Cinisuddi Fresh Cini News 

ಯುಗಾದಿ ಹಬ್ಬದ ವಾರದಲ್ಲಿ ಚಿತ್ರಮಂದಿರಗಳಲ್ಲಿ “ಕ್ರಿಟಿಕಲ್ ಕೀರ್ತನೆಗಳು”

ಕೇಸರಿ ಫಿಲಂ ಕ್ಯಾಪ್ಚರ್, ಲಾಂಛನದಲ್ಲಿ ಕುಮಾರ್ ಮತ್ತು ಸ್ನೇಹಿತರು ಸೇರಿ ನಿರ್ಮಿಸಿರುವ ‘ಕ್ರಿಟಿಕಲ್ ಕೀರ್ತನೆಗಳು’ ಚಿತ್ರಕ್ಕೆ ಯು/ಎ ಸರ್ಟಿಪಿಕೆಟ್ ದೊರೆತಿದ್ದು, ಚಿತ್ರವು ಯುಗಾದಿ ಹಬ್ಬದ ವಾರದಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ – ಕುಮಾರ್.ಎಲ್, ಇವರು ಈ ಹಿಂದೆ ಕೆಮಿಸ್ಟ್ರಿ ಆಫ್ ಕರಿಯಪ್ಪ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು.

ಛಾಯಾಗ್ರಹಣ – ಶಿವಸೇನ ಮತ್ತು ಶಿವಶಂಕರ್, ಸಂಗೀತ-ವೀರ್ ಸಮರ್ಥ್, ಬೆಂಗಳೂರು, ಕುಂದಾಪುರ, ಮಂಡ್ಯ, ಬೆಳಗಾಂನಲ್ಲಿ ಚಿತ್ರೀಕರಣ ನಡೆದಿರುವ ಈ ಚಿತ್ರದಲ್ಲಿ ಮೂರು ಹಾಡುಗಳಿವೆ, ನೈಜ ಘಟನೆ ಆಧಾರಿತ ಐಪಿಎಲ್ ಬೆಟ್ಟಿಂಗ್‍ನ ವಿಷಯವನ್ನು ಸಂಪೂರ್ಣ ಹಾಸ್ಯಮಯ ಚಿತ್ರ.

ತಾರಾಗಣದಲ್ಲಿ – ತಬಲಾ ನಾಣಿ, ಸುಚೀಂದ್ರ ಪ್ರಸಾದ್, ರಾಜೇಶ್ ನಟರಂಗ, ತರಂಗ ವಿಶ್ವ, ಅಪೂರ್ವ, ಅಪೂರ್ವ ಭಾರದ್ವಾಜ್, ಅರುಣ ಬಾಲ್ ರಾಜ್, ಧರ್ಮ ದಿನೇಶ್ ಮಂಗಳೂರು, ರಘು ಪಾಂಡೇಶ್ವರ, ಯಶಸ್ ಅಭಿ, ದೀಪ, ಗುರುರಾಜ ಹೊಸಕೋಟೆ, ಮಾಸ್ಟರ್ ಮಹೇಂದ್ರ, ಮಾಸ್ಟರ್ ಪುಟ್ಟರಾಜು, ಯಶ್ವಂತ್ ಶೆಟ್ಟಿ – ಮುಂತಾದವರಿದ್ದಾರೆ.

Related posts