Cinisuddi Fresh Cini News 

‘ದಾರಿ ಯಾವುದಯ್ಯಾ ವೈಕುಂಠಕ್ಕೆ’ ಚಿತ್ರಕ್ಕೆ ಮುಹೂರ್ತ

ಹಫ್ತಾ ಖ್ಯಾತಿಯ ವರ್ಧನ್ ತೀರ್ಥಹಳ್ಳಿ ಹಾಗೂ ತಿಥಿ ಖ್ಯಾತಿಯ ಪೂಜಾ ನಾಯಕಿಯಾಗಿ ನಟಿಸುತ್ತಿರುವ ದಾರಿ ಯವುದಯ್ಯ ವೈಕುಂಠಕ್ಕೆ ಚಿತ್ರದ ಮುಹೂರ್ತ ಸಮಾರಂಭ ಮೊನ್ನೆ ಅದ್ಧೂರಿಯಾಗಿ ನಡೆಯಿತು. ಇದೇ ವೇಳೆ ಚಿತ್ರದ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಯಿತು.
ಶ್ರೀ ಬಸವೇಶ್ವರ ಕ್ರಿಯೇಷನ್ಸ್ ಬ್ಯಾನರ್‍ನಲ್ಲಿ ಶರಣಪ್ಪ ಎಂ.ಕೋಟಗಿ ನಿರ್ಮಿಸಿರುವ ದಾರಿ ಯಾವುದಯ್ಯ ವೈಕುಂಠಕ್ಕೆ ಚಿತ್ರವನ್ನು ಸಿದ್ದು ಪೂರ್ಣಚಂದ್ರ ನಿರ್ದೇಶಿಸಿದ್ದಾರೆ.

ನಿರ್ದೇಶಕ ಸಿದ್ದು ಪೂರ್ಣಚಂದ್ರ ಮತನಾಡಿ, ಕೃಷ್ಣ ಗಾರ್ಮೆಂಟ್ಸ್ ಚಿತ್ರದ ನಂತರ ನಾನು ನಿರ್ದೇಶಿಸಿರುವ ಎರಡನೇ ಚಿತ್ರವಿದು. ಈ ಚಿತ್ರದ ಕಥೆಯನ್ನು ನಿರ್ಮಾಪಕ ಶರಣಪ್ಪಗೆ ಹೇಳಿದಾಗ ನಿರ್ಮಾಣ ಮಾಡಲು ಒಪ್ಪಿದರು. ವೈಕುಂಠವನ್ನು ಒಬ್ಬೊಬ್ಬರು ಒಂದೊಂದು ದೃಷ್ಟಿಯಲ್ಲಿ ನೋಡುತ್ತಾರೆ, ಈ ಚಿತ್ರದ ಪಾತ್ರಧಾರಿಗಳು ಹಾಗೆ ಇರುವುದರಿಂದ ಈ ಚಿತ್ರಕ್ಕೆ ದಾರಿ ಯಾವುದಯ್ಯಾ ವೈಕುಂಠಕ್ಕೆ ಎಂಬ ಶೀರ್ಷಿಕೆ ಇಟ್ಟಿದ್ದೇನೆ ಎಂದರು.

ನಾಯಕ ವರ್ಧನ್ ಮಾತನಾಡಿ, ಹಫ್ತಾ ಚಿತ್ರದಲ್ಲಿ ನಟಿಸಿದ ನಂತರ ಹಲವು ಚಿತ್ರಗಳಲ್ಲಿ ನಟಿಸುವ ಅವಕಾಶಗಳು ಬಂದವು. ಆದರೆ ಅವುಗಳ ಕಥೆಗಳು ನನಗೆ ಹಿಡಿಸಲಿಲ್ಲ, ಆದರೆ ಸಿದ್ದು ಪೂರ್ಣಚಂದ್ರ ಅವರು ಹೇಳಿದ ಕಥೆ ಹಿಡಿಸಿತು. ಕ್ರಿಮಿನಲ್ ಹಿನ್ನೆಲೆಯಿರುವ ವ್ಯಕ್ತಿಯು ಭಾವನೆಗಳ ಸುಳಿಗೆ ಸಿಲುಕಿ ಹೇಗೆ ಬದಲಾಗುತ್ತಾನೆ ಎಂಬುದನ್ನು ಚಿತ್ರದಲ್ಲಿ ಬಿಂಬಿಸಿದ್ದರೆ, ಆಕಸ್ಮಿಕವಾಗಿ ಒಮ್ಮೆ ನಾಯಕ ಸ್ಮಶಾನಕ್ಕೆ ಹೋಗಬೇಕಾದ ಸಂದರ್ಭ ಬರುತ್ತದೆ. ಅಲ್ಲಿಂದ ಬಂದ ಮೇಲೆ ಅವನ ಜೀವನ ಒಂದು ತಿರುವು ಪಡೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.

ನಾನು ಈ ಹಿಂದೆ ನಟಿಸಿದ್ದ ಎರಡು ಚಿತ್ರಗಳ ಪಾತ್ರಗಳಿಗಿಂತ ಈ ಪಾತ್ರ ನನ್ನನ್ನು ತುಂಬಾ ಕಾಡಿತು. ಸ್ಕ್ರಿಪ್ಟ್ ತುಂಬಾ ಚೆನ್ನಾಗಿದೆ ಅದ್ದರಿಂದ ನಟಿಸಲು ಗ್ರೀನ್‍ಸಿಗ್ನಲ್ ಕೊಟ್ಟೆ ಎಂದವರು ನಾಯಕಿ ಪೂಜಾ.

ನಿರ್ಮಾಪಕ ಶರಣಪ್ಪ ಮಾತನಾಡಿ, ನಿರ್ದೇಶಕರು ತುಂಬಾ ಶ್ರಮಪಟ್ಟು ಈ ಸಿನಿಮಾವನ್ನು ನಿರ್ದೇಶಿಸಿದ್ದು, ಈ ಚಿತ್ರವನ್ನು ನಿರ್ಮಿಸಲು ನನ್ನ ಸ್ನೇಹಿತರು ಕೈ ಜೋಡಿಸಿದ್ದಾರೆ , ಚಿತ್ರಕ್ಕೆ ಬೆಂಗಳೂರು, ರಾಮನಗರ ಸುತ್ತಮುತ್ತ ಶೂಟಿಂಗ್ ನಡೆಯಲಿದೆ. ದಾರಿ ಯಾವುದಯ್ಯ ವೈಕುಂಠಕ್ಕೆ ಎಂಬ ಟೈಟಲ್ ಕ್ಯಾಚಿ ಆಗಿದ್ದು ಚಿತ್ರ ಬಿಡುಗಡೆಯಾದ ನಂತರ ದಾರಿ ಯಾವುದೆಲ್ಲಾ ಸಕ್ಸಸ್ ಎಂಬ ಸೂತ್ರವನ್ನು ಚಿತ್ರತಂಡವು ಕಂಡುಕೊಳ್ಳುವಂತಾಗಲಿ.

Share This With Your Friends

Related posts