Cinisuddi Fresh Cini News 

ಜನಸಾಮನ್ಯರಿಗೆ ಹಾಗೂ ಚಿತ್ರೋದ್ಯಮದವರಿಗೂ ಅನುಕೂಲವಾಗುವಂತಹ “ಲೈಫ್ ಲೈನ್ ಮೆಡಿಕ್ಸ್ ಟನೆಲ್” ಲಾಂಚ್

ಕೋವಿಡ್ -19 ಕೊರೊನಾ  ರಸ್ ಪ್ರಕರಣಗಳಲ್ಲಿ ಭಾರತ ಈಗ ನಾಲ್ಕನೇ ಸ್ಥಾನ ತಲುಪಿದೆ. ದಿನದಿಂದ ದಿನಕ್ಕೆ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಾಗುತ್ತಲೇ ಸಾಗುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಲೈಫ್‌ಲೈನ್ ಮೆಡಿಕ್ಸ್ ಒಂದು ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದೆ.

ಈ ವೈರಸ್ ಹರಡುವಿಕೆಯನ್ನು ನಿಯಂತ್ರಿಸುವ ಈ ಲೈಫ್‌ಲೈನ್ ಮೆಡಿಕ್ಸ್ ಉತ್ಪನ್ನವು ಹೊಸ ಆಲೋಚನೆಯ ಪರಿಣಾಮಕಾರಿ ಆವಿಷ್ಕಾರ ಎಂದು ಹೇಳಲು ಹೆಮ್ಮೆ ಅನಿಸುತ್ತದೆ. ಬೆಂಗಳೂರಿನಲ್ಲಿ ಆರಂಭ ಆಗಿರುವ ಈ ಲೈಫ್‌ಲೈನ್ ಮೆಡಿಕ್ಸ್ನ ಸಂಸ್ಥಾಪಕರಾದ ಶ್ರೀ ರಾಜಾರಾಮ್ ಅವರು ಎಂಐಟಿಯ ಪದವಿಧರ ಆಗಿದ್ದಾರೆ. ಇವರಿಗೆ ಸಿನಿಮಾ ನಂಟು ಕೂಡ ಇದ್ದು , ಹಲವಾರು ಇವೆಂಟ್ಸ್ ಕೂಡ ನಡೆಸಿದ್ದಾರೆ.

ಇದು ಜನಸಾಮಾನ್ಯರಿಗೂ ಸೇರಿದಂತೆ ಸಿನಿಮಾ ಕ್ಷೇತ್ರಕ್ಕೂ ಬಹಳಷ್ಟು ಅನುಕೂಲವಾಗುವುದoತೆ. ಹೊಸ ವಿನ್ಯಾಸ, ಐಡ್ಯಾ ವಿಭಾಗದಲ್ಲಿ ನೈಪುಣ್ಯತೆ ಹೊಂದಿದ್ದು , ಕೊಲಂಬಿಯಾ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲೂ ಅಭ್ಯಸ ನಡಿಸಿದ್ದಾರೆ. ಈ ಲೈಪ್‌ ಲೈನ್ ಮೆಡಿಕ್ಸ್ ಟನಲ್ ವಿಶೇಷ ವಿನ್ಯಾಸದಲ್ಲಿ ತಯಾರಾಗಿದ್ದು, ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸಲಾಗಿದೆ. ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ನೈಪುಣ್ಯತೆಯನ್ನು ಇದು ಹೊಂದಿದೆ.

ಇದೊಂದು ಸಂಪೂರ್ಣ ಸ್ವಯಂಚಾಲಿತ ಸೋಂಕು ನಿವಾರಕ ಸುರಂಗವಾಗಿದ್ದು, ನಾನಾ ವೈಶಿಷ್ಯ ಮತ್ತು ಪ್ರಯೋಜನಕ್ಕೆ ಸಹಕಾರ ಆಗಲಿದೆ. ಮಾನವರಹಿತ ಕೆಲಸ ಮಾಡುವಂತಹ ವಿನ್ಯಾಸ ಹೊಂದಿದೆ. ಟನಲ್ ಒಳಗೆ ಕಾಲಿಡುತ್ತಿದ್ದಂತೆಯೇ ವ್ಯಕ್ತಿಯನ್ನು ಸ್ಯಾನಿಟೈಸ್ ಮಾಡುವುದಲ್ಲದೇ, ಪ್ರತಿ ವ್ಯಕ್ತಿಯ ತಾಪಮಾನವನ್ನೂ ಕೂಡ ಅದು ಅಳೆಯಲಿದೆ. ಮತ್ತು ಅದನ್ನು ದಾಖಲಿಸಲಿದೆ. ಹೀಗಾಗಿ ಟನಲ್ ಒಳಗೆ ಹೋಗುವ ಮೊದಲೇ ಅದು ತಪಾಸನೆ ಮಾಡಿ ಕಳುಹಿಸುತ್ತದೆ.

