞಾಗುತ್ತಿದ್ದಾರೆ. ಸಲ್ಮಾನ್ ಮತ್ತು ಕ್ಯಾಟ್ ನಟನೆಯಲ್ಲಿ ಅಬ್ಬಾಸ್ ಆಕ್ಷನ್ ಕಟ್ ಹೇಳಿರುವ ಈ ವರ್ಷದ ಬಹು ನಿರೀಕ್ಷಿತ ಸಿನಿಮಾ ಭರತ್ ಜೂನ್ 5ರಂದು ತೆರೆಕಾಣುತ್ತಿದೆ.

ಇದಕ್ಕೆ ಮುನ್ನ ಸಲ್ಲು ಮತ್ತು ಅಬ್ಬಾಸ್ ಮತ್ತೊಂದು ದೊಡ್ಡ ಪ್ರಾಜೆಕ್ಟ್‍ನಲ್ಲಿ ಫೈನಲ್ ಮಾಡಲಿದ್ದಾರೆ. ಇದು ಏಕ್ ಥಾ ಟೈಗರ್ ಮೂರನೇ ಭಾಗ ಏಕ್ ಥಾ ಟೈಗರ್, ಟೈಗರ್ ಜಿಂದಾ ಹೈ(ಏಕ್ ಥಾ ಟೈಗರ್ ಎರಡನೇ ಭಾಗ)ಸುಲ್ತಾನ್ ಮತ್ತು ಟೈಗರ್ ಜಿಂದಾ ಹೈ ಸೂಪರ್‍ಹಿಟ್ ಸಿನಿಮಾಗಳಲ್ಲಿ ಇವರಿಬ್ಬರ ಕೆಮಿಸ್ಟ್ರಿ ವರ್ಕ್ ಔಟ್ ಆಗಿತ್ತು.

ಈಗ ಏಕ್ ಥಾ ಟೈಗರ್-3ನಲ್ಲೂ ಅದನ್ನು ಮುಂದುವರಿಸಲು ಈ ಜೋಡಿ ನಿರ್ಧರಿಸಿದೆ. ಈ ಪ್ರಾಜೆಕ್ಟ್‍ನಲ್ಲೂ ಸಲ್ಲುಗೆ ಕ್ಯಾಟ್ ಜೋಡಿಯಾಗುವುದು ಬಹುತೇಕ ಖಚಿತ. ಮೊದಲ ಎರಡು ಭಾಗಗಳಲ್ಲೂ ಸಲ್ಮಾನ್ ಮತ್ತು ಕತ್ರಿನಾ ಮಿಂಚಿದ್ದರು.ಮೂರನೆ ಭಾಗ ಈಗ ಸ್ಕ್ರಿಫ್ ಸಿದ್ಧತೆ ಹಂತದಲ್ಲಿದೆ.

ಮೊದಲ ಎರಡು ಭಾಗಗಳಿಗಿಂತ ಪವರ್‍ಫುಲ್ ಸಬ್ಜೆಕ್ಟ್ ಇದರಲ್ಲಿ ಇರಲಿದೆ. ಈ ಚಿತ್ರದ ಒನ್‍ಲೈನ್ ಸ್ಟೋರಿ ಕೇಳಿ ಸಲ್ಲು ಮಿಂಯಾ ಖುಷ್ ಆಗಿದ್ದಾನೆ. ಉಳಿದ ಪಾತ್ರಗಳ ಬಗ್ಗೆ ಸದ್ಯಕ್ಕೆ ಯಾವುದೇ ನಿರ್ಧಾರವಾಗಿಲ್ಲ.ಈ ಮೂವರ ಜೋಡಿ ಹಿಂದಿನ ಸಿನಿಮಾಗಳಲ್ಲಿ ವರ್ಕ್ ಔಟ್ ಆಗಿರುವುದರಿಂದ ಮೂರನೇ ಭಾಗವೂ ಯಶಸ್ಸಿನ ಆಕ್ಷನ್ ರಿಪ್ಲೈಆಗಲಿದೆ ಎಂಬ ಭರವಸೆಯೂ ಮೂಡಿದೆ.

Share This With Your Friends

Related posts