Cinisuddi Fresh Cini News 

ಮೈಸೂರಿನ ಈ ಛತ್ರದಲ್ಲಿ ಡಿ ಬಾಸ್ ಮಾಡಿದ್ದು ಏನು ಗೊತ್ತೇ…?

ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ. ಪ್ರತಿಯೊಬ್ಬ ಮನುಷ್ಯನು ಜೀವನ ನಡೆಸುವುದೇ ಅನ್ನಕ್ಕಾಗಿ.ಕೊರೋನಾ ಆರ್ಭಟದಿಂದ ತತ್ತರಿಸಿರುವ ನಿರ್ಗತಿಕರು , ಬಡಜನರು ಊಟಕ್ಕಾಗಿ ಪರದಾಡುತ್ತಿದ್ದಾರೆ. ಇದನ್ನು ಅರಿತ ಬಹಳಷ್ಟು ಸಿನಿಮಾ ತಾರೆಯರು ಬಡವರ ನೆರವಿಗೆ ಬಂದಿದ್ದರೆ. ಆ ಸಾಲಿಗೆ ಚಾಲೆಂಜಿಂಗ್ ಸ್ಟಾರ್ ಕೂಡ ಮುಂಚೂಣಿಯಲ್ಲಿದ್ದಾರೆ.

ದರ್ಶನ್ ತಾವು ಮಾಡುವ ಸಹಾಯದ ಬಗ್ಗೆ ಎಂದು ಹೇಳಿಕೊಳ್ಳೋದಿಲ್ಲ. ತಮ್ಮ ಒಳ್ಳೆಯ ಕೆಲಸದ ಲೆಕ್ಕ ದೇವರಿಗೆ ತಲುಪಿದರೆ ಸಾಕು ಎನ್ನುವಂಥವರು. ಅದೇ ರೀತಿ ಈ ಕಷ್ಟದ ಸಮಯದಲ್ಲಿ ತಮ್ಮ ಅಭಿಮಾನಿಗಳ ಮೂಲಕ ನಿರ್ಗತಿಕರು ಹಾಗೂ ಕಡು ಬಡವರಿಗೆ ಆಹಾರ ಒದಗಿಸುವ ಕೆಲಸ ಮಾಡುತ್ತಿದ್ದಾರೆ.

ಇಡೀ ದೇಶವೇ ಲಾಕ್ ಡೌನ್ ಆದಾಗ ದರ್ಶನ್ ತಗೊಂಡ ನಿರ್ಧಾರ ತುಂಬಾ ಅನುಕೂಲ ಆಗುತ್ತಿದೆ. ಯಾಕೆಂದರೆ ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಪ್ರತಿ ದಿನ ಬೆಳಿಗ್ಗೆ , ಮಧ್ಯಾಹ್ನ ಹಾಗೂ ರಾತ್ರಿ ಮೂರು ಹೊತ್ತು ಕೂಡ ರಸ್ತೆ ಬದಿಯಲ್ಲಿ ವಾಸ ಮಾಡುವ ನಿರ್ಗತಿಕರಿಗೆ ಹಾಗೂ ಹಸಿವಿನಲಿರುವ ಪ್ರತಿಯೊಬ್ಬರಿಗೂ ಕೂಡ ಛತ್ರದಲ್ಲಿ ಊಟದ ವ್ಯವಸ್ಥೆ ಮಾಡಿದ್ದಾರೆ.

ಪ್ರತಿದಿನ 500 ಕ್ಕೂ ಹೆಚ್ಚು ಹಸಿದವರ ಹೊಟ್ಟೆ ತುಂಬಿಸುವ ಪುಣ್ಯದ ಕೆಲಸ ನಿರಂತರವಾಗಿ ನಡೆಯುತ್ತಲೇ ಇದೆ. ಊಟ ಮಾತ್ರವಲ್ಲ ಪ್ರತಿದಿನ ಟೀ ಕೂಡ ಮಾಡಿಕೊಟ್ಟು ಇವರೆಲ್ಲರನ್ನು ಮನೆಯವರಂತೆ ನೋಡಿಕೊಳ್ಳುತ್ತಿರುವುದು ಮೆಚ್ಚಲೇಬೇಕು.

ಈ ವಿಷಯ ತಿಳಿದ ಯುವ ಸಂಸದ ಪ್ರತಾಪ್ ಸಿಂಹ ಕೂಡ ನಂಜರಾಜ ಛತ್ರದ ಬಳಿ‌ ಬಂದು ನೋಡಿ ನಿಜಕ್ಕೂ ಆಶ್ಚರ್ಯಪಟ್ಟಿದ್ದಾರೆ. ಪ್ರತಿ ದಿನ ನೂರಾರು ಜನರಿಗೆ ಅನ್ನ ನೀಡುತ್ತಿರುವ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ದರ್ಶನ್ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ನಿಜವಾಗಿಯೂ ದರ್ಶನ್ ಮಾಡುತ್ತಿರುವ ಈ ಕೆಲಸಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ರೀತಿ ಬಡವರಿಗೆ ಸಹಾಯ ಮಾಡುತ್ತಾ ಮುಂದೆ ಸಾಗಲಿ.

Share This With Your Friends

Related posts