ರಾಜಣ್ಣನ ಹುಟ್ಟುಹಬ್ಬಕ್ಕೆ ದಿವ್ಯಾಂಗ ಮಕ್ಕಳಿಗೆ ಊಟ ಹಾಗೂ ಮಾಸ್ಕ್ ವಿತರಣೆ
ಕನ್ನಡಿಗರ ಅಭಿಮಾನಿ ದೇವರು ವರನಟ ಡಾ. ರಾಜ್ ಕುಮಾರ್ ರವರ 92 ವರ್ಷಗಳ ಹುಟ್ಟುಹಬ್ಬ ಆಚರಣೆಯನ್ನು ಅಂಗವಾಗಿ ಸ್ನೇಹದೀಪದ ಸಂಸ್ಥೆಯ ದಿವ್ಯಂಗ ಮಕ್ಕಳೊಂದಿಗೆ ಊಟ ಹಾಗೂ ಮಾಸ್ಕ್ ಗಳನ್ನು ವಿತರಣೆಯನ್ನು ಶ್ರೀಮತಿ ತಾರಾಅನೂರಾಧ ಹಾಗೂ ರವಿಣ್ಣನವರು ಮಾಡಿದರು.
ಈಗಿನ ಎಲ್ಲಾ ನಿಬ್ಬಂಧನೆಗಳನ್ನು ಪಾಲಿಸಿ, ಅಣ್ಣ ಅವರ ಹುಟ್ಟುಹಬ್ಬ ಅರ್ಥಪೂರ್ಣವಾಗಿ ಆಚರಣೆ ಮಾಡಿದ್ದು ಮೆಚ್ಚುವಂತಹ ವಿಚಾರ. ಮಾನವೀಯತೆಯಿಂದ ಮಾಡಿರುವ ಈ ಒಂದು ಕಾರ್ಯಕ್ರಮ ಅಣ್ಣಾವ್ರ ಹುಟ್ಟುಹಬ್ಬಕ್ಕೆ ಶೋಭೆ ತರುವಂತಾಗಿದೆ.