Cini Gossips Cinisuddi Fresh Cini News 

ಕ್ರೇಜಿಸ್ಟಾರ್ ರವಿಚಂದ್ರನ್ ಅವರ 30 ವರ್ಷದ ಕನಸಿನ ಚಿತ್ರ ಇದು..!

ಸ್ಯಾಂಡಲ್ ವುಡ್ ನ ಕನಸುಗಾರ, ಉತ್ತಮ ತಂತ್ರಜ್ಞ, ಸದಾ ವಿಭಿನ್ನತೆಯನ್ನು ಬಯಸುವ ಏಕಾಂಗಿ , ಕೇಜ್ರಿ ಲೋಕದ ದೊರೆ, ಪ್ರೇಮಿಗಳ ಹೃದಯದ ರಣಧೀರ, ಪ್ರೇಮಲೋಕದ ದೊರೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮೂವತ್ತು ವರ್ಷದ ಕನಸು ಈಗ ಅರಳತೊಡಗಿದೆ. ಹೌದು ಅವರ ಮಹದಾಸೆಯ ಒಂದು ಮ್ಯೂಸಿಕಲ್ ಸಿನಿಮಾ ಮಾಡುವುದು.

ಚಿತ್ರ ಒಂದೇ ತಮ್ಮ ಪ್ರಪಂಚ ಎಂದು ನಂಬಿರುವ ಕ್ರೇಜಿಸ್ಟಾರ್ ರವಿಚಂದ್ರನ್ ತಾವು ಯಾವುದೇ ಚಿತ್ರ ಮಾಡುವಾಗ ಅವರ ಹೃದಯ ಹೇಳಿದಂತೆ ಕೆಲಸ ಮಾಡಲು ನಿರ್ಧರಿಸುತ್ತಾರಂತೆ.

ತಮ್ಮ ಮೂರು ದಶಕದ ಕನಸು ಚಿಗುರೊಡೆದಿದೆಯoತೆ. ಪ್ರೇಮಲೋಕ ಆರಂಭದ ಮುಂಚೆಯೇ ಸಂಪೂರ್ಣ ಸಂಗೀತಮಯ ಚಿತ್ರ ಮಾಡಬೇಕೆಂಬ ಆಸೆ ಅವರಲ್ಲಿ ಇತ್ತಂತೆ. ಕ್ರೇಜಿಸ್ಟಾರ್ ಹೇಳುವ ಪ್ರಕಾರ ಅಂದೊಂದು ದಿನ ನನಗೆ ಕನಸು ಬಿತ್ತು.

ನಿದ್ದೆಯಿಂದ ಎದ್ದ ಬಳಿಕ ಒಂದು ಕಥೆ ನೆನಪಿಗೆ ಬಂತು, ಒಂದೇ ದಿನ ಸೀನ್ ಟು ಸೀನ್ ಬರೆಯುವ ಮೂಲಕ ಒಂದು ಕಥೆಗೆ ಸ್ವರೂಪ ಬಂತ್ತು. ಇಡೀ ಚಿತ್ರ ಸಂಗೀತ ಮಯವಾಗಿದ್ದು ಮಾತು, ಸಂಭಾಷಣೆ ಎಲ್ಲವೂ ಕೂಡ ಸಂಗೀತಮಯವಾಗಿ ಹೊರಬರಲಿದೆ. ಈ ಮ್ಯೂಸಿಕಲ್‌ ಸಿನಿಮಾಕ್ಕಾಗಿ ನನ್ನ ಸಂಗೀತ ಬಳಗದ ಎಲ್ಲರೂ ಸೇರಿ ಚರ್ಚಿಸಿದೆವು.

ಆದರೆ ಆ ಸಮಯಕ್ಕೆ ಅದು ಆಗಲಿಲ್ಲ, ತದನಂತರ ಸಾಂಗ್ ಕಂಪೋಸ್ ಗಾಗಿ ಸಾಕಷ್ಟು ಹಣ ಖರ್ಚಾಗುತ್ತಿತ್ತು.ಈಗಾಗಲೇ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಕಂಪೋಸ್ ಮಾಡಿದ್ದೇವೆ.

