Cinisuddi Fresh Cini News 

ಡಿಬಾಸ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸಿಕ್ತು ಪವರ್ ಫುಲ್ ‘ರಾಬರ್ಟ್’ ಟೀಸರ್ ಗಿಫ್ಟ್..!

ದರ್ಶನ್​ ನಟನೆಯ ರಾಬರ್ಟ್​ ಸಿನಿಮಾ ಸ್ಯಾಂಡಲ್​ವುಡ್​ನಲ್ಲಿ ಭಾರೀ ಸದ್ದು ಸುದ್ದಿ ಮಾಡುತ್ತಿದೆ. ಏಪ್ರಿಲ್​ ತಿಂಗಳಿನಲ್ಲಿ ಈ ಸಿನಿಮಾ ತೆರೆಗೆ ಬರಲಿದೆ. ಅಭಿಮಾನಿಗಳು ಸಿನಿಮಾಗಾಗಿ ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ದರ್ಶನ್​ ಹುಟ್ಟು ಹಬ್ಬದ ಪ್ರಯುಕ್ತ ಈ ಸಿನಿಮಾದ ಟೀಸರ್ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ಹುಟ್ಟುಹಬ್ಬದ ಗಿಫ್ಟ್ ನೀಡಿದೆ.

ಫೆಬ್ರವರಿ ಮಧ್ಯರಾತ್ರಿಯಿಂದಲೇ ಸಂಭ್ರಮ ಮುಗಿಲು ಮುಟ್ಟಲಿದೆ. ಭಿನ್ನವಾಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ದರ್ಶನ್ ಹಲವಾರು ಮಂದಿ ಅಭಿಮಾನಿಗಳು ಹಾಗೂ ಫಾಲೋವರ್ಸ್‌ಗೆ ಮಾದರಿಯಾಗಿದ್ದಾರೆ.ಸದ್ಯಕ್ಕೆ ‘ರಾಜ ವೀರ ಮದಕರಿ ನಾಯಕ’ ಚಿತ್ರದ ಶೂಟಿಂಗ್‌ಗಾಗಿ ಕೇರಳದಲ್ಲಿದ್ದರು ದರ್ಶನ್. ಹುಟ್ಟುಹಬ್ಬದ ನಿಮಿತ್ತ ಎರಡು ದಿನ ಚಿತ್ರೀಕರಣಕ್ಕೆ ರಜೆ ಹಾಕಿ ಬೆಂಗಳೂರಿಗೆ ಆಗಮಿಸಿದ್ದಾರೆ. ಈ ಎರಡು ದಿನಗಳ ಕಾಲ ಅಭಿಮಾನಿಗಳ ಜೊತೆಗೆ ಕಳೆಯಲಿದ್ದಾರೆ ಡಿ ಬಾಸ್.

ಎಲ್ಲ ನಟರಂತೆ ತಮ್ಮ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳಲು ದರ್ಶನ್‌ಗೂ ಇಷ್ಟವಿಲ್ಲ. ಆದರೆ ಮಾದರಿಯಾಗಿ ಆಚರಿಸಿಕೊಳ್ಳಲು ಕಳೆದ ವರ್ಷವೇ ನಿರ್ಧರಿಸಿದರು. ದಾಸ ದರ್ಶನ್ ಹುಟ್ಟುಹಬ್ಬ ಎಂದರೆ ಬರೀ ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ, ಒಂದಷ್ಟು ಗಲಾಟೆ ಗದ್ದಲ ಮಾಡುವುದಕ್ಕಿಂತ ಭಿನ್ನವಾಗಿ ಆಚರಿಸಲು ಕರೆ ನೀಡಿದ್ದಾರೆ.

ತನ್ನ ಹುಟ್ಟುಹಬ್ಬಕ್ಕೆ ಕೇರ್ ಹಾರ ತುರಾಯಿ ತರುವುದಕ್ಕೆ ಬದಲಾಗಿ ದವಸ ಧಾನ್ಯ ತಂದುಕೊಡಿ, ಅದನ್ನು ವೃದ್ದಾಶ್ರಮ, ಅನಾಥಾಶ್ರಮಗಳಿಗೆ ತಲುಪಿಸುವ ಜವಾಬ್ದಾರಿ ನನ್ನದು ಎಂದಿದ್ದರು. ಹಾಗಾಗಿ ಈ ಸಲವೂ ಕಳೆದ ಬಾರಿಯಂತೆ ಮೂಟೆಗಟ್ಟಲೆ ದವಸ ಧಾನ್ಯ ಹುಟ್ಟುಹಬ್ಬಕ್ಕೆ ಹರಿದು ಬರಲಿದೆ.

Share This With Your Friends

Related posts