Cini Gossips Cinisuddi Fresh Cini News 

ಚೇತನ್ ಲೆಕ್ಕಕ್ಕೆ ಸೇರಿದ ಮತ್ತೊಂದು ವಿವಾದ..!

ಪ್ರಧಾನಿ ಮೋದಿ ಅವರು ಕರೆ ಕೊಟ್ಟಿದ್ದ ಜನತಾ ಕಫ್ರ್ಯೂಗೆ ದೇಶದ ಎಲ್ಲಾ ಚಿತ್ರರಂಗಗಳು ಸರ್ವತ್ರವಾಗಿ ಬೆಂಬಲಿಸಿವೆ. ಮೋದಿ ಅವರನ್ನು ಸದಾ ಟೀಕಿಸುವ ಶತ್ರುಘ್ನಸಿನ್ನ ಕೂಡಾ ಮೋದಿ ಕರೆಯನ್ನು ಎಲ್ಲರೂ ಬೆಂಬಲಿಸಬೇಕು, ಮತ್ತು ಬೆಂಬಲಿಸಿದ್ದಾರೆ, ಮುಖ್ಯವಾಗಿ ಮುಂದೆ ಆಗಬಹುದಾದ ಗಂಡಾಂತರವನು ತಡೆಯಬೇಕು ಎಂದು ಹೇಳಿಕೊಂಡಿದ್ದಾರೆ.

ಅಮಿತಾಬ್ ಬಚ್ಚನ್, ಚಿರಂಜೀವಿ, ರಜನೀಕಾಂತ್ ಕೂಡಾ ಈ ಪಟ್ಟಿಯಲ್ಲಿದ್ದಾರೆ. ಕನ್ನಡ ನಟ ಕಿಚ್ಚ ಸುದೀಪ್ ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಧಾನಿ ಅವರ ಸದ್ಯದ ಕಾರ್ಯವೈಖರಿಯನ್ನು ಮನಸಾರೆ ಮೆಚ್ಚಿ, ಇದನ್ನು ಎಲ್ಲರೂ ಬೆಂಬಲಿಸಬೇಕು ಎಂದು ಹೇಳಿ ಪ್ರಕೃತಿ ನಮ್ಮನ್ನು ಸಲಹಿಕೊಂಡು ಬಂದಿದೆ, ಈಗ ಅದರ ವಿರುದ್ದ ಕರೋನಾ ಹೋರಾಟಕ್ಕೆ ನಿಂತಿದೆ; ಮತ್ತು ಅದು ಭಯಾನಕವಾಗಿ ಮುಂದುವರೆದಿದೆ, ಇದಕ್ಕಾಗಿ ಜನ ಎಂತಹ ತ್ಯಾಗಕ್ಕಾದರೂ ಸಿದ್ದರಿರಬೇಕು ಎಂದು ಮನವಿಯನ್ನು ಮಾಡಿದ್ದಾರೆ.

ಅದಕ್ಕೆ ಕೇವಲ ಸುದೀಪ್ ಅಭಿಮಾನಿಗಳು ಮಾತ್ರವಲ್ಲ, ಚಿತ್ರರಂಗದಿಂದಲೂ ದೊಡ್ಡಮಟ್ಟದ ಬೆಂಬಲವಂತೂ ಸಿಕ್ಕಿದೆ. ಒಟ್ಟಿನಲ್ಲಿ ಕೊರೋನಾ ವಿರುದ್ದ ಪ್ರಧಾನಿ ಮೋದಿ ತೆಗೆದುಕೊಂಡಿರುವ ಕ್ರಮ ಮತ್ತು ಕಾಳಜಿಗಾಗಿ ಸರ್ವತ್ರ ಬೆಂಬಲವಂತೂ ವ್ಯಕ್ತವಾಗಿದೆ. ವಾತಾವರಣ ಹೀಗಿದ್ದರೂ ಕನ್ನಡ ನಟನೊಬ್ಬ ಈ ಕುರಿತು ತಕರಾರು ತೆಗೆದಿದ್ದಾನೆ. ಆದರೆ ಆತ ಉತ್ತರ ಕೇಳಿರುವುದು ನಟ ಸುದೀಪ್‍ಗೆ.

