Cinisuddi Fresh Cini News 

‍”For regn” ನಲ್ಲಿ ದಿಯಾ ಹೀರೋ..!

ಹೊಸ ರೀತಿಯ ವಿನೂತನ ಚಿತ್ರಗಳಿಗೆ ಪ್ರೇಕ್ಷಕರು ಸದಾ ಮೆಚ್ಚುತ್ತಾರೆ ಎಂಬುದಕ್ಕೆ ಸಾಕ್ಷಿ ದಿಯಾ ಚಿತ್ರ. ಈ ಚಿತ್ರ ಚಿತ್ರಮಂದಿರದಲ್ಲಿ ಹೆಚ್ಚು ಪ್ರೇಕ್ಷಕರ ಸೆಳೆಯದಿದ್ದರು , ನೆ ನೆಟ್ಫ್ಲಿಕ್ಸ್ ,ಅಮೆಜಾನ್ ಪ್ರೈಮ್ ನಲ್ಲಿ ವೀಕ್ಷಕರ ಮನಸ್ಸನ್ನು ಗೆದ್ದಿದೆ.

ಈ ಚಿತ್ರದಲ್ಲಿ ನಾಯಕನಾಗಿ‌ ನಟಿಸಿದ್ದ ಪೃಥ್ವಿ ಅಂಬರ್ ಉತ್ತಮ ಅಭಿನಯ ನೀಡಿ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದರು. ಈಗ ಅವರ ಅಭಿನಯಿಸುತ್ತಿರುವ ಎರಡನೆಯ ಚಿತ್ರ “For regn” ಚಿತ್ರ ಮೇ ತಿಂಗಳಿಂದ ಆರಂಭವಾಗುತ್ತಿದೆ. ಎರಡು ಹಂತದಲ್ಲಿ ಚಿತ್ರೀಕರಣ ನಡೆಯಲಿದ್ದು, ತಬಲ ನಾಣಿ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ರೊಮ್ಯಾಂಟಿಕ್ ಕಥಾ ಹಂದರವಿರುವ ಈ ಚಿತ್ರವನ್ನು ನವೀನ್ ದ್ವಾರಕನಾಥ್ ನಿರ್ದೇಶಿಸುತ್ತಿದ್ದಾರೆ. ಕಥೆ ಕೂಡ ನಿರ್ದೇಶಕರದೆ. ಐ ಟಿ ಹಿನ್ನೆಲೆಯ ನವೀನ್ ದ್ವಾರಕನಾಥ್ ಸುಮಾರು 5 ಕಿರುಚಿತ್ರ ನಿರ್ದೇಶನ ಮಾಡಿರುವ ಅನುಭವವಿದೆ.

ನಿಶ್ಚಲ್ ಫಿಲಂಸ್ ಲಾಂಛನದಡಿಯಲ್ಲಿ ನವೀನ್ ರಾವ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ವಿವೇಕ್ ಅವರ ಛಾಯಾಗ್ರಹಣ ಹಾಗೂ ಹರೀಶ್ .ಆರ್ ಸಂಗೀತ ನಿರ್ದೇಶನ For regn ಚಿತ್ರಕ್ಕಿದೆ. ಯುವ ಪಡೆಗಳ ಈ ಚಿತ್ರತಂಡ ಚಿತ್ರಕ್ಕೆ ಹೊರಡಲು ಸಜ್ಜಾಗುತ್ತಿದೆ.

Share This With Your Friends

Related posts