Cinisuddi Fresh Cini News 

‘ಉಪಾಧ್ಯಕ್ಷ’ ಚಿಕ್ಕಣ್ಣ ಈಗ ನಾಯಕ

ಚಿತ್ರರಂಗದಲ್ಲಿ ಹೆಸರು ಮಾಡಬೇಕಾದರೆ ಅದೃಷ್ಟವಿರಬೇಕು ಜೊತೆಗೆ ಶ್ರಮ ಇರಬೇಕು , ಅದಕ್ಕೆ ಸಮಯ ಕೂಡ ಬೇಕು. ಹಾಸ್ಯದ ಮೂಲಕ ಪ್ರೇಕ್ಷಕರನ್ನು ನಗಿಸುತ್ತಾ ಬಂದಂಥ ಚಿಕ್ಕಣ್ಣ ಈಗ ನಾಯಕನಾಗಿ ಉಪಾಧ್ಯಕ್ಷ ಚಿತ್ರದ ಮಂದಿ ಮಿoಚ್ಚಲಿದ್ದಾರೆ. ಈ ಹಿಂದೆ ಅಧ್ಯಕ್ಷ ಚಿತ್ರದಲ್ಲಿ ಶರಣ್ ಗೆ ಜೊತೆ ಗೆಳೆಯನಾಗಿ ಉಪಾಧ್ಯಕ್ಷ ನ ಪಾತ್ರದಲ್ಲಿ ಗಮನ ಸೆಳೆದಿದ್ದರು. ಒಂದು ದೊಡ್ಡ ಸಂಸ್ಥೆ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ರಾಬರ್ಟ್ ಹಾಗೂ ಮದಗಜದ ನಂತರ ಚಿಕ್ಕಣ್ಣ ಅಭಿನಯದ ಉಪಾಧ್ಯಕ್ಷ ಚಿತ್ರವನ್ನು ಉಮಾಪತಿ ಶ್ರೀನಿವಾಸ ನಿರ್ಮಾಣಕ್ಕೆ ಮುಂದಾಗಿದ್ದು , ಸ್ಮಿತಾ ಉಮಾಪತಿ ಹಾಗೂ ನಿರ್ಮಲಾ ಶ್ರೀನಿವಾಸ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಈ ಚಿತ್ರದ ಟೈಟಲ್ ಪೋಸ್ಟರ್ ಅನ್ನು ಇತ್ತೀಚೆಗೆ ಅನಾವರಣಗೊಳಿಸಲಾಯಿತು. ಈ ಚಿತ್ರಕ್ಕೆ ಚಂದ್ರಮೋಹನ್ ನಿರ್ದೇಶನವಿರಲಿದ್ದು, ಅರ್ಜುನ್ ಜನ್ಯ ಸಂಗೀತವಿದೆ. ಈ ಚಿತ್ರದ ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ ಯುವ ನಿರ್ದೇಶಕರಾದ ಎ.ಪಿ. ಅರ್ಜುನ್ , ಮಹೇಶ್ , ತರುಣ್ ಸುಧೀರ್ ಸೇರಿದಂತೆ ಹಲವಾರು ಸ್ನೇಹಿತರು ಆಗಮಿಸಿ ತಂಡಕ್ಕೆ ಶುಭವನ್ನು ಹಾರೈಸಿದರು.

Related posts