ಕೈಗಳನ್ನು ಶುಚಿಗೊಳಿಸಿಕೊಳ್ಳಲು ಕೂಡ ಸ್ವಯಂಚಾಲಿತ ಸ್ಯಾನಿಟೈಸರ್ ಅನ್ನು ಇದು ಹೊಂದಿದೆ. ವ್ಯಕ್ತಿಯು ಹೆಲ್ಮೆಟ್, ಜಾಕೆಟ್, ಚೀಲ ಅಥವಾ ಮಾಸ್ಕ್ ಧರಿಸಿದ್ದರೂ ಅಲ್ಟ್ರಾ ವೈಲೆಟ್ ಬಾಕ್ಸ್ ಮೂಲಕ ಸ್ಯಾನಿಟೈಸ್ ಮಾಡಲಾಗುತ್ತದೆ. ಈ ಟನಲ್‌ನಿಂದ ಅಚೆ ಬರುತ್ತಿದ್ದಂತೆಯೇ  ವ್ಯಕ್ತಿಯು ಸಂಪೂರ್ಣ  ಸೋoಕು ರಹಿತಗೊಳಿಸುವ ತಂತ್ರಜ್ಞಾನವನ್ನು ಇದು ಹೊಂದಿದೆ.
ಈ ವಿಮರ್ಜನ್ 3.೦ ದ  ತ್ತೊಂದು ವಿಶೇಷ ಅಂದರೆ, ಸಂಪೂರ್ಣವಾಗಿ ನೈಸರ್ಗಿಕ ಮತ್ತು ವಿಷಮುಕ್ತ ರಾಸಾಯನಿಕ ಅಂಶಗಳಿಂದ ತಯಾರಾಗಿದೆ. ಚಿತ್ರದ ಚಿತ್ರೀಕರಣಕ್ಕೆ ಹೋಗುವ ಪ್ರತಿಯೊಬ್ಬರಿಗೂ ಇದು ಬಹಳ ಅನುಕೂಲಕರ ಆಗಿರುತ್ತದೆಯoತೆ.

ಈಗಾಗಲೇ ಹಂತಹಂತವಾಗಿ ಲಾಕ್‌ಡೌನ್ ತೆರೆವುಗೊಳಿಸಲಾಗುತ್ತಿದೆ. ವೈರಸ್ ಕೂಡ ಹರಡುತ್ತಿದೆ. ಇದನ್ನು ನಿಯಂತ್ರಿಸಲು  ಕ್ರಮಗಳನ್ನು ತಗೆದುಕೊಳ್ಳುವಂತೆ ಸರಕಾರವೇ ಮಾರ್ಗಸೂಚಿಯನ್ನು ನೀಡಿದೆ. ಹಾಗಾಗಿ ಮಾಲ್, ಚಿತ್ರಮಂದಿರಗಳು ಮತ್ತು  ಸಾರ್ವಜನಿಕ ಸಾರಿಗೆ ಹೀಗೆ ಸೋಂಕು ಹರಡಬಲ್ಲ ಸ್ಥಳಗಳಲ್ಲಿ ಈ ಟನಲ್ ಅಳವಡಿಸಬಹುದು. ವೈದ್ಯಕೀಯ ಸಿಬ್ಬಂದಿಗಳು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪಿಪಿಇ ಕಿಟ್‌ಗಳನ್ನು ಬಳಸುತ್ತಾರೆ. ಆದರೆ ಸಾರ್ವಜನಿಕರಿಗೆ  ಅದರ ಬಳಕೆ ಕಷ್ಟ. ತಮ್ಮನ್ನು ತಾವು ಸುರಕ್ಷಿತವಾಗಿ ಮತ್ತು  ರೋಗ್ಯವಾಗಿರಲು ಲೈಪ್‌ಲೈನ್ ಮೆಡಿಕ್ಸ್ ಟನಲ್ ಅಳವಡಿಕೆ ಅಗತ್ಯ. ಇದು ಎಲ್ಲರಿಗೂ
ಸುಲಭವಾಗಿ ಸಿಗುವಂತೆ ದರವನ್ನು ನಿಗಿಧಿ ಮಾಡಲಾಗಿದೆ.

ಒಂದೇ ತಂತ್ರಜ್ಞಾನದಲ್ಲಿ ಇದು ತಯಾರಾಗಿದ್ದರೂ, ವಿಭಿನ್ನ  ಗಾತ್ರಗಳಲ್ಲಿ ಲಭ್ಯವಿದೆ.  ಅಗತ್ಯತೆಗೆ ಅನುಗುಣವಾಗಿ
ಗಾತ್ರ ಮತ್ತು ವಿನ್ಯಾಸ ಮಾಡಲಾಗಿದೆ. ಗಾತ್ರಗಳಿಗೆ ಅನುಗುಣವಾಗಿ ದರವನ್ನು ನಿಗಧಿಪಡಿಸಿದ್ದರಿಂದ, ಕೈಗೆಟುಕುವ ಬೆಲೆಯಲ್ಲಿದೆ. ಸಣ್ಣ ಸಣ್ಣ ವ್ಯಾಪಾರಿಗಳಿಂದ ದೊಡ್ಡ ಕಂಪೆನಿಗಳು ಇದನ್ನು ಅಳವಡಿಸಿಕೊಳ್ಳಬಹುದು. ಅಲ್ಲದೇ, ಈ ಟನಲ್ ಅನ್ನು
ಜನರಿಗೆತಲುಪಿಸುವಂತಹ ಕಂಪೆನಿಗಳನ್ನು ನಾವು ಆಹ್ವಾನ ಮಾಡುತ್ತಿದ್ದು, ವಿತರಣಾ ಹಕ್ಕುಗಳನ್ನು ಕೂಡ ನೀಡುತ್ತಿದ್ದೇವೆ. ಡಿಸ್ಟುಬ್ಯೂಟ್ ಮಾಡುವಂತಹ ಆಸಕ್ತರು ಸಂಪರ್ಕಿಸಬಹುದು.   ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಲೈಫ್‌ಲೈನ್ ಮೆಡಿಕ್ಸ್ ಪ್ರೈವೇಟ್ ಲಿಮಿಟೆಡ್. ಫೋನ್: 9108544555
www.lifelinemedics.in
raj@lifelinemedics.in

Related posts