Cinisuddi Fresh Cini News 

ವೈವಾಹಿಕ ಜೀವನಕ್ಕೆ ಕಾಲಿಟ್ಟ ನಿರ್ದೇಶಕಿ ಸುಮನಾ ಕಿತ್ತೂರು

ಬೆಳ್ಳಿ ಪರದೆಯ ಮೇಲೆ ಮಹಿಳಾ ನಿರ್ದೇಶಕಿಯರ ಸಂಖ್ಯೆ ಬಹಳ ಕಡಿಮೆ. ಆದರೆ ವಿಭಿನ್ನ ಕಥಾವಸ್ತುವನ್ನು ಆಯ್ಕೆ ಮಾಡುವುದರ ಮೂಲಕ ಗಂಡೆದೆಯ ಹೆಣ್ಣುಮಗಳಾಗಿ ಹಿರಿಯ ಪತ್ರಕರ್ತ ಅಗ್ನಿ ಶ್ರೀಧರ್ ಗರಡಿಯಲ್ಲಿ ಬೆಳೆದು, ಆ ದಿನಗಳು… ಎಂಬ ಭೂಗತ ಲೋಕದ ಕಥಾ ವಸ್ತುವಿನ ಚಿತ್ರದಲ್ಲಿ ಕೆಲಸ ಮಾಡುವ ಮೂಲಕ ಸಿನಿಮಾ ರಂಗದ ಬಗ್ಗೆ ಆಸಕ್ತಿ ಬಳಸಿಕೊಂಡು, ತದನಂತರ ಸ್ಲಂ ಬಾಲ ಚಿತ್ರದ ಮೂಲಕ ಸ್ವಾತಂತ್ರ್ಯ ನಿರ್ದೇಶಕಿಯಾಗಿ ಗಮನ ಸೆಳೆದ ಸುಮನಾ ಕಳ್ಳರ ಸಂತೆ, ಎದೆಗಾರಿಕೆ ಹಾಗೂ ಕಿರಗೂರಿನ ಗಯ್ಯಾಳಿಗಳ ಸಾರಥ್ಯವನ್ನು ವಹಿಸಿಕೊಂಡು ಯಶಸ್ವಿ ನಿರ್ದೇಶಕ ಎಂದು ಗುರುತಿಸಿಕೊಂಡರು.

ಚಿತ್ರರಂಗದಿಂದ ಸ್ವಲ್ಪ ಗ್ಯಾಪ್ ಆಯಿತು ಅನ್ನುವಷ್ಟರಲ್ಲಿ ಫ್ರೆಂಚ್ ಸಿನಿಮಾವೊಂದನ್ನು ನಿರ್ದೇಶನ ಮಾಡಲು ಸಿದ್ಧತೆ ನಡೆಯುತ್ತಿದೆ ಎಂಬ ಮಾತು ಕೇಳಿಬಂದಿದ್ದು, ಇದರ ನಡುವೆ ಕಳೆದ ಏಪ್ರಿಲ್ 17 ರಂದು ಶಿವಮೊಗ್ಗ ಮೂಲದ ಸಾಫ್ಟ್ ವೇರ್ ಇಂಜಿನಿಯರ್ ಶ್ರೀನಿವಾಸ್ ಎಂಬುವರನ್ನು ಮದುವೆ ಆಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮೊದಲಿನಿಂದಲೂ ಶ್ರೀನಿವಾಸ್ ಪರಿಚಿತರಾಗಿದ್ದು ನಂತರ ಪ್ರೇಮವಾಗಿ, ಮನೆಯವರ ಒಪ್ಪಿಗೆಯೊoದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಸುಮಾರು ಮೂರು ತಿಂಗಳ ಹಿಂದೆ ನಿಗದಿಯಾಗಿದ್ದ ದಿನಾಂಕದಂದೇ ಮದುವೆ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದು , ಕೊರೋನಾ ಸಂಕಷ್ಟದಿಂದ ಮದುವೆಗೆ ಎರಡೂ ಕುಟುಂಬದ ಬೆರಳೆಣಿಕೆಯಷ್ಟು ಮಂದಿ ಮಾತ್ರ ಇರಬೇಕಾಗಿತ್ತು.

ಆದರೆ ನಮ್ಮ ಆಸೆ ಶಿವಮೊಗ್ಗದಲ್ಲಿ ಮದುವೆಯಾಗಬೇಕಿತ್ತು, ಕಾರಣಾಂತರದಿಂದ ಪುದುಚೇರಿಯಲ್ಲಿ ಸರಳ ರೀತಿಯಲ್ಲಿ ನಮ್ಮ ಮದುವೆ ನಡೆಯಿತು. ಬಹಳಷ್ಟು ತಂದೆತಾಯಂದಿರು ಮಕ್ಕಳ ಮದುವೆಗೆ ಹಣ ಕೂಡಿಟ್ಟು ಪರದಾಡುತ್ತಾರೆ.

ಆದರೆ ಈ ಕೊರೋನಾ ಕಾರಣದಿಂದ ಮದುವೆ ಎಷ್ಟು ಸರಳವಾಗಿ ನಡೆಯುತ್ತಿದೆ ಎಂಬುದನ್ನು ಗಮನಿಸಿದರೆ ಇದು ಒಂದು ರೀತಿ ಒಳ್ಳೆಯ ಬೆಳವಣಿಗೆ ಅನ್ಸತ್ತೆ ಎನ್ನುತ್ತಾ, ನನ್ನ ಪತಿ ಬಹಳ ಸರಳ ಜೀವಿ, ಸ್ನೇಹದ ಸ್ವಭಾವದವರು ನನ್ನ ಅತ್ತೆಯವರು ನನಗೆ ತುಂಬ ಅಚ್ಚುಮೆಚ್ಚು , ಒಂದು ಸುಂದರ ಕುಟುಂಬದೊಂದಿಗೆ ಬೆರತ ಸಂತೋಷ ನನಗಿದೆ ಎಂದು ನಿರ್ದೇಶಕಿ ಸುಮನಾ ಕಿತ್ತೂರು ಮದುವೆ ವಿಚಾರ ಬಗ್ಗೆ ಹೇಳಿಕೊಂಡರು.

ಬಹಳ ಚಿಕ್ಕ ವಯಸ್ಸಿನಲ್ಲೇ ಹಲವಾರು ಏರಿಳಿತಗಳನ್ನು ಜೀವನದಲ್ಲಿ ಎದುರಿಸಿ ಧೈರ್ಯವಾಗಿ ಮುನ್ನಡೆದ ನಿರ್ದೇಶಕಿ ಸುಮನಾ ಕಿತ್ತೂರು ರವರ ವೈವಾಹಿಕ ಜೀವನ ಸುಖಕರವಾಗಿರಲಿ ಎಂಬುದೇ ನಮ್ಮ ಆಶಯ…

Share This With Your Friends

Related posts