Cinisuddi Fresh Cini News Tv / Serial 

ಕನ್ನಡದಲ್ಲಿ ಬರುತ್ತಿದೆ ಹಿಂದಿಯ “ಸಿ.ಐ.ಡಿ”

ಹಲವಾರು ವರ್ಷಗಳಿಂದ ಪ್ರಸಾರಗೊಂಡ, ಕಾನೂನಿನಿಂದ ಅಪರಾಧಿ ತಪ್ಪಿಸಿಕೊಳ್ಳಲಾರ ಎಂದು ತೋರಿಸಿಕೊಟ್ಟ ಮೊಟ್ಟ ಮೊದಲ ಕ್ರೈಂ ಸ್ಟೋರಿ ಅಂದ್ರೆ ಅದು ಸಿ.ಐ.ಡಿ ಇದೀಗ ಕನ್ನಡದಲ್ಲಿ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

ಪ್ರತಿಯೊಂದು ಅಪರಾಧದ ಹಿಂದೆ ಒಬ್ಬ ಅಪರಾಧಿ ಇದ್ದೇ ಇರ್ತಾನೆ, ಕ್ಷಣ ಮಾತ್ರಕ್ಕೆ ಅವನು ತಪ್ಪಿಸಿ ಕೊಂಡರೂ, ಕಾನೂನಿನಿಂದ ಅವನು ತಪ್ಪಿಸಿಕೊಳ್ಳಲಾರ. ಅಪರಾಧಿಗಳನ್ನು ಮಟ್ಟ ಹಾಕಲು ಇರುವ ಏಕೈಕ ತಂಡ ಅಂದ್ರೆ ಅದು ಸಿ.ಐ,ಡಿ ತಂಡ.

ಹಾಗೆ ಅಪರಾಧಿಗಳ ಬೆನ್ನತ್ತಿ ಹೊರಟು ತಮ್ಮ ಕರ್ತವ್ಯ, ನಿಷ್ಠೆ ಮೆರೆಯುವ ಸಿಐಡಿಗಳು ಬರುತ್ತಿದ್ದಾರೆ. ಒಬ್ಬ ಅಪರಾಧಿ ತಪ್ಪಿಸಿಕೊಂಡರು ಮುಂದೊಂದಿನ ಸಿಕ್ಕೇ ಸಿಗುತ್ತಾನೆ ಆದರೆ ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದೆಂಬುದು ಇವರ ಗುರಿ.

ಸಿ.ಐ.ಡಿಗಳು ಹೇಗೆಲ್ಲ ಅಪರಾಧಿಗಳ ಸುಳಿವನ್ನು ಕಂಡುಹಿಡಿದು, ಕಾನೂನಿಗೆ ಒಪ್ಪಿಸಿ ಮತ್ತು ಸಮಾಜಕ್ಕೆ ಅರಿವು ಮೂಡಿಸುವ ಹಲವಾರು ಕುತೂಹಲಕಾರಿಯಾದ ಸಂಚಿಕೆಗಳನ್ನು ಹೊತ್ತು ಒಂದು ಗಂಟೆಯ ಮನೋರಂಜನೆಯೊಂದಿಗೆ ಜೂನ್ 22ರಿಂದ ಸಿ.ಐ.ಡಿ. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ.

Related posts