Cini Gossips Cinisuddi Fresh Cini News 

ಅನ್ನಪೂರ್ಣರನ್ನು ವರಿಸಿದ ನಿರ್ದೇಶಕ ಎ.ಪಿ.ಅರ್ಜುನ್

ಕೊರೋನಾ ಹಾವಳಿಯ ನಡುವೆ ಸಾಮಾಜಿಕ ಅಂತರ ಕಾಯ್ದುಕೊಂಡು ಚಲನಚಿತ್ರ ನಿರ್ದೇಶಕ ಎ. ಪಿ. ಅರ್ಜುನ್ ಅನ್ನಪೂರ್ಣ ರನ್ನು ವಿವಾಹ ಆಗಿದ್ದಾರೆ. 5 ವರ್ಷದ ನಿರಂತರದ ಪ್ರೇಮದ ಫಲವಾಗಿ ಇಂದು ನಾಗರಬಾವಿಯಲ್ಲಿರುವ ಅರ್ಜುನ್ ಅವರ ನಿವಾಸದ ಮುಂದೆ ಹಸಿರು ತೋರಣಗಳ ನಡುವೆ ಕುಟುಂಬಸ್ಥರು, ಸ್ನೇಹಿತರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಚಲನಚಿತ್ರಗಳಿಗೆ ಚಿತ್ರಕಥೆ , ಸಾಹಿತ್ಯ ಬರೆಯುತ್ತಾ ಭದ್ರ ನೆಲೆಯನ್ನು ಕಂಡಂತ ಅರ್ಜುನ್ ಅಂಬಾರಿ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಯಶಸ್ಸನ್ನು ಕಂಡರು.

ತದನಂತರ ಅದ್ಧೂರಿ, ರಾಟೆ, ಹಾಗೂ ದರ್ಶನ್ ಅಭಿನಯದ ಐರಾವತ ಚಿತ್ರವನ್ನು ನಿರ್ದೇಶಿಸಿ , ಇತ್ತೀಚೆಗಷ್ಟೇ ಕಿಸ್ ಎಂಬ ಯುವ ಜೋಡಿಯ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿ ಸೈ ಎನಿಸಿಕೊಂಡಿದ್ದಾರೆ. ಈ ಯಶಸ್ವಿ ನಿರ್ದೇಶಕನ ಮದುವೆ ಸಮಾರಂಭಕ್ಕೆ ಚಿತ್ರ ನಟರಾದ ನೀನಾಸಂ ಸತೀಶ್ ,

ಧ್ರುವ ಸರ್ಜಾ , ನೆನಪಿರಲಿ ಪ್ರೇಮ್ , ವಿರಾಟ್ ನಿರ್ದೇಶಕರುಗಳಾದ ತರುಣ್ , ಸುದೀರ್ , ಸಂತು, ನಟಿ ಶ್ರೀಲೀಲಾ , ಛಾಯಾಗ್ರಕರಾದ ಸತ್ಯ ಹೆಗ್ಡೆ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯ ಸೇರಿದಂತೆ ಹಲವಾರು ಗೆಳೆಯರು ಈ ಒಂದು ಶುಭ ಸಮಾರಂಭದಲ್ಲಿ ಹಾಜರಿದ್ದು ನವ ವಧುವರರಿಗೆ ಶುಭ ಕೋರಿದ್ದಾರೆ.

 

Share This With Your Friends

Related posts