Cinisuddi Fresh Cini News 

ಸಾಲು ಸಾಲು ಸಿನಿಮಾಗಳಲ್ಲಿ ಡಾಲಿ ಧನಂಜಯ್ ಹವಾ

ಟಗರು ಖ್ಯಾತಿಯ ನಟ ಡಾಲಿ ಧನಂಜಯ್ ಈಗಾಗಲೇ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರಗಳ ಮೂಲಕ ವಿಭಿನ್ನ ಪಾತ್ರಗಳಲ್ಲಿ ಮಿಂಚಿದ್ದಾರೆ. ಧನಂಜಯ್ ಅವರ ಕೈಯಲ್ಲಿ ಈಗಾಗಲೇ ಹಲವು ಚಿತ್ರಗಳಿದ್ದು, ಇದೀಗ ಅವರು ಮತ್ತೊಂದು ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ. ರವಿಚಂದ್ರನ್ ಪುತ್ರ ವಿಕ್ರಮ್ ರವಿಚಂದ್ರನ್ ನಾಯಕನಾಗಿ ಅಭಿಯನಯಿಸಿದ ಚೊಚ್ಚಲ ಚಿತ್ರ ತ್ರಿವಿಕ್ರಮ ಸಿನಿಮಾವನ್ನು ನಿರ್ಮಿಸುತ್ತಿರುವ ಗೌರಿ ಎಂಟರ್‍ಟೈನರ್ಸ್‍ನೊಂದಿಗೆ ಧನಂಜಯ್ ಜೊತೆಗೂಡಿದ್ದಾರೆ.

ಈ ವಿಷಯವನ್ನು ಸ್ಪಷ್ಪಪಡಿಸಿರುವ ಧನಂಜಯï, ಆ ನಿರ್ಮಾಪಕರು ನನಗೆ ಹಲವು ವರ್ಷಗಳಿಂದ ಗೊತ್ತಿದ್ದು, ಹೊಸ ಚಿತ್ರದ ಮೂಲಕ ಅವರೊಂದಿಗೆ ಕೆಲಸದಲ್ಲೂ ಜೊತೆಯಾಗುತ್ತಿರುವೆ ಎಂದು ತಿಳಿಸಿದ್ದಾರೆ. ನಿರ್ಮಾಪಕರಾದ ಸೋಮಣ್ಣ ಮತ್ತು ಸುರೇಶ್ ಅವರೊಂದಿಗೆ ಇದೇ ಮೊದಲ ಬಾರಿಗೆ ನಾನು ಚಿತ್ರ ಮಾಡುತ್ತಿದ್ದು, ಮುಂದಿನ ವರ್ಷದ ಆರಂಭದಲ್ಲಿ ಈ ಚಿತ್ರ ಸೆಟ್ಟೇರಲಿದೆ.

ಇದೊಂದು ದೊಡ್ಡ ಬಜೆಟ್ ಹೊಂದಿರುವ ಚಿತ್ರವಾಗಿದ್ದು, ಸದ್ಯ ಚಿತ್ರದ ಕಥೆಯನ್ನು ಅಂತಿಮಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ನಟ ಧನಂಜಯ್ ಅವರು ಹೇಳಿದ್ದಾರೆ.

ಧನಂಜಯ್ ಪ್ರಸ್ತುತ ಬಡವ ರಾಸ್ಕಲ್ ಎಂಬ ಚಿತ್ರದ ಕೆಲಸದಲ್ಲಿ ತೊಡಗಿಕೊಂಡಿದ್ದು, ಚಿತ್ರದ ಡಬ್ಬಿಂಗ್ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಮಧ್ಯೆ ಬೆಂಗಳೂರು ಡಾನ್ ಎಂ.ಪಿ. ಜಯರಾಜ್ ಪಾತ್ರದ ಕಡೆಯೂ ಅವರು ಗಮನ ಹರಿಸಿದ್ದಾರೆ.

ಈ ಚಿತ್ರವು ಎರಡು ಭಾಗಗಳಾಗಿ ಹೊರಬರಲಿದ್ದು, ಪತ್ರಕರ್ತ ಅಗ್ನಿ ಶ್ರೀಧರ್ ಅವರು ಈ ಚಿತ್ರದ ಕಥೆ ಹಾಗೂ ಸಂಭಾಷಣೆಗಳನ್ನು ಬರೆಯುತ್ತಿದ್ದು, ಚಿತ್ರಕ್ಕೆ ಶೂನ್ಯಾ ಎಂಬುವವರು ಆಕ್ಷನ್ ಕಟ್ ಹೇಳಲಿದ್ದಾರೆ.

ಸಂತೋಷ್ ಆನಂದ್‍ರಾಮ್ ಅವರ ಯುವರತ್ನ ಚಿತ್ರದಲ್ಲೂ ಪುನೀತ್ ರಾಜ್‍ಕುಮಾರ್ ಅವರ ಜೊತೆಗೆ ಧನಂಜಯ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಲ್ಲದೆ ಸಲಗ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ದುನಿಯಾ ವಿಜಯ್ ಎದುರಿಸಿದ್ದಾರೆ.

ಇನ್ನು ನಂದಕಿಶೋರ್ ಅವರ ನಿರ್ದೇಶನದ ಧ್ರವ ಸಜರ್ ನಾಯಕನಾಗಿ ಅಭಿನಯಿಸಿರುವ ಪೊಗರು ಚಿತ್ರದಲ್ಲೂ ಧನಂಜಯ್ ತನ್ನ ಪೊಗರು, ಖದರ್ ಪ್ರದರ್ಶಿಸಲಿದ್ದಾರೆ.

ಇದರ ಜೊತೆಗೆ ಡಾಲಿ ಚಿತ್ರದ ಶೇ.25ರಷ್ಟು ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಕನ್ನಡ ಚಿತ್ರವಲ್ಲದೆ ತೆಲುಗಿನಲ್ಲಿ ಅಲ್ಲು ಅರ್ಜುನ್ ಅವರ ಜೊತೆಗೆ ಪುಷ್ಪ ಎನ್ನುವ ಚಿತ್ರದಲ್ಲೂ ಧನಂಜಯ್ ಅಭಿನಯಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

Related posts