Cinisuddi Fresh Cini News 

“ದಿಲ್ ಪಸಂದ್” ಚಿತ್ರದ ಫಸ್ಟ್ ಲುಕ್ ಬಿಡುಗಡೆ

ರಶ್ಮಿ ಫಿಲಂಸ್ ಲಾಂಛನದಲ್ಲಿ ಸುಮಂತ್ ಕ್ರಾಂತಿ ಅವರು ನಿರ್ಮಿಸುತ್ತಿರುವ “ದಿಲ್ ಪಸಂದ್” ಚಿತ್ರದ ಫಸ್ಟ್ ಲುಕ್ ಇತ್ತೀಚೆಗೆ ಬಿಡುಗಡೆಯಾಗಿದೆ. ಚಿತ್ರದ ಫಸ್ಟ್ ಲುಕ್ ಗೆ ಅಪಾರ ಜನಮನ್ನಣೆ ದೊರಕಿದೆ.‌

ಶಿವತೇಜಸ್ ನಿರ್ದೇಶನದ ಈ‌ ಚಿತ್ರದ ನಾಯಕರಾಗಿ ‌ಡಾರ್ಲಿಂಗ್ ಕೃಷ್ಣ ಅಭಿನಯಿಸಿಸುತ್ತಿದ್ದಾರೆ. ನಿಶ್ವಿಕನಾಯ್ಡು‌ ಹಾಗೂ ಮೇಘ ಶೆಟ್ಟಿ “ದಿಲ್ ಪಸಂದ್”ನ ನಾಯಕಿಯರು. ಸಾಧುಕೋಕಿಲ,‌‌ ರಂಗಾಯಣ ರಘು, ತಬಲ‌ ನಾಣಿ, ಅರುಣ ಬಾಲರಾಜ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಈಗಾಗಲೇ ಚಿತ್ರಕ್ಕೆ ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಡಿಸೆಂಬರ್ ಮೊದಲವಾರದಲ್ಲಿ ದ್ವಿತೀಯ ಹಂತದ ‌ಚಿತ್ರೀಕರಣ‌ ಆರಂಭವಾಗಲಿದೆ.

ಅರ್ಜುನ್ ಜನ್ಯರ ಸಂಗೀತ ನಿರ್ದೇಶನ, ಶೇಖರ್ ಚಂದ್ರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮರ ಸಾಹಸ ನಿರ್ದೇಶನ “ದಿಲ್ ಪಸಂದ್” ಚಿತ್ರಕ್ಕಿದೆ.

Related posts