ಎಜುಕೇಷನ್ ಆ್ಯಪ್ ಗೆ ರಮೇಶ್ ಅರವಿಂದ್ ಬ್ರ್ಯಾಂಡ್ ಅಂಬಾಸಿಡರ್
ಅಂಧಕಾರವನ್ನು ಓಡಿಸುವ ಜ್ಞಾನ ಜ್ಯೋತಿಯನ್ನು ಬೆಳಗಿಸುವ ಅನ್ನೋ ಮಾತಿನಂತೆ ಪ್ರತಿಯೊಬ್ಬರಿಗೂ ವಿದ್ಯಾಭ್ಯಾಸ ಬಹಳ ಮುಖ್ಯ. ಈಗ ವಿದ್ವತ್ ಇನೊವೇಟಿವ್ ಸಲ್ಯೂಷನ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ವಿದ್ವತ್ ಆ್ಯಪ್ ಅನ್ನು ಲಾಂಚ್ ಮಾಡುತ್ತಿದ್ದು, ಈ ಆ್ಯಪ್ ನ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದರೆ ಸಹಜ ಅಭಿನಯ ನಟ ನಮ್ಮ ಸ್ಯಾಂಡಲ್ವುಡ್ ನ ಎವರ್ಗ್ರೀನ್ ಹೀರೋ ರಮೇಶ್ ಅರವಿಂದ್.
ದಶಕಗಳಿಂದ್ಲೂ ನಟ, ನಿರ್ಮಾಪಕ, ನಿರ್ದೇಶಕರಾಗಿ, ಕನ್ನಡ ಚಿತ್ರರಂಗ ಸೇರಿದಂತೆ ಹಲವು ಭಾಷೆಗಳಲ್ಲಿ ತಮ್ಮ ಛಾಪನ್ನು ಮೂಡಿಸಿರುವ ರಮೇಶ್ ಅರವಿಂದ್ ಜಾಹಿರಾತು ಕ್ಷೇತ್ರದಲ್ಲೂ ಗಮನ ಸೆಳೆದಿದ್ದಾರೆ.
ಈಗ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವುದರ ಜೊತೆಗೆ ವಿದ್ಯಾಭ್ಯಾಸದಲ್ಲಿ ಗಟ್ಟಿತನ ಹೊಂದಲು ವಿದ್ಯುತ್ ಆ್ಯಪ್ ಗೆ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ರಮೇಶ್ ಅರವಿಂದ್ ವಿದ್ವತ್ ಆ್ಯಪ್ ಬಿಡುಗಡೆ ಮಾಡಿದ್ದು, ಪ್ಲೇ ಸ್ಟೋರ್ ನಲ್ಲಿ ದೊರೆಯುತ್ತಿದೆ.
ಒಂದನೇ ತರಗತಿಯಿಂದ ಹತ್ತನೇ ತರಗತಿಯ ಎಲ್ಲಾ ವಿಷಯಗಳ ಪಾಠಗಳೂ ಈ ಆ್ಯಪ್ ನಲ್ಲಿ ದೊರೆಯುತ್ತಿದ್ದು, ಕನ್ನಡ, ಉರ್ದು, ಇಂಗ್ಲೀಷ್ ಭಾಷೆಯಲ್ಲಿ ಎಲ್ಲಾ ಪಂಠ್ಯಂತರ ವಿಷಯಗಳನ್ನ ಪಡೆಯಬಹುದು. ಜೊತೆಗೆ 3ಡಿ ಮತ್ತು 2ಡಿ ತಂತ್ರಜ್ಞಾನದಲ್ಲಿ ದೃಶ್ಯ ಮಾಧ್ಯಮದ ರೂಪದಲ್ಲಿಯೂ ಕಲಿಕೆಗೆ ಅವಕಾಷವಿದೆ.
ಅಲ್ಲದೇ ಶಿಕ್ಷಣಕ್ಕೆ ಸಂಬಂಧಿಸಿದ ಮನೋರಂಜನಾ ಚಟುವಟಿಕೆಗಳೂ ಈ ಆ್ಯಪ್ ನಲ್ಲಿ ಸೌಲಭ್ಯವಿದೆ. ಒಟ್ನಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಅನುಕೂಲವಾಗುವಂತೆ ಬಂದಿರುವ ಈ ಆ್ಯಪ್ ಪ್ರತಿಭೆಗಳ ಭವಿಷ್ಯಕ್ಕೆ ಹೊಸ ನಾಂದಿಯನ್ನು ಹಾಡಲಿದೆ ಎನ್ನಬಹುದು.
ಕಲಿಕೆಯ ಹೊಸ ವಿಧಾನವನ್ನು ತಂದಿರುವವರು ರೋಹಿತ್ .ಎಂ .ಪಾಟೀಲ್ (ಎಂಡಿ ಹಾಗೂ ಸಿಇಓ) ವಿದ್ವತ್ ಇನ್ನೋವೇಟಿವ್ ಸೆಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಮುಖ್ಯಸ್ಥರು.ಇದೇ ಸಂದರ್ಭದಲ್ಲಿ ಸಂಸ್ಥೆಯ ಸ್ನೇಹಿತರು ಹಾಜರಿದ್ದರು.