Cinisuddi Fresh Cini News 

ಮತ್ತೊಮ್ಮೆ ತೆರೆಮೇಲೆ ‘ದಮಯಂತಿ’ ಆರ್ಭಟ

ಗಾಂಧಿನಗರದ ಚಿತ್ರಮಂದಿರಗಳ ಪರದೆಯ ಮೇಲೆ ಕಳೆದ ವಾರದಿಂದ ಮತ್ತೆ ಬೆಳಕು ಪ್ರಕಾಶಿಸುತ್ತಿರುವುದರಿಂದ ಏಳು ತಿಂಗಳ ನಂತರ ಚಿತ್ರರಂಗ ಮತ್ತೆ ಗರಿಗೆದರಿದೆ.

ಕಳೆದ ವಾರ ಕೆಲವು ಚಿತ್ರಗಳು ರಿರೀಲಿಸ್ ಆಗಿದ್ದರೆ, ಈ ಬಾರಿಯು ಹಲವು ಹಳೇ ಚಿತ್ರಗಳೇ ಮರುಪ್ರಸಾರ ಕಾಣುತ್ತಿವೆ. ಈ ಸಾಲಿನಲ್ಲಿ ರಾಧಿಕಾ ಕುಮಾರಸ್ವಾಮಿ ನಟಿಸಿ ನವರಸನ್ ನಿರ್ದೇಶಿಸಿದ್ದ ದಮಯಂತಿ ಕೂಡ ಒಂದು.

ರಾಕಾಕುಮಾರಸ್ವಾಮಿ ವಿಭಿನ್ನ ಪಾತ್ರದಲ್ಲಿ ನಟಿಸಿದ್ದ ದಮಯಂತಿ ಸಿನಿ ಪ್ರೇಕ್ಷಕರ ಮನ ಗೆದ್ದು ಸಕ್ಸಸ್ ಹಾದಿಯಲ್ಲಿ ಸಾಗಿತ್ತು.ಈಗ ದಸರಾದ ಉಡುಗೊರೆಯಾಗಿ ದಮಯಂತಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದ್ದು ನಾವು ಸರಿಯಾದ ಸಮಯದಲ್ಲಿ ಚಿತ್ರವನ್ನು ಮರುಬಿಡುಗಡೆ ಮಾಡುತ್ತಿದ್ದೇವೆ ಎಂಬ ಅಭಿಪ್ರಾಯವು ಚಿತ್ರತಂಡದವರಿಂದ ಬಂದಿದೆ.

ನಮ್ಮ ದಮಯಂತಿ ಚಿತ್ರವು ತುಂಬಾ ಚೆನ್ನಾಗಿದ್ದು ಪ್ರೇಕ್ಷಕರ ಒತ್ತಾಯದ ಮೇರೆಗೆ ಆ ಚಿತ್ರವನ್ನು ಮರುಬಿಡುಗಡೆ ಮಾಡುವ ನಿರ್ಧಾರವನ್ನು ಚಿತ್ರತಂಡ ಮಾಡಿದೆ. ಕಳೆದ ವರ್ಷ ನವೆಂಬರ್ 29 ರಂದು ದಮಯಂತಿ ಚಿತ್ರವು ಬೆಳ್ಳಿಪರದೆಯ ಮೇಲೆ ರಾರಾಜಿಸಿ ತನ್ನ ವಿಶಿಷ್ಟ ಡೈಲಾಗ್‍ಗಳಿಂದಲೇ ಜನರನ್ನು ಮಂತ್ರಮುಗ್ಧಗೊಳಿಸಿತ್ತು.

ದಮಯಂತಿ ಚಿತ್ರದಲ್ಲಿ ರಾಕಾರೊಂದಿಗೆ ಸೌರವ್ ಲೋಕೇಶ್, ಶರಣ್ ಉಲ್ತಿ, ಸಾಧುಕೋಕಿಲಾ ಮುಂತಾದವರು ನಟಿಸಿದ್ದು ಆರ್.ಎಸ್.ಗಣೇಶ್ ನಾರಾಯಣ್ ಅವರ ಇಂಪಾದ ಸಂಗೀತವು ಪ್ರೇಕ್ಷಕರನ್ನು ಸೆಳೆದಿತ್ತು.  ದಸರಾ ಅಂಗವಾಗಿ ಮರುಬಿಡುಗಡೆಯಾಗುತ್ತಿರುವ ದಮಯಂತಿ ಗೆಲುವಿನ ಹಾದಿಯಲ್ಲಿ ಸಾಗುವಂತಾಗಲಿ.

Related posts