Cinisuddi Fresh Cini News 

‘ಕ್ರಿಟಿಕಲ್ ಕೀರ್ತನೆಗಳು’ ಚಿತ್ರದಲ್ಲಿ ಬೆಟ್ಟಿಂಗ್ ನ ಕರಾಳ ಮುಖದ ದರ್ಶನ

ಒಂದು ಕಾಲದಲ್ಲಿ ಕ್ರಿಕೆಟ್ ಆಟವು ಮನರಂಜನೆ ಕೊಡುತ್ತದೆಂದು ಹೇಳುತ್ತಿದ್ದರು, ಕಾಲ ಬದಲಾದಂತೆ ಇದು ವ್ಯಾಪಾರ ಎನ್ನುವಂತೆ ಆಗಿದೆ. ಅದರಲ್ಲೂ ಐಪಿಎಲ್ ಮ್ಯಾಚ್‍ದಲ್ಲಿ ಬೆಟ್ಟಿಂಗ್ ದಂದೆ ಶುರುವಾಗಿ ಹಲವು ಕುಟುಂಬಗಳು ಕಷ್ಟದ ಸುಳಿಗೆ ಸಿಲುಕಿದೆ.

ಇಂತಹುದೆ ಒಂದಷ್ಟು ನೈಜ ಘಟನೆಗಳನ್ನು ಹೆಕ್ಕಿಕೊಂಡು ಅದನ್ನು ‘ಕ್ರಿಟಿಕಲ್ ಕೀರ್ತನೆಗಳು’ ಚಿತ್ರದ ಮೂಲಕ ತೋರಿಸಲಾಗಿದೆ. ಬಿಡುಗಡೆ ಪೂರ್ವ ಸುದ್ದಿಗೋಷ್ಟಿಯಲ್ಲಿ ನಿರ್ದೇಶಕ ಕುಮಾರ್ ಹೇಳುವಂತೆ ಪ್ರತಿ ವರ್ಷ ಬೆಟ್ಟಿಂಗ್‍ನಿಂದ ಸೋತು ಸುಮಾರು 200 ಮಂದಿ ಆತ್ಮಹತ್ಯೆಗೆ ಶರಣಾಗುತ್ತಿದ್ದು, ಶೇಕಡ 70ರಷ್ಟು ಜನರ ಬದುಕು ಸಾಲದ ಸುಳಿಯಲ್ಲಿ ಸಿಲುಕಿದೆ.

ನಾಲ್ಕು ವಿಭಾಗಗಳಲ್ಲಿ ಕತೆಯು ಸಾಗಲಿದ್ದು, ಒಂದಕ್ಕೊಂದು ಸಂಬಂದ ತರಿಸುತ್ತದೆ. ಇದಕ್ಕೆ ಪೂರಕವಾಗುವಂತೆ ಬೆಂಗಳೂರು, ಮಂಗಳೂರು, ಮಂಡ್ಯಾ ಮತ್ತು ಬೆಳಗಾವಿ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಹ್ಯೂಮರಸ್ ಹಾಗೂ ಎಮೋಶನ್ಸ್ ತುಂಬಿಕೊಂಡಿದ್ದು, ನೋಡುಗನಿಗೆ ಕ್ಲೈಮಾಕ್ಸ್ ಕಾಡುತ್ತದೆ. ನಾನೇಕೆ ಬೆಟ್ಟಿಂಗ್ ಆಡಬೇಕೆಂಬ ಪ್ರಶ್ನೆ ಮೂಡುತ್ತದೆ. ಟ್ರೈಲರ್‍ನ್ನು ನಾಲ್ಕು ಲಕ್ಷ ಜನರು ವೀಕ್ಷಿಸಿದ್ದಾರೆಂದು ಹೇಳಿದರು.

ವಕೀಲರಾಗಿ ನಟಿಸಿರುವ ತಬಲನಾಣಿ ಮಾತನಾಡಿ ‘ಕೆಮಿಷ್ಟ್ರಿ ಆಫ್ ಕರಿಯಪ್ಪ’ ಸಿನಿಮಾದಿಂದ ನನಗೆ ಕಾರ್ಡ್ ನವೀಕರಣವಾದಂತೆ, ಎಂಟು ಚಿತ್ರಗಳಲ್ಲಿ ಅವಕಾಶ ದೊರಕಿತು. ಒಂದು ವಿಷಯ,ತಂಡ ಗೆದ್ದರೆ ಅಷ್ಟು ಜನರಿಗೆ ಅನುಕೂಲವಾಗುತ್ತದೆ. ಯಾರಲ್ಲೂ ಧೋರಣೆ ಗುಣ ಇಲ್ಲ. ಅದರಿಂದಲೇ ಉತ್ತಮ ಚಿತ್ರ ಕೊಡಲು ಸಾಧ್ಯವಾಯಿತು.

ದಯವಿಟ್ಟು ನಿಮ್ಮಗಳ ತಂಡವನ್ನು ಹಾಳು ಮಾಡಿಕೋಬೇಡಿ. ಗುಂಪು ಚೆನ್ನಾಗಿದ್ದರೆ ತಂಪು ಕೊಡುತ್ತದೆ. ನೋಡಿದವರು ಖುಷಿ ಪಡ್ತಾರೆ. ಕಷ್ಟಗಳು ಪಾಠ ಕಲಿಸುತ್ತದೆ ಎಂದು ಅನುಭವಗಳನ್ನು ಹಂಚಿಕೊಂಡರು. ತಾರಗಣದಲ್ಲಿ ಅರುಣಾಬಾಲರಾಜ್, ಗುರುರಾಜಹೊಸಕೋಟೆ, ತರಂಗವಿಶ್ವ ಮುಂತಾದವರ ನಟನೆ ಇದೆ.

ನ್ಯಾಯಧೀಶರಾಗಿ ಕಾಣಿಸಿಕೊಂಡಿರುವ ಸುಚೇಂದ್ರಪ್ರಸಾದ್, ಮಧ್ಯಮ ವರ್ಗದ ಕುಟುಂಬದವನಾಗಿ ರಾಜೇಶ್‍ನಟರಂಗ, ಪತ್ನಿಯಾಗಿ ಅಪೂರ್ವಭಾರದ್ವಾಜ್, ನವಪ್ರತಿಭೆ ದೀಪಾಜಗದೀಶ್, ಡ್ರಾಮಾ ಜ್ಯೂನಿಯರ್ಸ್ ಖ್ಯಾತಿಯ ಪುಟ್ಟರಾಜು ಮತ್ತು ಮಹೇಂದ್ರಪ್ರಸಾದ್, ಯಶಸ್‍ಅಭಿ, ಮೂರು ಹಾಡುಗಳಿಗೆ ಸಂಗೀತ ಸಂಯೋಜಿಸಿರುವ ವೀರಸಮರ್ಥ್, ಛಾಯಾಗ್ರಾಹಕ ಶಿವಸೇನ ಉಪಸ್ತಿತರಿದ್ದು ಚಿತ್ರದ ಸಾರವನ್ನು ತೆರೆದಿಟ್ಟರು.

ನಿರ್ದೇಶಕರು ಸಮಾನ ಮನಸ್ಕರುಗಳ ಜೊತೆ ಸೇರಿಕೊಂಡು ನಿರ್ಮಾಣ ಮಾಡಿರುವುದು ಹೊಸ ಅನುಭವ. ಸಿನಿಮಾವು ಇದೇ ತಿಂಗಳು ಕೊನೆವಾರದಂದು ತೆರೆಗೆ ಬರುವ ಸಾದ್ಯತೆ ಇದೆ.

Related posts