Cinisuddi Fresh Cini News 

“ಡಿಆರ್ 56” ಚಿತ್ರದ ಟೀಸರ್ ಹವಾ

ಹರಿಹರ ಪಿಚ್ಚರ್ಸ್ ಹೆಮ್ಮೆಯಿಂದ ನಿರ್ಮಿಸಿ, ನಾಯಕ ನಟ “ಪಿಆರ್” ಹಾಗೂ ನಾಯಕ ನಟಿ “ಪ್ರಿಯಾಮಣಿ” ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ “ಡಿಆರ್ 56” ಚಿತ್ರದ ಟೀಸರ್ ಅನ್ನು ನಾಯಕ ನಟ “ಪಿಆರ್” ಅವರ ಹುಟ್ಟುಹಬ್ಬದ ಪ್ರಯುಕ್ತ ಆನಂದ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ನವೆಂಬರ್ 11 ನೇ ತಾರೀಕು ರಿಲೀಸ್ ಮಾಡಲಾಯಿತು.

ಈ ಚಿತ್ರ ಕನ್ನಡ ಹಾಗೂ ತಮಿಳ್ ನಲ್ಲಿ ಏಕಕಾಲದಲ್ಲಿ ಚಿತ್ರೀಕರಣ ಮಾಡಲಾಗಿದ್ದು , ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಂಚೂಣಿಯಲ್ಲಿ ನಡಿಯುತ್ತಿದು ಸದ್ಯದಲ್ಲೇ ತೆರೆಗೆ ಅಪ್ಪಳಿಸಲು ಚಿತ್ರತಂಡ ಕಾಯುತ್ತಿದೆ.

ಇದೊಂದು ಸೈನ್ಸ್ ಫಿಕ್ಷನ್ ಆಕ್ಷನ್ ಥ್ರಿಲಲರ್ ಚಿತ್ರವಾಗಿದ್ದು ಸಮಾಜದಲ್ಲಿ ನಡೆಯುತ್ತಿದ್ದ, ನಡೆಯುತ್ತಿರುವ, ಮುಂದೆಯು ನಡೆಯುವವಂಚನೆಯನ್ನು ಜನರಿಗೆ ಮನದಟ್ಟು ಮಾಡಿಸಲು ಹೊರಟಿರುವ ಚಿತ್ರ. ಕಥೆ ಹಾಗೂ ಚಿತ್ರಕಥೆ ನಾಯಕನಟ “ಪಿಆರ್” ಅವರೆ ರೂಪಿಸಿದ್ದು ನಿರ್ದೇಶನದ ಜವಾಬ್ದಾರಿಯನ್ನು ರಾಜೇಶ್ ಆನಂದ ಲೀಲಾ ಅವರು ನಿರ್ವಹಿಸಿದ್ದಾರೆ.

ರಾಕೇಶ್ .ಸಿ. ತಿಲಕ್ ಅವರ ಛಾಯಾಗ್ರಹಣ ನೋಬಿನ್ ಪಾಲ್ ಅವರ ಸಂಗೀತ ಹಾಗೂ ಹಿನ್ನೆಲೆ ಸಂಗೀತ ವಿಶ್ವ .ಎನ್. ಎಂ ಅವರ ಸಂಕಲನ ಶಂಕರ್ ರಾಮನ್ ಅವರ ಸಂಭಾಷಣೆ ಡಾ!! ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ ರಾಷ್ಟ್ರಪ್ರಶಸ್ತಿ ವಿಜೇತ “ವಿಕ್ರಂ ಮೋರ್” ಅವರ ಸಾಹಸ ಕಾರ್ಯಕಾರಿ ನಿರ್ಮಾಪಕ “ಶ್ರೀಕಾಂತ್ ಕಶ್ಯಪ್” ಅವರ ನಿರ್ವಹಣೆ ಅಂತ “ಡಿಅರ್ 56″ಸಿನಿಮಾಗೆ ತಂತ್ರಜ್ಞರ ದೊಡ್ಡ ತಂಡವೇ ಜೊತೆಯಾಗಿದೆ.

Related posts