Cinisuddi Fresh Cini News 

ಶೂಟಿಂಗ್ ಮುಗಿಸಿದ “ದಾರಿ ಯಾವುದಯ್ಯಾ ವೈಕುಂಠಕೆ ” ಚಿತ್ರತಂಡ

ಶ್ರೀ ಬಸವೇಶ್ವರ ಕ್ರಿಯೇಷನ್ಸ್ ಲಾಂಛನದಲ್ಲಿ ಶರಣಪ್ಪ ಎಂ ಕೊಟಗಿ ಅವರು ನಿರ್ಮಿಸಿರುವ ‘ದಾರಿ ಯಾವುದಯ್ಯಾ ವೈಕುಂಠಕ್ಕೆ’ ಚಿತ್ರದ ಚಿತ್ರೀಕರಣ ಪೂರ್ಣವಾಗಿದೆ.

ಲಾಕ್ ಡೌನ್ ತೆರವಿನ‌ ನಂತರ ಸರ್ಕಾರ ಅರ್ಧ ಭಾಗ ಚಿತ್ರೀಕರಣವಾಗಿರುವ ಚಿತ್ರಗಳ‌ ಚಿತ್ರೀಕರಣ ಪೂರ್ಣ ಮಾಡಲು ಅನುಮತಿ ನೀಡಿತು. ನಂತರ ಸರ್ಕಾರದ ಆದೇಶ ಪಾಲಿಸಿ ಬೆಂಗಳೂರಿನಲ್ಲಿ ‌ಕೊನೆಯ ಹಂತದ ಚಿತ್ರೀಕರಣ ಪೂರ್ಣ ಗೊಳಿಸಿ ಕುಂಬಳಕಾಯಿ ಒಡೆಯಲಾಯಿತು.

ವರ್ಧನ್, ಅನುಷ, ಬಲ ರಾಜವಾಡಿ ಮುಂತಾದವರು ಈ‌ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ವಿಭಿನ್ನ ಕಥಾಹಂದರ ‌ಹೊಂದಿರುವ ಈ ಚಿತ್ರಕ್ಕೆ ಸದ್ಯದಲ್ಲೇ ಚಿತ್ರೀಕರಣ ನಂತರ ಚಟುವಟಿಕೆ ಪ್ರಾರಂಭವಾಗಲಿದೆ .

ಈ ಹಿಂದೆ ‘ಕೃಷ್ಣ ಗಾರ್ಮೆಂಟ್ಸ್’ ಚಿತ್ರ ನಿರ್ದೇಶಿಸಿದ್ದ ಸಿದ್ದು ಪೂರ್ಣಚಂದ್ರ ಈ ಚಿತ್ರದ ನಿರ್ದೇಶಕರು. ವರ್ಧನ್ ತೀರ್ಥಹಳ್ಳಿ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿ ಅನುಷ. ‘ಡಿಂಗ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಅನುಷ ಅವರು ಶ್ರೀಮಾನ್ ಶ್ರೀ ಮತಿ ಹಾಗೂ ಅವಳು ಸುಜಾತ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

‘ತಿಥಿ’ ಚಿತ್ರದ ಖ್ಯಾತಿ ಪೂಜ, ಬಲ ರಾಜವಾಡಿ, ಶೀಬಾ, ಡಿ.ವಿ.ನಾಗರಾಜ್, ಸುಚಿತ್, ಅರುಣ್‌ ಮೂರ್ತಿ, ಸಂಗೀತ, ಗೌಡಿ, ಸಿದ್ಧಾರ್ಥ್, ಪ್ರಣಯ್ ಮೂರ್ತಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಭಗತ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ನಿತಿನ್ ಛಾಯಾಗ್ರಹಣ ಹಾಗೂ ಮುತ್ತುರಾಜ್ ಸಂಕಲನವಿದೆ.

Share This With Your Friends

Related posts