ಆ ದಿನಗಳು ಚಿತ್ರದ ನಾಯಕ ಚೇತನ್ ನೆನಪಿಗೆ ಬರಬಹುದು. ಆಗೊಂದು -ಈಗೊಂದು ಚಿತ್ರಗಳಲ್ಲಿ ಅಭಿನಯಿಸುವ ನಟ. ಈತ ಅಭಿನಯಕ್ಕಿಂತ ಹೆಚ್ಚಾಗಿ ಇತರ ಹವ್ಯಾಸಗಳಲ್ಲಿ ಸಾಕಷ್ಟು ವಿವಾದ ಸೃಷ್ಠಿಸಿಕೊಂಡಿದ್ದೂ ಆಗಿದೆ; ಅದರ ಪಟ್ಟಿಯೂ ದೊಡ್ಡದಿದೆ. ಬೆಂಗಳೂರು ಮಹಾತ್ಮಗಾಂಧಿ ರಸ್ತೆಯಲ್ಲಿ ನಡುರಾತ್ರಿ ದಾಟಿದ ನಂತರ ಚಿತ್ರನಟಿಯೊಬ್ಬರು ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದಾಗ ಇದೇ ಚೇತನ್ ಎಂಟ್ರಿ ಹಾಕಿದ್ದರು.

ಕರ್ತವ್ಯಕ್ಕೆ ಅಡ್ಡಿಪಡಿಸಿದ ಕಾರಣಕ್ಕೆ ಚೇತನ್ ಅಂದು ಸ್ಟೇಷನ್‍ಗೂ ಎಂಟ್ರಿ ಹಾಕಲೇಬೇಕಾಯಿತು. ಆರಂಭದಲ್ಲಿ ನಟಿ ತಾರಾ ಈತನ ಬೆಂಬಲಕ್ಕೆ ಬಂದವರು, ಸತ್ಯ ತಿಳಿದಮೇಲೆ ನಿನ್ನ ರಾತ್ರಿ ವರ್ತನೆ ಸರಿ ಇರಲಿಲ್ಲ ಬಿಡಯ್ಯಾ ಅಂತ ಎದ್ದು ಹೋಗಿದ್ದರು. ಒಟ್ಟಿನಲ್ಲಿ ಈಗ ಚೇತನ್ ಬದುಕಿನಲ್ಲಿ ಮತ್ತೊಂದು ವಿವಾದ ಸೇರಿಕೊಂಡಿದೆ.

ಜನತಾ ಕಫ್ರ್ಯೂಗೆ ಸುದೀಪ್ ಬೆಂಬಲಿಸಿದ ಅನಿಸಿಕೆಗೆ, ಜನತಾ ಕಫ್ರ್ಯೂ ವೈಜ್ಞಾನಿಕ ಎಂದು ಮಹತ್ವ ಕೊಟ್ಟಿದ್ದೀರಿ, ಆದರೆ ನನ್ನ ಇಲ್ಲಿನ ಪ್ರಶ್ನೆ ಈ ವಿಷಯದಲ್ಲಿ ಯಾವುದು ಅವೈಜ್ಞಾನಿಕ ? ಉತ್ತರ ಕೊಡಬಹುದೇ ಎಂದು ಸುದೀಪ್‍ರನ್ನು ಕೇಳಿದ್ದಾರೆ.

ಚೇತನ್ ಕೇಳಿರುವ ಸದ್ಯದ ಪ್ರಶ್ನೆಯನ್ನು ಚಿತ್ರರಂಗ ಪೂರಾ ಸರಿಸಿಬಿಟ್ಟಿದೆ, ಸುದೀಪ್ ಮನದಾಳವನ್ನು ಮೆಚ್ಚಿಕೊಂಡೇ ಹೋಗಿದ್ದಾರೆ.

Share This With Your Friends

Related posts