Cinisuddi Fresh Cini News 

‘ಸಲಗ’ದ ಯಶಸ್ಸಿಗೆ ದೇವರ ಮೊರೆಹೋದ ದುನಿಯಾ ವಿಜಿ

ನಟ ದುನಿಯಾ ವಿಜಯ್ ಪರಿವಾರ ಸಮೇತ ಸಂಡೂರು ತಾಲೂಕಿನ ಜೋಗದ ದೇವರಕೊಳ್ಳದ ಅನ್ನಪೂರ್ಣೇಶ್ವರಿ ದೇವಸ್ಥಾನ ಹಾಗೂ ಮಠಕ್ಕೆ ಭೇಟಿಕೊಟ್ಟು ಮಠದ ಮಹಾಸ್ವಾಮಿಗಳ (ಜೋಗದ ತಾತ) ದರ್ಶನ ಪಡೆದುಕೊಂಡಿದ್ದಾರೆ.

ಪತ್ನಿ ಕೀರ್ತಿಗೌಡ, ಪುತ್ರ ಸಾಮ್ರಾಟ್ ಹಾಗೂ ಸ್ನೆಹಿತರೊಂದಿಗೆ ಮಠಕ್ಕೆ ಭೇಟಿ ನೀಡಿದ ಅವರು, ಬಿಡುಗಡೆಗೆ ಸಿದ್ಧವಾಗಿರುವ ಸಲಗ ಚಿತ್ರದ ಯಶ್ವಸಿಗಾಗಿ ಪೂಜೆ ಸಲ್ಲಿಸಿ ಶ್ರೀಗಳಿಂದ ಆಶೀರ್ವಾದ ಪಡೆದುಕೊಂಡಿದ್ದಾರೆ.

ಟಗರು ಖ್ಯಾತಿಯ ಕೆ.ಪಿ. ಶ್ರೀಕಾಂತ್ ಅವರ ನಿರ್ಮಾಣದ ಬಹನಿರೀಕ್ಷಿತ ಚಿತ್ರ ಎನಿಸಿಕೊಂಡಿರುವ ಸಲಗ ಈಗಾಗಲೇ ತೆರೆಗೆ ಬರಲು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಕೊರೋನಾ ವೈರಸ್ ಕಾರಣದಿಂದ ಸಿನಿಮಾ ತೆರೆ ಕಾಣುವುದು ವಿಳಂಬವಾಗಿದೆ.

ಈ ಹಿನ್ನೆಲೆಯಲ್ಲಿ ಮಠಕ್ಕೆ ಭೇಟಿ ನೀಡಿದ ದುನಿಯಾ ವಿಜಿ, ಶ್ರೀಅನ್ನಪೂರ್ಣೇಶ್ವರಿ ದೇವಿ ಹಾಗೂ ಶಿವನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ತನ್ನ ಕುಟುಂಬ ಹಾಗೂ ಸ್ನೇಹಿತರ ಜೊತೆ ದುನಿಯಾ ವಿಜಿ ಶ್ರೀಮಠದಲ್ಲಿ ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಕಾಲ ತಂಗಿದ್ದರು ಈ ಸಂದರ್ಭದಲ್ಲಿ ದುನಿಯಾ ವಿಜಿ ಅವರನ್ನು ಮಠದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ದುನಿಯಾ ವಿಜಯï, ಬಳ್ಳಾರಿ ಎಂದರೆ ಬರೀ ಬಿಸಿಲು ನಾಡು ಎಂದೆಷ್ಟೆ ನಾನು ತಿಳಿದಿ ದ್ದೆ ಬಳ್ಳಾರಿಯಲ್ಲಿ ಕೂಡ ಪ್ರಕೃತಿಯ ಸೊಬಗನ್ನು ಕಣ್ತುಂಬಿಕೊಳ್ಳಬಹುದು ಎಂದು ನಾನು ಈ ಮಠಕ್ಕೆ ಭೇಟಿ ನೀಡಿದಾಗಲೇ ತಿಳಿಯಿತು.

ಪ್ರಕೃತಿಯ ಮಡಿಲಲ್ಲಿರುವ ಅನ್ನಪೂರ್ಣೇಶ್ವರಿ ಮಠದ ಬಗ್ಗೆ ನಾನು ಬಹಳ ಕೇಳಿದ್ದೆ ಈ ಸ್ಥಳಕ್ಕೆ ಭೇಟಿ ನೀಡಬೇಕು ಎಂದು ತುಂಬಾ ದಿನದಿಂದ ಕಾಯುತ್ತಿದ್ದೆ , ಈಗ ಇಲ್ಲಿಗೆ ಬರಲು ಅವಕಾಶ ಸಿಕ್ಕಿದೆ. ಮತ್ತೆ ಮತ್ತೆ ಬರಬೇಕು ಎನ್ನುಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

Share This With Your Friends

Related posts