Cini Gossips Cinisuddi Fresh Cini News 

ಸುದೀಪ್ ಗೂ ಮೊದಲೇ ಥಿಯೇಟರ್‌ಗೆ ಎಂಟ್ರಿ ಕೊಡಲಿದ್ದಾರೆ ಡಿಬಾಸ್ ..!

ಟಾಲಿವುಡ್‍ನಲ್ಲಿ ಸೂಪರ್‍ಸ್ಟಾರ್ ರಜನಿಕಾಂತ್‍ರ ದರ್ಬಾರ್, ಪ್ರಿನ್ಸ್ ಮಹೇಶ್‍ಬಾಬುರ ಸರಿಲೇರು ನೀಕೆವ್ವರು , ಅಲ್ಲು ಅರ್ಜುನ್‍ರ ಅಲಾ ವೈಕುಂಠಪುರಮುಲೋ ಚಿತ್ರಗಳು ಜನವರಿ 10, 11 ಹಾಗೂ 12 ರಂದು ಬಿಡುಗಡೆಯಾಗಲು ರೆಡಿಯಾಗಿದ್ದರೆ, ಇತ್ತ ಸ್ಯಾಂಡಲ್‍ವುಡ್ ಸ್ಟಾರ್ ನಟರುಗಳಾದ ಚಾಲೆಂಜಿಂಗ್‍ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್‍ರ ಚಿತ್ರಗಳು ಪೈಪೋಟಿಗೆ ಬೀಳುತ್ತದೆ ಎಂದು ಅಂದಾಜಿಸಲಾಗಿತ್ತು.

ಆದರೆ ಈ ಎರಡು ಚಿತ್ರಗಳು ಪರಸ್ಪರ ವಾರ್ ನಡೆಸದೆ ವಾರದ ಅಂತರಗಳಲ್ಲಿ ಬಿಡುಗಡೆಯಾಗಲು ಅಣಿಯಾಗಿವೆ. ದರ್ಶನ್‍ರ ಒಡೆಯ ಚಿತ್ರವು ಡಿಸೆಂಬರ್ 12 ರಂದು ಬಿಡುಗಡೆಯಾಗುತ್ತಿದ್ದರೆ, ಕಿಚ್ಚ ಸುದೀಪ್ ನಟಿಸಿರುವ ಬಾಲಿವುಡ್‍ನ ದಬಾಂಗ್ 3 ಕನ್ನಡ ಅವತರಿಣಿಕೆಯ ಚಿತ್ರವು ಡಿಸೆಂಬರ್ 20 ರಂದು ಬಿಡುಗಡೆಯಾಗುತ್ತಿವೆ.

ಈ ಹಿಂದೆಯೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೆ ಚಿತ್ರವಾದ ಮುನಿರತ್ನ ಕುರುಕ್ಷೇತ್ರ ಹಾಗೂ ಸುದೀಪ್‍ರ ಪೈಲ್ವಾನ್ ಚಿತ್ರಗಳು ಒಂದೇ ದಿನ ಬಿಡುಗಡೆಯಾಗುತ್ತದೆ ಎಂದು ಹೇಳಲಾಗುತ್ತಿದ್ದಾದರೂ ಕೊನೆ ಘಳಿಗೆಯಲ್ಲಿ ಪೈಲ್ವಾನ್ ಸೆಪ್ಟೆಂಬರ್ 12 ರಂದು ಬಿಡುಗಡೆಯಾದರೆ, ಕುರುಕ್ಷೇತ್ರ ಸಿನಿಮಾ ಆಗಸ್ಟ್ 9 ಅಂದರೆ ವರಮಹಾಲಕ್ಷ್ಮಿ ಹಬ್ಬದ ದಿನವೇ ಬಿಡುಗಡೆಯಾಗಿ ಬಾಕ್ಸ್ ಆಫೀಸ್‍ನಲ್ಲಿ ಅಬ್ಬರಿಸಿತು, ನಂತರ ಬಂದ ಪೈಲ್ವಾನ್ ಕೂಡ ಗಳಿಕೆಯಲ್ಲಿ ಹಿಂದೆ ಬೀಳದೆ ಕುಸ್ತಿ ಪೈಲ್ವಾನ್ ಕಿಚ್ಚ ತಮ್ಮ ಕಮಾಲ್ ತೋರಿಸಿದ್ದರು.

