Cinisuddi Fresh Cini News 

ಪ್ರಿಯಾಂಕ ಉಪೇಂದ್ರ 50ನೇ ಚಿತ್ರ “ಡಿಟೆಕ್ಟೀವ್ ತೀಕ್ಷ ” ಫಸ್ಟ್‌ಲುಕ್ ಹಾಗೂ ಮೋಷನ್ ಪೋಸ್ಟರ್ ಬಿಡುಗಡೆ

ಚಂದನವನದಲ್ಲಿ ಮುದ್ದು ಮುದ್ದಾಗಿ ಪ್ರೇಕ್ಷಕರ 6083 ಸೆಳೆದ ನಟಿ ಪ್ರಿಯಾಂಕ ಉಪೇಂದ್ರ ಅಭಿನಯದ 50ನೇ ಚಿತ್ರದ ಮೋಷನ್ ಪೋಸ್ಟರ್ ಹಾಗೂ ಫಸ್ಟ್ ಲುಕ್ ಬಿಡುಗಡೆ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಏಳು ಭಾಷೆಗಳಲ್ಲಿ ಸಿದ್ದಗೊಳ್ಳುತ್ತಿರುವ ಈ ಪ್ಯಾನ್ ಇಂಡಿಯಾ ಚಿತ್ರವೇ “ಡಿಟೆಕ್ಟೀವ್ ತೀಕ್ಷ”.

ಪ್ರಿಯಾಂಕ ಉಪೇಂದ್ರ ರವರ ಸುಪುತ್ರ ಆಯುಷ್ ಗೆ ಹುಟ್ಟುಹಬ್ಬದ ಶುಭಾಶಯವನ್ನ ವೇದಿಕೆಯ ಮುಂಭಾಗದಲ್ಲಿ ಕುಟುಂಬಸ್ಥರು ಹಾಗೂ ಅಭಿಮಾನಿಗಳು ತಿಳಿಸಿದರು. ಇದೇ ಸಂದರ್ಭದಲ್ಲಿ ಆಯುಷ್ ಕೂಡ ತಮ್ಮ ತಾಯಿ ಅಭಿನಯದ 50ನೇ ಚಿತ್ರದ ಎರಡು ನಿಮಿಷದ ಫಸ್ಟ್‌ಲುಕ್‌ನ್ನು ಬಿಡುಗಡೆ ಮಾಡಿದರೆ, ರಿಯಲ್ ಸ್ಟಾರ್ ಉಪೇಂದ್ರ ಮೋಷನ್ ಪೋಸ್ಟರ್‌ನ್ನು ಅನಾವರಣಗೊಳಿಸಿದ್ದು ವಿಶೇಷವಾಗಿತ್ತು.

ನಂತರ ಮಾತನಾಡಿದ ಉಪೇಂದ್ರ ತಮಾಷೆಯಾಗಿ ತಮ್ಮ ಪತ್ನಿ ಕಾಲೆಳೆದು ಚಿತ್ರ 50, ವಯಸ್ಸು 20 ಎನ್ನುತ್ತಾ , ಎಷ್ಟು ಬೇಗ ಕಾಲ ಓಡುತ್ತಿದೆ ಅಂದ್ರೆ ಈಗಾಗಲೇ 50 ಮುಗಿಸಿದ್ದೀರಾ. ನಾನು ಇನ್ನೂ ನಿಧಾನವಾಗಿ ಸಾಗುತ್ತಿದೇನೆ ಪ್ರಿಯಾಂಕಾ ನನಗಿಂತ ವೇಗವಾಗಿ ಹೋಗ್ತಿದ್ದೀರಾ.