ನಮ್ಮ ಆಸೆಯ ಪ್ರಕಾರ ಇಡೀ ಸಿನಿಮಾ ಸೌಂಡ್‌ ಎಫೆಕ್ಟ್‌ನಿಂದಲೇ ರೆಕಾರ್ಡ್‌ ಆಗಬೇಕು, ಪ್ರತಿ ಒಂದು ಶಬ್ದವು ನ್ಯಾಚುರಲ್ ಆಗಿ ತೆರೆಯ ಮೇಲೆ ಕಾಣಬೇಕು ಎಂಬ ಮಹದಾಸೆ ಎಂದರು. ಈಗ ಹಂತ ಹಂತವಾಗಿ ಒಂದು ಫಾರ್ಮೆಟ್ ಗೆ ಬಂದಿದ್ದು, ಈ ಚಿತ್ರಕ್ಕಾಗಿ 6 ಹಾಡುಗಳನ್ನು ಒಂದೇ ದಿನದಲ್ಲಿ ಬರೆದಿದ್ದೇನೆ.

ಇಡೀ ಚಿತ್ರ ಸಂಗೀತಮಯವಾಗಿ ತೋರಿಸುವ ಪ್ರಯತ್ನ, ಎರಡು ಗಂಟೆ ಜನರಿಗೆ ಬೋರ್ ಆಗದಂತೆ ಚಿತ್ರ ಹೇಳುವುದೇ ನನ್ನ ಗುರಿ. ಈ ಚಿತ್ರದಲ್ಲಿ ನನ್ನ ಮೊದಲನೇ ಪುತ್ರ ಮನೋರಂಜನ್ ಕೂಡ ಕಾಣಿಸಿಕೊಳ್ಳಲಿದ್ದಾನೆ.ಅತಿ ಶೀಘ್ರದಲ್ಲಿ ಎಲ್ಲದಕ್ಕೂ ಶುಭಗಳಿಗೆ ಕೂಡಿ ಬರಲಿದೆ.

ವಿಶೇಷವಾಗಿ ಅಕ್ಟೋಬರ್‌ 18 ನನಗೆ ಬಹಳ ಸಂತಸವನ್ನು ತಂದು ಕೊಟ್ಟ ದಿನ. ಯಾಕೆಂದರೆ ಅಂದು ನನ್ನ ಮಗಳ ಹುಟ್ಟುಹಬ್ಬವಾಗಿತ್ತು , ಅದೇ ದಿನ ನನಗೆ ಒಂದು ಕರೆ ಬರುತ್ತೆ ಬೆಂಗಳೂರಿನ ಸಿ.ಎಂ.ಆರ್‌. ಯೂನಿವರ್ಸಿಟಿಯು ಗೌರವ ಡಾಕ್ಟರೇಟ್‌ ಕೂಡುವುದಾಗಿ ಇದು ನನ್ನ ಬದುಕಿನಲ್ಲಿ ಮರೆಯಲಾಗದ ಘಟನೆ ಆಗಿತ್ತು.

ಈಗ ಸದ್ಯ ರವಿ ಬೋಪಣ್ಣ ಹಾಗೂ ರಾಜೇಂದ್ರ ಪೊನ್ನಪ್ಪ ಸಿನಿಮಾದಲ್ಲಿ ಬಿಝಿಯಾಗಿದ್ದೇನೆ. ಇದು ಮುಗಿದ ನಂತರ ಜನವರಿಯಲ್ಲಿ ನನ್ನ ಸಂಗೀತದ ಚಿತ್ರಕ್ಕೆ ಚಾಲನೆ ಕೊಡುತ್ತೇನೆ. ಇದೊಂದು ಯೂನಿವರ್ಸಲ್ ಸಬ್ಜೆಕ್ಟ್ ಆಗಿದ್ದು ,ದೊಡ್ಡ ಮಟ್ಟದಲ್ಲಿ ತನ್ನ ಕನಸಿನ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲು ಮುಂದಾಗುತ್ತೇನೆ ಎಂದರು.

Share This With Your Friends

Related posts