ಕುರುಕ್ಷೇತ್ರ ಹಾಗೂ ಪೈಲ್ವಾನ್ ಚಿತ್ರಗಳು ಎರಡು ಭಾರೀ ಬಂಡವಾಳದ ಚಿತ್ರಗಳಾಗಿದ್ದವಲ್ಲದೆ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ , ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ತೆರೆಕಾಣುವ ಮೂಲಕ ಜೋರು ಸುದ್ದಿ ಮಾಡಿದ್ದವು.

ಆದರೆ ಈಗ ಗಲ್ಲಾಪೆಟ್ಟಿಗೆಯ ಬಾದ್‍ಷಾ ಸುದೀಪ್ ಹಾಗೂ ಬಾಕ್ಸಾಫೀಸ್ ಸುಲ್ತಾನ್ ಎಂದೇ ಚಿತ್ರರಂಗದಲ್ಲಿ ಬಿಂಬಿಸಿಕೊಂಡಿರುವ ಸುದೀಪ್ ಹಾಗೂ ದರ್ಶನ್‍ರ ಚಿತ್ರಗಳು ಒಂದೇ ದಿನ ಬಿಡುಗಡೆಯಾಗುತ್ತದೆ ಎಂದು ಹೇಳಲಾಗುತ್ತಾದರೂ ಈಗ ವಾರದ ಅಂತರದಲ್ಲಿ ತೆರೆಗರ್ಪಿಸಲು ತೀರ್ಮಾನಿಸಿದ್ದಾರೆ.

ಡಿಸೆಂಬರ್ 12 ರಂದು ಡಿ ಬಾಸ್ ಅಭಿಮಾನಿಗಳನ್ನು ರಂಜಿಸಲು ಒಡೆಯ ನಾಗಿ ಹೊಸ ಅವತಾರದಲ್ಲಿ ಚಾಲೆಂಜಿಂಗ್‍ಸ್ಟಾರ್ ದರ್ಶನ್ ಅವರು ಬೆಳ್ಳಿಪರದೆಯ ಮೇಲೆ ರಾರಾಜಿಸಲಿದ್ದಾರೆ, ಈಗಾಗಲೇ ಈ ಚಿತ್ರದ ಹಾಡುಗಳು ಹಾಗೂ ಟೀಸರ್‍ಗಳನ್ನು ನೋಡಿಯೇ ಅಭಿಮಾನಿಗಳು ಫಿದಾ ಆಗಿದ್ದು ನಮ್ಮ ಬಾಸ್ ಈ ವರ್ಷ ಹ್ಯಾಟ್ರಿಕ್ ಸಿನಿಮಾ ನೀಡೇ ನೀಡುತ್ತಾರೆ ಎಂಬ ವಿಶ್ವಾಸದಿಂದಿದ್ದಾರೆ.

ಅಂದಹಾಗೆ ಒಡೆಯ ಚಿತ್ರವನ್ನು ಎಂ.ಡಿ.ಶ್ರೀಧರ್ ಅವರು ನಿರ್ದೇಶಿಸಿದ್ದು, ಈ ಹಿಂದೆ ದಚ್ಚು ಹಾಗೂ ಶ್ರೀಧರ್‍ರ ಜೋಡಿಯಲ್ಲಿ ಮೂಡಿಬಂದಿದ್ದ ಪೆÇರ್ಕಿ ಹಾಗೂ ಬುಲ್‍ಬುಲ್ ಚಿತ್ರಗಳು ಬಾಕ್ಸ್‍ಆಫೀಸ್‍ನಲ್ಲಿ ಕೊಳ್ಳೆ ಒಡೆದಂತೆ ಒಡೆಯ ಬಿಡುಗಡೆಯಾಗುವ ಚಿತ್ರಮಂದಿರಗಳ ಮುಂದೆ ಹೌಸ್ ಬೋರ್ಡ್ ಬೀಳುವುದು ಗ್ಯಾರಂಟಿ.

ಪೈಲ್ವಾನ್, ಸೈರಾ ಚಿತ್ರಗಳ ಗೆಲುವಿನ ಅಲೆಯಲ್ಲಿ ತೇಲುತ್ತಿರುವ ಅಭಿನಯ ಚಕ್ರವರ್ತಿ ಸುದೀಪ್ ಕೂಡ ದಬಾಂಗ್ 3 ಚಿತ್ರದ ಮೂಲಕ ಈ ವರ್ಷ ಹ್ಯಾಟ್ರಿಕ್ ಗೆಲುವು ಕಾಣಲು ಹೊರಟಿರುವುದೇ ಅಲ್ಲದೆ ಬಾಲಿವುಡ್‍ನಲ್ಲೂ ತಮ್ಮ ಛಾಪನ್ನು ಆ ಚಿತ್ರದ ಮೂಲಕ ತೋರಿಸಲು ಮುಂದಾಗಿದ್ದಾರೆ.

