Cinisuddi Fresh Cini News 

ಸ್ಯಾಂಡಲ್ವುಡ್ ನಲ್ಲೊಂದು ‘ದಿಲ್ ಸೇ’ ಸಿನಿಮಾ

ಚೈಯಾ ಚೈಯಾ ಚಾ ಚೈಯಾ ಇದು ಶಾರುಕ್‍ಖಾನ್ ನಟನೆಯ ದಿಲ್‍ಸೇ ಚಿತ್ರದ ಪ್ರಸಿದ್ಧ ಗೀತೆ. ಮಣಿರತ್ನಂ ನಿರ್ದೇಶಿಸಿದ್ದ ಆ ಸಿನಿಮಾ ಗೀತೆಗಳಿಂದಲೇ ಪ್ರೇಕ್ಷಕರ ಮನ ಗೆದ್ದು ಸಕ್ಸಸ್ ಆಗಿತ್ತು. ಈಗ ಇದೇ ಟೈಟಲ್‍ನಲ್ಲಿ ಕನ್ನಡದಲ್ಲೊಂದು ಚಿತ್ರ ತಯರಾಗುತ್ತಿದ್ದು ಮೊನ್ನೆ ಕಂಠೀರವಾ ಸ್ಟುಡಿಯೋದಲ್ಲಿ ದಿಸ್‍ಸೇ ಸೆಟ್ಟೇರಿತು.

ಹೊಸಬರನ್ನು ಪ್ರೊತ್ಸಾಹಿಸುತ್ತ ಬಂದಿರುವ ಪವರ್‍ಸ್ಟಾರ್ ಪುನೀತ್‍ರಾಜ್‍ಕುಮಾರ್ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಕೆಲ ನಿರ್ದೇಶಕರ ಬಳಿ ಕೆಲಸ ಮಾಡಿರುವ ಉತ್ತರ ಕರ್ನಾಟಕದ ಶಿಗಾಂವ್‍ನ ಎಚ್.ರಾಕ್ ಮದೇಶ ದಿಲ್ ಸೇ ಚಿತ್ರವನ್ನು ನಿರ್ದೇಶಿಸುತ್ತಿದ್ದು, ನಮ್ಮ ಚಿತ್ರಕ್ಕೂ 20 ವರ್ಷಗಳ ಹಿಂದೆ ಬಂದ ದಿಲ್ ಸೇ ಚಿತ್ರಕ್ಕೂ ಯವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು. ಚಿತ್ರಕ್ಕೆ ಕಥೆ, ಚಿತ್ರಕತೆಯನ್ನು ಅವರೇ ಒದಗಿಸಿದ್ದಾರೆ.

ದಿಲ್ ಸೇ ಹೆಸರೇ ಸೂಚಿಸುವಂತೆ ಇದೊಂದು ಪ್ರೇಮಮಯ ಚಿತ್ರವಾಗಿದ್ದು, ಎರಡು ಹೃದಯಗಳಲ್ಲಿರವ ಪ್ರೀತಿಯನ್ನು ಹೇಳುವ ಪ್ರಯತ್ನವನ್ನು ನಿರ್ದೇಶಕರು ಮಾಡಲು ಹೊರಟಿದ್ದಾರೆ. ಚಿತ್ರದಲ್ಲಿ ಒಂದು ಸುಂದರವಾದ ಮೆಸೇಜ್ ಇದ್ದು ಅದನ್ನು ಚಿತ್ರಮಂದಿರಗಳಲ್ಲೇ ನೋಡಬೇಕೆಂದು ಹೇಳುತ್ತಾರೆ. ಬೆಂಗಳೂರು, ಮಂಗಳೂರು, ಕಾಸರಗೂಡು ಹಾಗೂ ಕೇರಳದ ಸುಂದರ ತಾಣಗಳಲ್ಲಿ ಈ ಚಿತ್ರದ ಚಿತ್ರೀಕರಣವನ್ನು ನಡೆಸಲು ಯೋಜನೆ ರೂಪಿಸಲಾಗಿದೆ.

ಧರ್ಮಕೀರ್ತಿರಾಜ್ ಈ ಚಿತ್ರದಲ್ಲಿ ಗ್ಯಾರೇಜ್ ಕೆಲಸ ಮಾಡುತ್ತ ವಿದ್ಯಾಭ್ಯಾಸ ಮಾಡುವ ಹುಡುಗನಾಗಿದ್ದು, ಚೆನ್ನೈ ಮೂಲದ ಶ್ರೀಪಲ್ಲವಿ ನಾಯಕಿಯಾಗಿ ಆಯ್ಕೆಯಾಗಿದ್ದು ಮತ್ತೊಬ್ಬ ನಾಯಕಿಗಾಗಿ ತಲಾಶ್ ನಡೆಯುತ್ತಿದೆ. ಚಿತ್ರದ ಖಳನಾಗಿ ಅನಿಲ್ ಸಿದ್ದು ಕಾಣಿಸಿಕೊಂಡಿದ್ದಾರೆ.

ಉಳಿದಂತೆ ಅಶೋಕ್, ಅಮಿತ್, ಮಡೇನೂರ್ ಮನು, ನಂದಿನಿ, ಜಯ ರಾಮಣ್ಣ, ವಂದನ ಶೆಟ್ಟಿ, ಬಸು ಹಿರೇಮಠ, ಸದಾನಂದ ಮುಂತಾದವರು ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಾಲ್ಕು ಗೀತೆಗಳಿದ್ದು, ವಿ . ಮನೋಹರ್ ಸಂಗೀತ ಒದಗಿಸುತ್ತಿದ್ದಾರೆ. ಛಾಯಾಗ್ರಹಣ ಕಿರಣ್‍ಕುಮಾರ್ ಅವರದು. ಕೆ.ಹರೀಶ್‍ರಾಮ್ ಸಂಭಷಣೆಗಳನ್ನು ಹೆಣೆದಿದ್ದಾರೆ.

ಹಾವೇರಿಯ ಉದ್ಯಮಿ ಶಿವಶರಣ ಗೌಡ್ರು ಈ ಚಿತ್ರಕ್ಕೆ ಮೊದಲ ಬಾರಿಗೆ ಬಂಡವಾಳ ಹೂಡುವ ಮೂಲಕ ನಿರ್ಮಾಪಕರಾಗಿ ಎಂಟ್ರಿ ಕೊಟ್ಟಿದ್ದಾರೆ. ದಿಲ್‍ಸೇ ಚಿತ್ರವು ಪ್ರೇಕ್ಷಕರ ಹೃದಯವನ್ನು ಕದ್ದು ಸಕ್ಸಸ್ ಕಾಣುವಂತಾಗಲಿ.

Share This With Your Friends

Related posts