Cinisuddi Fresh Cini News 

ಮೇ 20ಕ್ಕೆ “ದಾರಿ ಯಾವುದಯ್ಯಾ ವೈಕುಂಠಕೆ” ದರ್ಶನ

ಬಹಳಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿರುವ ಚಿತ್ರ “ದಾರಿ ಯಾವುದಯ್ಯಾ ವೈಕುಂಠಕ್ಕೆ” ಕಳ್ಳನ ಎದೆಯಲ್ಲಿ ಕಾರುಣ್ಯ ಹುಟ್ಟಿಸುವ ಅಪೂರ್ವ ದೃಶ್ಯ ಕಾವ್ಯವಾಗಿ ಹೊರ ಬಂದಿರುವ ಚಿತ್ರ ಎಂಬ ಮಾತು ಈಗ ಕೇಳಿ ಬರ್ತಿದೆ. ಈಗಾಗಲೇ ಈ ಚಿತ್ರವು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪಾಲ್ಗೊಂಡ ಸುಮಾರು ನೂರಐವತ್ತು ಕ್ಕೂ ಅಧಿಕ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

ಈಗ ಇದೇ 20ರಂದು ರಾಜ್ಯಾದ್ಯಂತ ಅದ್ದೂರಿಯಾಗಿ “ದಾರಿ ಯಾವುದಯ್ಯ ವೈಕುಂಠಕ್ಕೆ” ಚಿತ್ರ ಬಿಡುಗಡೆಯಾಗುತ್ತಿದೆ. “ಶರಣಪ್ಪ ಎಂ ಕೊಟಗಿ” ಯವರ ಚೊಚ್ಚಲ ನಿರ್ಮಾಣದಲ್ಲಿ “ಶ್ರೀ ಬಸವೇಶ್ವರ ಕ್ರಿಯೇಷನ್ಸ್” ಲಾಂಛನದ, ಇನ್ಪ್ಯಾಂಟ್ ಸಿನಿ ಕ್ರಿಯೇಷನ್ಸ್ ಮೂಲಕ ಜನರ ಮುಂದೆ ತರುತ್ತಿದ್ದಾರೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ ಸಿದ್ದು ಪೂರ್ಣಚಂದ್ರ. ಈ ಚಿತ್ರವನ್ನು ಸ್ಕೈಲೈನ್ ದಿಲೀಪ್ ರವರು ತಮ್ಮ ಮ್ಯೂಸಿಕ್ ಬಾಕ್ಸ್ ಮೂಲಕ ಪ್ರಥಮ ಬಾರಿಗೆ ರಾಜ್ಯಾದ್ಯಂತ ವಿತರಣೆ ಮಾಡಲು ಮುಂದಾಗಿದ್ದಾರೆ.

ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ(2021-22) ಆಯ್ಕೆಯಾಗಿ, ಕನ್ನಡ ಸ್ಪರ್ಧಾತ್ಮಕ ವಿಭಾಗದಲ್ಲಿ “ಅತ್ಯುತ್ತಮ ಕನ್ನಡ ಚಿತ್ರ” ಪ್ರಶಸ್ತಿಯನ್ನು ಈ ಚಿತ್ರ ತನ್ನ ಮುಡಿಗೇರಿಸಿಕೊಂಡಿದೆ.

ಮಲೇಷ್ಯಾ, ಜರ್ಮನಿ, ಬಾಂಗ್ಲಾದೇಶ, ಲಂಡನ್, ಸ್ಪೇನ್,ಅಮೆರಿಕಾ, ಇಟಲಿ, ಸಿಂಗಾಪುರ್, ಔರಂಗಾಬಾದ್, ಕಲ್ಕತ್ತಾ, ಮಹಾರಾಷ್ಟ್ರ, ಕೇರಳ, ಬಿಹಾರ್, ರಾಜಸ್ಥಾನ್, ಕಾಶೀ, ದೆಹಲಿ, ಹೈದರಾಬಾದ್ ಇನ್ನೂ ಮುಂತಾದ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡು ಸುಮಾರು ನೂರೈವತ್ತಕ್ಕೂ(150+)ಹೆಚ್ಚು ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಈ ಚಿತ್ರದಲ್ಲಿ ರಾಜ್ಯಪ್ರಶಸ್ತಿ ವಿಜೇತೆ “ತಿಥಿ ಖ್ಯಾತಿಯ ಪೂಜಾ” ಅಭಿನಯಿಸಿದ್ದಾರೆ. ಜೊತೆಗೆ ವರ್ಧನ್, ಬಲ ರಾಜ್ವಾಡಿ, ಅನುಷಾ, ಶೀಬಾ, ಸ್ಪಂದನ ಪ್ರಸಾದ್, ಅರುಣ್ ಮೂರ್ತಿ, ಸುಚಿತ್, ಸುಧಾ, ಪ್ರಣಯ ಮೂರ್ತಿ, ಸಿದ್ದಾರ್ಥ್, ಗೌಡಿ, ಡಿ.ವಿ ನಾಗರಾಜ್, ಸಂಗೀತ, ಪ್ರಶಾಂತ್ ರಾವ್ ವರ್ಕು, ದಯಾನಂದ್, ಶಶಿಧರ್, ಸುರಂಜನ್, ಮಹೇಶ, ಅರುಣ್ ನಾಯಂಡಹಳ್ಳಿ, ಶಿವು ರಾಮನಗರ, ಇನ್ನೂ ಮುಂತಾದವರ ತಾರಾಗಣವಿದೆ.

ಈ ಒಂದು ವಿಭಿನ್ನ ಚಿತ್ರಕ್ಕೆ ಸಂಗೀತ ಲೋಕಿ , ಛಾಯಾಗ್ರಹಣ ನಿತಿನ್ ಅಪ್ಪಿ ,
ಶಬ್ದವಿನ್ಯಾಸ ರಾಜ್ ಭಾಸ್ಕರ್ ,
ಕಲರಿಂಗ್ ನಿಖಿಲ್ ಕಾರ್ಯಪ್ಪ ,
ಸಂಕಲನ ಮುತ್ತುರಾಜ್. ಟಿ ,
ವಸ್ತ್ರ ವಿನ್ಯಾಸ ನಾಗರತ್ನ .ಕೆ .ಹೆಚ್
ಎಫೆಕ್ಟ್ಸ್ ಶಂಕರ್ ,
ಮೇಕಪ್ ಗಂಗಾರೆಡ್ಡಿ ,
ಪ್ರಚಾರ ಕಲೆ ಅವೀಸ್ ,
ಪತ್ರಿಕಾ ಸಂಪರ್ಕ ಸುಧೀಂದ್ರ ವೆಂಕಟೇಶ್ ಹೀಗೆ ತಾಂತ್ರಿಕ ಹಾಗೂ ಕಲಾವಿದರ ಬಳಗ ಸೇರಿಕೊಂಡು ನಿರ್ಮಿಸಿರುವ ಈ “ದಾರಿ ಯಾವುದಯ್ಯಾ ವೈಕುಂಠಕ್ಕೆ” ಚಿತ್ರ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದ್ದು, ಈಗಾಗಲೇ ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಎಲ್ಲರ ಗಮನವನ್ನು ಸೆಳೆದಿದೆ. ಇನ್ನೇನಿದ್ದರೂ ಪ್ರೇಕ್ಷಕ ಪ್ರಭುಗಳು ಚಿತ್ರವನ್ನು ನೋಡಿ ತಿಳಿಸಬೇಕು.

Related posts