Cinisuddi Fresh Cini News 

ಸೂಪರ್ ಸ್ಟಾರ್ ರಜಿನಿಕಾಂತ್ ಗೆ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ

ಚನ್ನೈ,ಏ.1- ಭಾರತದ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಪ್ರತಿಷ್ಟಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಒಲಿದು ಬಂದಿದೆ.ದಕ್ಷಿಣ ಭಾರತದ ಕನ್ನಡ, ತಮಿಳು, ತೆಲಗು, ಮಲೆಯಾಳಂ, ಹಿಂದಿ, ಮರಾಠಿ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ರಜನಿಕಾಂತ್ ಅವರ ಚಿತ್ರಗಳು ಹಾಲಿವುಡ್ ಕೂಡ ಎಂಟ್ರಿಕೊಟ್ಟು ಇಡೀ ವಿಶ್ವಾದ್ಯಂತ ಅಭಿಮಾನಿಗಳ ಪ್ರೀತಿ, ವಿಶ್ವಾಸವನ್ನು ಗಳಿಸಿವೆ.

ಭಾರತದಲ್ಲಿ ಅವರ ಚಿತ್ರಗಳು ಬಿಡುಗಡೆಯಾಗುತ್ತಿದೆ ಎಂದರೆ ಹಬ್ಬದ ಸಂಭ್ರಮ ಮೂಡುತ್ತಿತ್ತು. ಇಡೀ ಚಿತ್ರರಂಗದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಮತ್ತು ಬಾರೀ ಹೂಡಿಕೆಯ ಬ್ಲಾಕ್ ಬಸ್ಟರ್ ಸಿನಿಮಾಗಳು ಮೂಡು ಬರುತ್ತಿರುವುದಕ್ಕೆ ಅವರ ವರ್ಚಸ್ಸೆ ಮುಖ್ಯ ಕಾರಣ.

ಜಪಾನ್, ಚೀನಾ, ಅಮೆರಿಕಾ ಸೇರಿದಂತೆ ಹಲವು ರಾಷ್ಟ್ರಗಳಲ್ಲೂ ರಜನಿಕಾಂತ್ ಅಭಿಮಾನಿಗಳು ಇದ್ದಾರೆ. ಅವರ ಚಿತ್ರಗಳು ಇಲ್ಲಿಯೂ ಕೂಡ ಸೂಪರ್‍ಡೂಪರ್ ಹಿಟ್ ಆಗುತ್ತಿವೆ. ಕೇಂದ್ರ ಸಂಸ್ಕøತಿ ಸಚಿವಾಲಯ ಇಂದು ಬೆಳಗ್ಗೆ ರಜನಿಕಾಂತ್ ಅವರಿಗೆ 51ನೇ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಿಸಿದೆ.

ವಿಶೇಷವೆಂದರೆ ದಕ್ಷಿಣ ಭಾರತದಲ್ಲಿ ಪ್ರತಿಷ್ಠಿತ ಪ್ರಶಸ್ತಿ ಪಡೆಯುತ್ತಿರುವ ಚಿತ್ರರಂಗದ 12ನೇಯವರಾಗಿದ್ದಾರೆ. ಈ ಹಿಂದೆ ಡಾ.ರಾಜ್‍ಕುಮಾರ್, ಅಕ್ಕಿನೇನಿ ನಾಗೇಶ್ವರರಾವ್, ಕೆ.ಬಾಲಚಂದರ್ ಸೇರಿದಂತೆ ಹಲವು ದಿಗ್ಗಜ ನಟರಿಗೆ ಈ ಪ್ರಶಸ್ತಿ ಒಲಿದು ಬಂದಿತ್ತು.

Related posts