Cinisuddi Fresh Cini News 

ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲೂ ‘ಧೂಮ್ ಎಗೈನ್’

ಸ್ಯಾಂಡಲ್‍ವುಡ್ ಚಿತ್ರಗಳು ಇತ್ತೀಚೆಗೆ ದೇಶದಾದ್ಯಂತ ಕೆಲವು ಭಾಷೆಗಳಲ್ಲಿ ಬಿಡುಗಡೆಯಾಗುವ ಮೂಲಕ ಕನ್ನಡ ನಾಡಿನ ಕಂಪನ್ನು ಪಸರಿಸುತ್ತಿದೆ, ಅದೇ ಸಾಲಿಗೆ ಸೇರುವ ಚಿತ್ರ ಧೂಮ್ ಎಗೈನ್. ಈ ಚಿತ್ರವನ್ನು ನಿರ್ದೇಶಕ ರಾಜೇಶ್ ವರ್ಮಾ ಅವರು ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂಗಳಲ್ಲೂ ಬಿಡುಗಡೆ ಮಾಡಲು ಚಿಂತಿಸಿದ್ದಾರೆ.

ಬಾಲಿವುಡ್‍ನಲ್ಲಿ ಈಗಾಗಲೇ ಧೂಮ್ ಎಂಬ ಚಿತ್ರಗಳು ಕಲೆಕ್ಷನ್‍ನಲ್ಲಿ ಧೂಳೆಬ್ಬಿಸಿದೆ. ಅದಕ್ಕೆ ಕನ್ನಡದಲ್ಲಿ ಈ ಚಿತ್ರಕ್ಕೆ ಧೂಮ್ ಎಗೈನ್ ಎಂಬ ಹೆಸರಿಟ್ಟಿದ್ದಾರೆ. ಹೆಸರೇ ಹೇಳುವಂತೆ ಇದೊಂದು ಕಾರು ಅಥವಾ ಬೈಕ್ ರೇಸ್ ಕುರಿತಾದ ಕಥೆ ಇರಬಹುದು ಎಂದು ಅಂದು ಕೊಳ್ಳುವುದು ಸಹಜ, ಈ ಚಿತ್ರದಲ್ಲಿ ನಾಲ್ವರು ಯುವಕರಿದ್ದು ಅವರು ಹೇಗೆ ಕಷ್ಟಪಟ್ಟು ಮೇಲಕ್ಕೆ ಬರುತ್ತಾರೆ ಎಂಬ ಕಥೆಯನ್ನು ಹೇಳಲು ನಿರ್ದೇಶಕ ರಾಜೇಶ್ ವರ್ಮಾ ಹೇಳಲು ಹೊರಟಿದ್ದಾರೆ.

ಕ್ರಿಕೆಟಿಗ ಶ್ರೀಶಾಂತ್ ಈ ಚಿತ್ರದಲ್ಲಿ ಎಸಿಪಿ ಆಗಿ ಕಾಣಿಸಿಕೊಂಡಿದ್ದರೆ, ಹಾಲಿವುಡ್ ನಟಿ ಹನ್ನಾ ಕ್ರಿಸ್ಟಿನ್ ನಾಯಕಿಯಾಗಿದ್ದಾರೆ, ಇನ್ನು ನಾಲ್ವರು ಹಗುಡುಗರ ಪಾತ್ರದಲ್ಲಿ ಕನ್ನಡ ರಕ್ಷಣಾ ವೇದಿಕೆಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಅವರ ಪುತ್ರ ಪ್ರವೀರ್ ಶೆಟ್ಟಿ, ಮಾಸ್ಟರ್ ಮೈಂಡ್ ವಾಸು, ಭರತ್ ಬಾಂಬೆ, ಅರ್ಜುನ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಸ್ಪೇನ್ ಮಾಡೆಲ್ ಜನಿರಾ ಐದರ್ ಕೂಡ ಚಿತ್ರದ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ನಿರ್ದೇಶಕ ರಾಜೇಶ್ ವರ್ಮಾ ಮಾತನಾಡಿ, ಈಗ ಎಂಗ್ ಜನರೇಷನ್‍ರನ್ನು ಚಿತ್ರಮಂದಿರಕ್ಕೆ ಸೆಳೆಯುವ ಸಲುವಾಗಿ ಈ ಚಿತ್ರವನ್ನು ಮಾಡಿದ್ದು, ಈ ಚಿತ್ರದ ಕಥೆಗೆ ಒಪ್ಪುವಂತೆ ರಾಬರಿ ಮಾಡಲು, ಗ್ಯಾಂಗ್ ಕಟ್ಟಲು ನಾಲ್ವರು ಹೊಸ ಹುಡುಗರನ್ನೇ ಕರೆದುಕೊಂಡು ಬಂದಿದ್ದೇನೆ, ಈಗಾಗಲೇ ಈ ಚಿತ್ರದ 20% ಭಾಗದ ಶೂಟಿಂಗ್ ಮುಕಾತಿಯಗೊಂಡಿದೆ. ಮುಂಬೈ, ಬಲ್ಗೇರಿಯಾ, ಯು.ಕೆ.ಯಲ್ಲಿ ಚಿತ್ರೀಕರಣ ನಡೆಸಲಾಗಿದೆ. ಇನ್ನುಳಿದ ಭಾಗದ ಚಿತ್ರೀಕರಣವನ್ನು ಯುರೋಪ್‍ನಲ್ಲಿ ಮಾಡಬೇಕೆಂಬ ಪ್ಲಾನ್ ಇದೆ ಎಂದು ಹೇಳಿದರು.

