Cinisuddi Fresh Cini News 

ಚಿರು ಸರ್ಜಾ ‘ರಾಜ ಮಾರ್ತಾಂಡ’ ಚಿತ್ರಕ್ಕೆ ಧ್ರುವ ಸರ್ಜಾ-ದರ್ಶನ್ ಸಾಥ್

ಸ್ಯಾಂಡಲ್‍ವುಡ್‍ನಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿಕೊಂಡು ಬೆಳೆಯುತ್ತಿದ್ದ ಯುವಪ್ರತಿಭೆ ಚಿರಂಜೀವಿ ಸಜರ್ ಅವರ ಅಕಾಲಿಕ ಮರಣ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಯಿತು. ಅವರ ಮೇಲೆ ಕೋಟಿ ಕೋಟಿ ಬಂಡವಾಳ ಹೂಡಿದ್ದ ನಿರ್ಮಾಪಕರಿಗೆ ಈಗ ದಿಕ್ಕೇ ತೋಚದಂತಾಗಿದೆ.

ಚಿರಂಜೀವಿ ಸಜರ್ ನಾಯಕನಾಗಿ ಕಾಣಿಸಿಕೊಂಡಿದ್ದ ಚಿತ್ರ ರಾಜ ಮಾರ್ತಾಂಡ. ಈ ಚಿತ್ರದ ನಾಯಕನ ಪಾತ್ರಕ್ಕೆ ಇದೀಗ ನಟ ಧ್ರುವ ಸರ್ಜಾ ಅವರು ಡಬ್ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ನಿರ್ದೇಶಕ ರಾಮ್ ನಾರಾಯಣ್ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ.

ಜೊತೆಗೆ ಚಿರು ಸರ್ಜಾ ಅಭಿನಯಿಸಿದ್ದ ರಾಜಮಾರ್ತಾಂಡ ಚಿತ್ರಕ್ಕೆ ಧ್ವನಿ ನೀಡುವುದಾಗಿ ನಟ ದರ್ಶನ್ ಸಹ ಮುಂದೆ ಬಂದಿದ್ದಾರೆ. ಚಿರು ಸರ್ಜಾ ಅಭಿನಯದ ರಾಜಮಾರ್ತಾಂಡ ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ತಿಯಾಗಿದ್ದು, ಡಬ್ಬಿಂಗ್ ಮಾತ್ರವೇ ಬಾಕಿ ಇದೆ.

ಈ ಸಿನಿಮಾಕ್ಕೆ ಧ್ವನಿ ನೀಡುವುದಾಗಿ ಸ್ವತಃ ದರ್ಶನ್ ಅವರೇ ಚಿತ್ರತಂಡಕ್ಕೆ ತಿಳಿಸಿದ್ದಾರೆ. ರಾಮ್ ನಾರಾಯಣ್ ನಿರ್ದೇಶನದ ಈ ಸಿನಿಮಾದ ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇದ್ದು, ಇದರ ಜೊತೆ ಡಬ್ಬಿಂಗ್ ಸಹ ಮಾಡಬೇಕಿದೆ. ಧ್ರುವ ಅವರು ಚಿರು ಪಾತ್ರಕ್ಕೆ ಡಬ್ಬಿಂಗ್ ಮಾಡಿಕೊಡುವುದಾಗಿ ಒಪ್ಪಿಕೊಂಡಿದ್ದಾರೆ.

ನಿರ್ದೇಶಕರು ಚಿರು ಪಾತ್ರಕ್ಕೆ ಧ್ರುವ ಧ್ವನಿಯನ್ನೇ ಬಳಸುವುದಾಗಿ ಹೇಳಿದ್ದಾರಾದರೂ, ದರ್ಶನ್ ಅವರ ಧ್ವನಿಯೂ ಇರಲಿದೆ ಎಂದಿದ್ದಾರೆ. ದರ್ಶನ್ ಅವರು ರಾಜ ಮಾರ್ತಾಂಡ ಚಿತ್ರದ ನಿರ್ಮಾಪಕರಿಗೆ ಆಪ್ತರಾಗಿದ್ದು, ಈಗ ಧ್ವನಿ ನೀಡುವುದಾಗಿ ಮುಂದೆ ಬಂದಿದ್ದಾರೆ.