ಬಾಲಿವುಡ್‍ನ ಬ್ಯಾಡ್‍ಬಾಯ್ ಎಂದೇ ಬಿಂಬಿಸಿಕೊಂಡಿರುವ ಸಲ್ಮಾನ್ ಖಾನ್ ಹಾಗೂ ಕರುನಾಡಿನ ಕಿಚ್ಚ ಸುದೀಪ್ ಅವರ ಕಾಂಬಿನೇಷನ್‍ನ ದಬಾಂಗ್ 3 ಚಿತ್ರವು ಡಿಸೆಂಬರ್ 20 ರಂದು ವಿಶ್ವದಾದ್ಯಂತ ತೆರೆ ಕಾಣಲು ಸಜ್ಜಾಗಿದ್ದು, ಕನ್ನಡ ಆವೃತ್ತಿಯ ದಬಾಂಗ್ 3 ಡಬ್ಬಿಂಗ್ ಕೆಲಸಗಳು ಕೊನೆಯ ಹಂತಕ್ಕೆ ಬಂದಿದ್ದು, ರಾಜ್ಯಾದಾದ್ಯಂತ ಅಂದು 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕಿಚ್ಚ ತಮ್ಮ ವಿಲನ್ ಅವತಾರ ಪ್ರದರ್ಶಿಸಲು ಹೊರಟಿದ್ದಾರೆ.

ಸುದೀಪ್ ಹಾಗೂ ದರ್ಶನ್ ಅವರ ಚಿತ್ರಗಳು ಈ ಬಾರಿ ಒಂದೇ ದಿನ ಬಿಡುಗಡೆಯಾಗುತ್ತದೆ, ಯಾರ ಚಿತ್ರವನ್ನು ನೋಡುವುದು, ಯಾರ ಸಿನಿಮಾವನ್ನು ಬಿಡುವುದು ಎಂಬ ಅನುಮಾನದಲ್ಲಿದ್ದ ಸಿನಿಪ್ರಿಯರಿಗೂ ಕೊಂಚ ರಿಲ್ಯಾಕ್ಸ್ ಸಿಕ್ಕಿದೆ.

ಅಂದ ಹಾಗೆ ಕಿಚ್ಚ ಸುದೀಪ್ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ಧರಿಸಿದ್ದ ಮೈ ಆಟೋಗ್ರಾಫ್ ಹಾಗೂ ಬಾಕ್ಸಾಫೀಸ್ ಸುಲ್ತಾನ ದರ್ಶನ್ ಅಭಿನಯದ ಸುಂಟರಗಾಳಿ ಸಿನಿಮಾವು 2006ರಫೆಬ್ರುವರಿ 17 ರಂದು ಏಕಕಾಲಕ್ಕೆ ಬಿಡುಗಡೆಗೊಂಡು ಬಾಕ್ಸಾಫೀಸ್ ಅನ್ನು ಧೂಳೆಬ್ಬಿಸಿತ್ತು.

ಅನಂತರ ಅವರಿಬ್ಬರ ನಟನೆಯ ಚಿತ್ರವು ಒಂದೇ ದಿನ ಯಾವತ್ತೂ ಬಿಡುಡೆಯಾಗಿರಲಿಲ್ಲವಾದರೂ, ಈ ಬಾರಿ ದರ್ಶನ್‍ರ ಒಡೆಯ ಹಾಗೂ ಸುದೀಪ್‍ರ ದಬಾಂಗ್ 3 ಚಿತ್ರಗಳು ಒಂದೇ ದಿನ ಬಿಡುಗಡೆಗೊಂಡು 13 ವರ್ಷಗಳ ದಾಖಲೆಯನ್ನು ಮುರಿಯುತ್ತದೆ ಎಂದು ಅಂದಾಜಿಸಲಾಗಿತ್ತಾದರೂ ಈ ಎರಡು ಚಿತ್ರಗಳು ವಾರದ ಅಂತರದಲ್ಲಿ ಬಿಡುಗಡೆಯಾಗುತ್ತಿರುವುದು ನಿರ್ಮಾಪಕರ ದೃಷ್ಟಿಯಿಂದಲೂ ಒಳ್ಳೆಯದೇ.

Share This With Your Friends

Related posts