ಶೀರ್ಷಿಕೆ ಚೆನ್ನಾಗಿದೆ ಸಂಗೀತ ಪ್ರಾಮಿಸಿಂಗ್ ಆಗಿದೆ. ಗೆಟಪ್ ವಿಭಿನ್ನವಾಗಿದೆ. ತೀಕ್ಷ ಎಂದರೆ ಶಾರ್ಪ್. ಕಥೆನೂ ಶಾರ್ಪ್ ಆಗಿದೆ. ಬೇಗನೆ ರಿಲೀಸ್ ಮಾಡಿ. ಕಥೆ ತುಂಬಾ ಚೆನ್ನಾಗಿ ಮಾಡಿದ್ದೀರಾ ಅಂತ ಹೇಳ್ತಿದ್ದರು. ಚಿತ್ರಕ್ಕೆ ಅದೇ ಮುಖ್ಯವಾಗಿ ರುತ್ತದೆ. ಏನೆಲ್ಲಾ ಬದಲಾವಣೆ ಆಗಬಹುದು. ಕ್ಯಾಮಾರ, ಮೇಕಿಂಗ್ ಬೇರೆ ತರಹ ಬರಬಹುದು. ಆದರೆ ಕಥೆ ಎನ್ನುವುದು ಬಹಳ ಬಹಳ ಮುಖ್ಯ.

ಹಾಲಿವುಡ್‌ದಲ್ಲಿ ಒಂದು ಮಾತಿದೆ ’ನೋ ಟ್ರಸ್ಟ್ ಸ್ಟಾರ್, ಟ್ರಸ್ಟ್ ಟೇಲ್’ ಎಂದು ಹೇಳಿದ್ದಾರೆ. ಸ್ಟಾರ್ ನಂಬಬೇಡಿ ಕಥೆಯನ್ನು ನಂಬಿ ಸಿನಿಮಾ ಮಾಡಿ ಎಂದು, ನಿಮ್ಮ ಬರವಣಿಗೆ ಮುಖ್ಯ. ಅದನ್ನು ಖಂಡಿತ ಚೆನ್ನಾಗಿ ಮಾಡಿರುತ್ತಿರಾ ಅಂತ ನಂಬಿಕೆ ಇದೆ ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದರು.

ಈ ಚಿತ್ರ ನನಗೆ ತುಂಬ ಎಮೋಷನಲ್ ಆಗಿದೆ. ಮಗನ ಹುಟ್ಟು ಹಬ್ಬದ ಸಂಭ್ರಮ. ಕುಟುಂಬದ ಸಹಕಾರದಿಂದ ಇಲ್ಲಿಯವರೆಗೆ ಬಂದಿದ್ದೇನೆ. ಮದುವೆ ನಂತರ ನಟಿಸ್ತಿನಿ ಅಂದುಕೊಂಡಿರಲಿಲ್ಲ. ಮನೆ ಕಡೆಯಿಂದ ಪ್ರೋತ್ಸಾಹ ಸಿಕ್ಕಿದ್ದಕ್ಕೆ ಇಲ್ಲಿಯವರೆಗೂ ತಂದು ನಿಲ್ಲಿಸಿದೆ. ’ಮಮ್ಮಿ’ ಚಿತ್ರದಿಂದ ಬದಲಾವಣೆ ಕಂಡುಬಂತು.

ಮಹಿಳೆ ಮುಖ್ಯ ಪಾತ್ರದ ಚಿತ್ರವನ್ನು ನಂಬಿಕೊಂಡು ನಿರ್ಮಾಪಕರು ಬಂಡವಾಳ ಹೂಡಿದರು. ನನ್ನ ಚಿತ್ರಗಳನ್ನು ನೋಡಿ ಖುಷಿ ಪಡುತ್ತಿದ್ದೀರಾ. ಅದರಿಂದ ನಿಮಗೆ ಪ್ರೇರಣೆ ಸಿಗುತ್ತೆ. ಮನರಂಜನೆ ಜತೆ ಸಂದೇಶ ಸಿಗುತ್ತದೆ. ನನಗೆ ನಟನೆ ತುಂಬಾ ಇಷ್ಟ. ’ಉಗ್ರಾವತಾರ’ದಲ್ಲಿ ಆಕ್ಷನ್ ಇದೆ. ಅದರಂತೆ ಇದರಲ್ಲಿ ಬೇರೆ ತರಹ ಕಾಣಿಸಿಕೊಳ್ಳುತ್ತೇನೆಂದು ಪ್ರಿಯಾಂಕ ಉಪೇಂದ್ರ ಸಂತಸವನ್ನು ಹಂಚಿಕೊಂಡರು.