ಹಾಗಾಗಿ ದರ್ಶನ್ ಅವರ ಧ್ವನಿಯನ್ನು ಸಿನಿಮಾದಲ್ಲಿ ಬಳಸಿಕೊಳ್ಳಲಿದ್ದೇವೆ, ಆದರೆ ಧ್ರುವ ಸರ್ಜಾ ಧ್ವನಿಯನ್ನು ಚಿರು ಪಾತ್ರಕ್ಕೆ ಬಳಸಿಕೊಳ್ಳಲಿದ್ದೇವೆ ಎಂದಿದ್ದಾರೆ. ದರ್ಶನ್ ಅವರು ನಮ್ಮ ರಾಜಮಾರ್ತಾಂಡ ಸಿನಿಮಾಕ್ಕೆ ಆರಂಭದಿಂದಲೂ6 ಬೆನ್ನೆಲುಬಾಗಿದ್ದರು.

ಅವರ ಗೆಳೆಯನ ಸಿನಿಮಾಕ್ಕೆ ಸಹಾಯ ಮಾಡಲು ಈಗ ಮುಂದೆ ಬಂದಿದ್ದಾರೆ. ಅವರಿಗೆ ಚಿತ್ರತಂಡ ಋಣಿಯಾಗಿದೆ ಎಂದು ನಿರ್ದೇಶಕ ರಾಮ್‍ನಾರಾಯಣ್ ಹೇಳಿದ್ದಾರೆ.

ಚಿರಂಜೀವಿ ಸರ್ಜಾ ಅವರು ನಿಧನ ಹೊಂದುವುದಕ್ಕೂ ಮುನ್ನ ಹಲವು ಪ್ರಾಜೆಕ್ಟ್‍ಗಳಲ್ಲಿ ತೊಡಗಿಕೊಂಡಿದ್ದರು. ಆದರೆ, ಅವರ ನಿಧನದ ನಂತರ ಆ ಸಿನಿಮಾಗಳು ಅರ್ಧಕ್ಕೆ ನಿಂತುಹೋಗಿದ್ದವು. ಆ ಚಿತ್ರಗಳ ನಿರ್ಮಾಪಕರಿಗೆ ಹೊರೆಯಾಗದಂತೆ ಧೃವ ಸರ್ಜಾ ಇದೀಗ ಅವರ ಸಹಾಯಕ್ಕೆ ನಿಂತಿದ್ದಾರೆ.

ರಾಜಮಾರ್ತಾಂಡ ಚಿತ್ರದ ಒಂದು ಹಾಡಿನ ಚಿತ್ರೀಕರಣ ಹಾಗೂ ಡಬ್ಬಿಂಗ್ ಬಾಕಿ ಉಳಿದಿತ್ತು. ಅಷ್ಟರಲ್ಲಾಗಲೇ ಚಿರಂಜೀವಿ ಅವರು ಇಹಲೋಕ ತ್ಯಜಿಸಿದ್ದು, ಚಿತ್ರತಂಡ ಕಂಗಾಲಾಗುವಂತೆ ಮಾಡಿತ್ತು. ಸಂಕಷ್ಟದಲ್ಲಿದ್ದ ಚಿತ್ರತಂಡಕ್ಕೆ ಧ್ರುವ ಸರ್ಜಾ ಹಾಗೂ ನಟ ದರ್ಶನ್ ಅವರು ಬೆಂಬಲ ನೀಡುತ್ತಿದ್ದಾರೆ.

Share This With Your Friends

Related posts