Cinisuddi Fresh Cini News 

ಈ ವಾರ ತೆರೆಮೇಲೆ ಬರುತ್ತಿದೆ ಯುವಕರ ಮನ ಗೆದ್ದಿದ್ದ ‘ದಿಯಾ’ ಚಿತ್ರ

ದಸರಾ ಬಂತೆಂದರೆ ಸ್ಟಾರ್ ನಟರುಗಳ ಚಿತ್ರಗಳನ್ನು ಬಿಡುಗಡೆ ಮಾಡಲು ನಿರ್ಮಾಪಕರು, ನಿರ್ದೇಶಕರು ತುದಿಗಾಲಲ್ಲಿ ನಿಂತಿದ್ದರು. ಆದರೆ ಕೊರೊನಾ ಕಾಟದಿಂದಾಗಿ ಈಗ ಕಾಲ ಬದಲಾಗಿದೆ. ಸ್ಟಾರ್ ಚಿತ್ರಗಳು ಬಿಡುಗಡೆ ಆಗಿದ್ದರೂ ಕೂಡ ಅದನ್ನು ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿರುವುದರಿಂದ ಕೆಲವು ಚಿತ್ರಗಳು ಮರುಬಿಡುಗಡೆಯಾಗುತ್ತಿವೆ.

ಆ ಸಾಲಿನಲ್ಲಿ ಯುವಕರ ಮನ ಗೆದ್ದಿದ್ದ ದಿಯಾ ಚಿತ್ರವು ಒಂದು. ದಸರಾದ ಅಂಗವಾಗಿ ಈ ವಾರ ಬಿಡುಗಡೆಯಾಗುತ್ತಿರುವ ದಿಯಾ ಚಿತ್ರದಲ್ಲಿ ಬಹುತೇಕ ಹೊಸ ಮುಖಗಳೇ ಕಾಣಿಸಿಕೊಂಡಿದ್ದರೂ ಕೂಡ ಅವರು ಈಗ ಚಿತ್ರರಂಗದಲ್ಲಿ ತುಂಬಾ ಬ್ಯುಜಿ ಕಲಾವಿದರಾಗಿದ್ದಾರೆ.

ಅಪ್ಪಟ ಪ್ರೇಮಕಥೆಯ ಎಳೆಯನ್ನು ಚಿತ್ರವಾಗಿಸಿ ಅದಕ್ಕೆ ದಿಯಾ ಎಂದು ಹೆಸರು ಕೊಟ್ಟವರು ನಿರ್ದೇಶಕ ಕೆ.ಎಸ್.ಅಶೋಕ್ ಅವರು ಈ ಹಿಂದೆ 6-5=2 ಎನ್ನುವ ಹಾರರ್ ಸಿನಿಮಾ ನಿರ್ದೇಶಿಸಿದ್ದರು.

ದಿ ಗ್ರೇಟ್ ಸ್ಟೋರಿ ಆಫ್ ಸೋಡಾಬುಡ್ಡಿ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ್ದ ಖುಷಿ ಈ ಚಿತ್ರದ ಮೂಲಕ ನಾಯಕಿಯಾಗಿ ಬಡ್ತಿಪಡೆದಿದ್ದರೆ, ಕಿರುತೆರೆ ನಟರಾದ ದೀಕ್ಷಿತ್‍ಶೆಟ್ಟಿ ಹಾಗೂ ಪೃಥ್ವಿ ಅಂಬಾರ್ ಅವರು ನಾಯಕನಾಗಿ ಕಾಣಿಸಿಕೊಂಡಿದ್ದು ಇಡೀ ಚಿತ್ರವು ಈ ಮೂರು ಪಾತ್ರಗಳ ಸುತ್ತಲೇ ಕೇಂದ್ರಿಕರಿಸಲಾಗಿತ್ತು.

ಚಿತ್ರದ ನಾಯಕಿ ಎಲ್ಲರ ಜೊತೆ ಕಡಿಮೆ ಬೆರೆಯುವ ಹುಡುಗಿಯಾಗಿದ್ದು ಎಂಜಿನಿಯರ್ ವಿದ್ಯಾಭ್ಯಾಸಕ್ಕೆ ಸೇರಿದ ನಂತರ ಅಲ್ಲಿ ಒಬ್ಬ ಹುಡುಗನ ಪ್ರೀತಿಯಲ್ಲಿ ಬೀಳುತ್ತಾಳೆ, ಆ ನಂತರ ಆಕೆಯ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳುತ್ತವೇ ಎಂಬುದನ್ನು ಹೇಳುವುದೇ ದಿಯಾ. ಚಿತ್ರದಲ್ಲಿರುವ ಎಲ್ಲಾ ಪಾತ್ರಗಳು ತುಂಬಾ ಸಿಂಪಲ್, ರಿಯಲಿಸ್ಟಿಕ್ ಆಗಿತ್ತು.

ದಿಯಾ ಚಿತ್ರ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಗೆಲುವಿನ ಹಾದಿಯಲ್ಲಿ ಸಾಗುತ್ತಿದ್ದಾಗ ಕೊರೊನಾ ಶುರುವಾಗಿದ್ದರಿಂದ ಹಿನ್ನಡೆಯಾಗಿತ್ತಾದರೂ ಈಗ ದಸರಾದ ಅಂಗವಾಗಿ ಮತ್ತೆ ಮರುಬಿಡುಗಡೆಯಾಗಿರುತ್ತಿರುವುದರಿಂದ ಚಿತ್ರತಂಡದವರಲ್ಲಿ ಮತ್ತೆ ಗೆಲುವಿನ ನಗೆ ಮೂಡಿದೆ.

Related posts