ಈ ಚಿತ್ರದ ನಾಯಕಿಯಾಗಿ ಕನ್ನಡತಿಯನ್ನೇ ಆಯ್ಕೆ ಮಾಡಿಕೊಳ್ಳಬೇಕೆಂದು ಕೊಂಡಿದ್ದ ನಿರ್ದೇಶಕರು ಹಲವರು ನಟಿಯರನ್ನು ಕೇಳಿ ನಿರಾಸೆ ಆದ ನಂತರ ಹಾಲಿವುಡ್ ನಟಿಯನ್ನು ಕರೆತಂದಿದ್ದೇವೆ ಎಂದು ಹೇಳಿದರು. ಈ ಚಿತ್ರದ ನಾಯಕಿ ಸಿಎಂ ಪುತ್ರಿಯಾಗಿದ್ದೂ ಬೈಕ್ ಕಲಿಯುವ ನಾಲ್ವರು ಯುವಕರ ಬಳಿ ಬರುತ್ತಾರೆ, ಆಗ ಅವರು ಇವಳನ್ನು ಪ್ರೀತಿಸುತ್ತಾರೆ, ಆದರೆ ಈಗೆ ಮಾತ್ರ ಯಾರನ್ನು ಪ್ರೀತಿಸೋಲ್ಲ , ಕೊನೆಯಲ್ಲಿ ಈ ಸಿನಿಮಾ ಲವ್‍ನಿಂದಲೇ ಕ್ರೇಜ್ ಹುಟ್ಟುತ್ತದೆ, ಈ ಚಿತ್ರವು ಕನ್ನಡ ಚಿತ್ರರಂಗದಲ್ಲೇ ಹೊಸದೊಂದು ಪ್ರಯತ್ನವಾಗಿದ್ದು, ಸೂಪರ್ ಬೈಕ್‍ಗಳ ರೇಸ್, ಚೇಸಿಂಗ್ ಮತುತಿ ಸಾಹಸ ದೃಶ್ಯಗಳು ರೋಚಕವಾಗಿರಲಿವೆ ಎಂದು ನಿರ್ದೇಶಕರು ಹೇಳಿದ್ದಾರೆ.

ಚಿತ್ರದಲ್ಲಿರುವ 6 ಹಾಡುಗಳಿಗೆ ಗುರುಕಿರಣ್ ಸಂಗೀತ ನೀಡಿದ್ದು ಚಿತ್ರವನ್ನು ಪರಮಾತ್ಮ ಕ್ರಿಯೇಷನ್ಸ್ ಮೂಲಕ ಉತ್ತರ ಕನ್ನಡ ಮೂದ ಸ್ಯಾಮ್ ಕಪೂರ್ ಅವರು ನಿರ್ಮಿಸುತ್ತಿದ್ದು ಚಿತ್ರವನ್ನು ಮುಂದಿನ ವರ್ಷ ಮೇ ಅಥವಾ ಜೂನ್‍ನಲ್ಲಿ ತೆರೆಗೆ ತರುತ್ತಾರಂತೆ.ಸಾಹಸ ರವಿವರ್ಮ ಅವರದಾಗಿದೆ. ಆರು ವರ್ಷಗಳ ನಂತರ ಅಣಜಿ ನಾಗರಾಜ್ ಅವರು ಛಾಯಾಗ್ರಹಣದ ಜವಬ್ದಾರಿಯನ್ನು ಹೊತುತಿಕೊಂಡಿದ್ದಾರೆ.

ಶ್ಯಾಂ ಕಪೂರ್-ಸುಜಿತ್ ಶೆಟ್ಟಿ ಈ ಚಿತ್ರದ ನಿರ್ಮಾಪಕರು. ಇದೇ ಹದಿನಾರರಂದು ಯುರೋಪ್, ಬೆಂಗಳೂರು, ಯುಕೆದಲ್ಲಿ ನಡೆಸಲು ಯೋಜನೆ ರೂಪಿಸಿಕೊಂಡಿದೆ. ಧೂಮ್ ಎಗೈನ್ ಚಿತ್ರ ಗೆಲ್ಲುವ ಮೂಲಕ ಚಂದನವನಕ್ಕೆ ಹೊಸ ನಾಯಕರು ಸಿಗುವಂತಾಗಲಿ.

Related posts