Cinisuddi Fresh Cini News 

ಮಾಸ್ಕ್ ಧರಿಸಿ ಮದುವೆಯಾದ ಚಂದನ್ ಹಾಗೂ ಕವಿತಾ ಗೌಡ

ಕಿರುತೆರೆ ಹಾಗೂ ಬೆಳ್ಳಿಪರದೆ ಮೇಲೆ ಮಿಂಚಿದoತ ಯುವ ಪ್ರತಿಭೆಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಿರುತೆರೆಯಲ್ಲಿ ಬಹಳಷ್ಟು ಜನಪ್ರಿಯವಾಗಿದ್ದ ಲಕ್ಷ್ಮೀ ಬಾರಮ್ಮ ಸೀರಿಯಲ್​ನ ಈ ಜೋಡಿಯ ಬಗ್ಗೆ ವೀಕ್ಷಕರು ಕೂಡ ಬಹಳ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು.

ಆದೇ ಆಶೀರ್ವಾದ ದಂತೆ ಆಗಿ ಇಂದು ಚಂದನ್​ ಮತ್ತು ಕವಿತಾ ಗೌಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಿರುತೆರೆ ಧಾರಾವಾಹಿಯಲ್ಲಿ ಇವರಿಬ್ಬರಿಗೂ ಪರಿಚಯ ಸ್ನೇಹವಾಗಿ ಸ್ನೇಹ ಪ್ರೇಮಾಂಕುರವಾಗಿ ಬೆಳೆದಿದೆ. ಆಗಿನಿಂದಲೂ ಅವರು ತಮ್ಮ ಪ್ರೀತಿ ವಿಚಾರದ ಬಗ್ಗೆ ಇನ್ನೂ ಮಾಹಿತಿ ಕೊಟ್ಟಿರಲಿಲ್ಲ.

ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಇವರಿಬ್ಬರೂ ಮದುವೆಯಾಗುತ್ತಾರೆ ಇವರಿಬ್ಬರು ಪ್ರೀತಿಸುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿತ್ತು. ಆದರೆ ಇದರ ಬಗ್ಗೆ ಇವರಿಬ್ಬರು ಯಾವುದೇ ಚಕಾರ ಎತ್ತಿರಲಿಲ್ಲ. ಎಲ್ಲದಕ್ಕೂ ಸಮಯ ಬರಬೇಕು ಅಂತಾರಲ್ಲ ಅದೇ ರೀತಿ ನಟ ಚಂದನ್ ಏಪ್ರಿಲ್ ಒಂದರಂದು ಕವಿತಾ ಗೌಡ ಜೊತೆ ನಾನು ಎಂಗೇಜ್ಮೆಂಟ್ ಮಾಡಿಕೊಡುತ್ತಿದ್ದೇನೆ ಎಂಬ ಮಾಹಿತಿಯನ್ನ ಹೊರ ಹಾಕಿದ್ದರು.

ಆದರೆ ಮದುವೆಯ ದಿನಾಂಕವನ್ನು ತಿಳಿಸಿರಲಿಲ್ಲ. ಆದರೆ ಕಂಕಣಭಾಗ್ಯ ಕೂಡಿ ಬಂದಾಗ ಯಾವುದೂ ನಿಲ್ಲುವುದಿಲ್ಲ ಎನ್ನುವಂತೆ ಕರೋನಾ ಹಾವಳಿಯ ನಡುವೆಯೂ ಸರ್ಕಾರ ತಿಳಿಸಿರುವ ಲಾಕ್ ಡೌನ್ ನಿಯಮದ ಪ್ರಕಾರವೇ ಕುಟುಂಬದವರು ಹಾಗೂ ಬೆರಳೆಣಿಕೆಯ ಅತಿಥಿಗಳ ಸಮ್ಮುಖದಲ್ಲಿ ಚಂದನ್​ ಹಾಗೂ ಕವಿತಾ ಗೌಡ ಇಬ್ಬರು ಮಾಸ್ಕ್ ಧರಿಸಿ ಮದುವೆ ಆಗಿದ್ದು ವಿಶೇಷವಾಗಿತ್ತು.

ಕಿರುತೆರೆಯಲ್ಲಿ ಮಿಂಚಿದ ಚಂದನ್ ಕೂಡ ಬೆಳ್ಳಿಪರದೆ ಮೇಲೆ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಂತಹ ಪಾತ್ರವನ್ನು ಮಾಡಿದ್ದಾರೆ. ಇದಲ್ಲದೆ ತೆಲುಗು ಧಾರಾವಾಹಿಯಲ್ಲೂ ಕೂಡ ಉತ್ತಮ ಪಾತ್ರವನ್ನು ನಿರ್ವಹಿಸಿ ವೀಕ್ಷಕರ ಮನಸ್ಸನ್ನು ಗೆದ್ದಿದ್ದಾರೆ.

ಇನ್ನು ನಟಿ ಕವಿತಾ ಗೌಡ ಕೂಡ ಕಿರುತೆರೆಯಲ್ಲಿ ಸಾಕಷ್ಟು ಪ್ರಖ್ಯಾತಿ ಪಡೆದಿದ್ದು , ಅದೇ ರೀತಿ ಬೆಳ್ಳಿ ಪರದೆಯಲ್ಲಿ ಕೂಡ ಗಮನಾರ್ಹ ಪಾತ್ರವನ್ನು ನಿರ್ವಹಿಸಿದ್ದಾರೆ. ಬಹಳ ಸರಳವಾಗಿ ನಡೆದ ಚಂದನ್ ಹಾಗೂ ಕವಿತಾ ಗೌಡ ಮದುವೆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದಂತೆ ಶುಭ ಸಂದೇಶಗಳ ಸುರಿಮಳೆ ಹರಿದು ಬಂದಿದೆ. ಹಾಗೆಯೇ ಇವರಿಬ್ಬರ ವೈವಾಹಿಕ ಜೀವನ ಸುಖಕರವಾಗಿರಲಿ ಎಂದು ಚಿತ್ರೋದ್ಯಮದ ನಟ, ನಟಿಯರು, ಗಣ್ಯರು ಹಾಗೂ ಕಿರುತೆರೆಯ ಕಲಾವಿದರು ಮತ್ತು ತಂತ್ರಜ್ಞರು ಶುಭ ಕೋರಿದ್ದಾರೆ. ಈ ಯುವ ಜೋಡಿಗಳ ಬಾಳು ಬಂಗಾರವಾಗಲಿ , ಸುಖಕರವಾಗಿರಲಿ ಎಂದು ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಶುಭಸಂದೇಶವನ್ನು ಕಳಿಸಿದ್ದಾರೆ.

Related posts