ಗಟ್ಟಿಯಾದ ಕಥೆಯನ್ನು ಮಾಡಿಕೊಂಡಿದ್ದೇವೆ. ಗಾಡ್‌ಫಾದರ್ ಆಗಿ ಉಪೇಂದ್ರ ಅವರು ಇದ್ದಾರೆ. ಸಹ ನಿರ್ದೇಶಕನಾಗಿದ್ದ ನನ್ನನ್ನು ಕರೆದು ಚಿತ್ರ ಮಾಡು ಅಂತ ಧೈರ್ಯ ತುಂಬಿದವರು ಮೇಡಂ. ಮುಂದೆ ಏನೇ ಆದರೂ ಅದರ ಸಂಪೂರ್ಣ ಕ್ರೆಡಿಟ್ ಅವರಿಗೆ ಸಲ್ಲುತ್ತದೆ. ಆಕ್ಷನ್, ಥ್ರಿಲ್ಲರ್ ಡಿಟೆಕ್ಟಿವ್ ಚಿತ್ರದಲ್ಲಿ ಕೊಲೆ ಮುಂತಾದವು ಇರುತ್ತದೆ. ಅದನ್ನು ಹೊರತುಪಡಿಸಿ ಬೇರೆ ಮಾದರಿಯಲ್ಲಿ ಹೇಳಲು ಹೊರಟಿದ್ದೇವೆ.

ಈಗಲೇ ಸಾರಾಂಶ ಹೇಳಲು ಆಗದು. ಎಲ್ಲವನ್ನು ಚಿತ್ರದಲ್ಲಿ ನೋಡಿ. ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯೋಗಗಳನ್ನು ಮಾಡಿರೆಂದು ಉಪ್ಪಿ ಸರ್ ಹೇಳಿದ್ದಾರೆ. ಅದರಂತೆ ಶೇಕಡ ೧೦೦ರಷ್ಟು ಹೊಸತನ ಕೊಡುತ್ತೇವೆ ಎಂಬ ಭರವಸೆ ಇದೆ. ತೀಕ್ಷತೆ ಎನ್ನುವುದು ಪ್ರತಿಯೊಬ್ಬರಿಗೂ ಬೇಕಾಗುತ್ತದೆ. ಅದರಂತೆ ಚುರುಕುತನ ಇರಬೇಕು. ಅದನ್ನು ಶಕ್ತಿಯಿಂದ ಗೆಲ್ಲೋಕೆ ಆಗೋಲ್ಲ. ಯುಕ್ತಿಯಿಂದ ಗೆಲ್ಲಬಹುದು ಎಂಬುದೇ ತೀಕ್ಷದ ಒನ್ ಲೈನ್ ಎಂದು ನಿರ್ದೇಶಕ ತ್ರಿವಿಕ್ರಮರಘು ಒಂದಷ್ಟು ಮಾಹಿತಿಯನ್ನು ತೆರೆದಿಟ್ಟರು.

ನಿರ್ಮಾಪಕ ಪುರುಷೋತ್ತಮ . ಬಿ.ಕೊಯೂರು, ಸಂಗೀತ ಸಂಯೋಜಕ ಪಿ.ರೋಹಿತ್, ಸಾಹಿತಿ ಕಿನ್ನಾಳ್‌ರಾಜ್ ಮುಂತಾದವರು ಉಪಸ್ತಿತರಿದ್ದು ಚಿತ್ರದ ಕುರಿತಂತೆ ಹೆಚ್ಚೇನು ಹೇಳಲಿಲ್ಲ. ಸುಂದರ ಕಾರ್ಯಕ್ರಮದಲ್ಲಿ ಉಪೇಂದ್ರ ಪೋಷಕರು, ಅಣ್ಣ, ನಟ ನಿರಂಜನ್‌ಸುದೀಂದ್ರ ಹಾಜರಾತಿ ಇತ್ತು. ಅಂದಹಾಗೆ ಚಿತ್ರೀಕರಣವು ಜೂನ್ ಮೊದಲವಾರದಿಂದ ಶುರುವಾಗಲಿದೆ. ಮುಂದಿನ ದಿನಗಳಲ್ಲಿ ಚಿತ್ರತಂಡದವರು ಹೆಚ್ಚಿನ ಮಾಹಿತಿ ನೀಡಲಿದ್ದಾರಂತೆ.

Related posts