Cini Reviews Cinisuddi Fresh Cini News 

ಸುಪಾರಿ ಸುಳಿಯಲ್ಲಿ ಚಡ್ಡಿದೋಸ್ತ್ ಗಳು (ಚಿತ್ರ ವಿಮರ್ಶೆ )

ರೇಟಿಂಗ್ : 3.5 /5
ಚಿತ್ರ : ಚೆಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ
ನಿರ್ದೇಶಕ : ಆಸ್ಕರ್ ಕೃಷ್ಣ
ನಿರ್ಮಾಪಕ : ಸೆವೆನ್ ರಾಜ್
ಸಂಗೀತ : ಅನಂತ್ ಆರ್ಯನ್ ಛಾಯಾಗ್ರಹಣ : ಗಗನ್ ಕುಮಾರ್
ತಾರಾಗಣ : ಆಸ್ಕರ್‌ ಕೃಷ್ಣ , ಲೋಕೇಂದ್ರ ಸೂರ್ಯ , ಗೌರಿ ನಾಯರ್ , ಸೆವೆನ್ ರಾಜ್ ಹಾಗೂ ಮುಂತಾದವರು…

ಚಿತ್ರಮಂದಿರಕ್ಕೆ ಸಿನಿಪ್ರಿಯರನ್ನು ಕರೆತರುವುದರಲ್ಲಿ ಚಡ್ಡಿದೋಸ್ತ್ ಗಳು ಯಶಸ್ವಿಯಾಗಿದ್ದಾರೆ ಎನ್ನಬಹುದು. ಚಿತ್ರಮಂದಿರ ಪ್ರವೇಶಕ್ಕೆ 50% ಅನುಮತಿ ಇದ್ದರೂ ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ ಚಿತ್ರಕ್ಕೆ ಅಭಿಮಾನಿಗಳು ಬರುತ್ತಿದ್ದಾರೆ.

ಚಿತ್ರದ ಶೀರ್ಷಿಕೆ ಕೇಳಿದರೆ ತಿಳಿಯುತ್ತದೆ. ಇದ್ದು ಇಬ್ಬರೂ ಬಾಲ್ಯದ ಗೆಳೆಯರ ಕತೆಯೆoದು, ಅದಕ್ಕೆ ಪೂರಕವಾಗಿಯೇ ಇಬ್ಬರು ಕ್ರಿಮಿನಲ್ ಸ್ನೇಹಿತರು ಒಬ್ಬ ನಟೋರಿಯಸ್ ಆಗಿದ್ರು ಮಿತಭಾಷಿ ರಾಜ (ಆಸ್ಕರ್ ಕೃಷ್ಣ) ಮತ್ತೊಬ್ಬ ಹೆಣ್ಣುಬಾಕ ಸದಾ ವಟ ವಟಾ ಅಂತ ಮಾತನಾಡುವ ಗಡಾರಿ (ಲೋಕೇಂದ್ರ ಸೂರ್ಯ) ಇವರಿಬ್ಬರ ಗೆಳೆತನಕ್ಕೆ ಒಂದು ಫ್ಲ್ಯಾಶ್ ಬ್ಯಾಕ್ ಇದೆ. ಇವರಿಬ್ಬರ ನಡುವೆ ಯಾವುದೇ ರೀತಿ ಸಮಸ್ಯೆ ಎದುರಾದರೂ ತಮ್ಮ ಗೆಳೆತನಕ್ಕೆ ದ್ರೋಹವಾಗದಂತೆ ಸಾಗುವ ಮನೋಭಾವ ಹೊಂದಿರುತ್ತಾರೆ.

ಇದರ ನಡುವೆ ಗಡಾರಿ ಸಂಬಂಧದ ಹುಡುಗಿ ನಾಯಕಿ(ಗೌರಿ ನಾಯರ್) ಆಶ್ರಯ ಕೇಳಿ ಇವರ ಮನೆ ಸೇರುತ್ತಾಳೆ. ಜೈಲಿನಿಂದ ಹೊರಬಂದ ರಾಜ ರೌಡಿಸಂ ಬಿಟ್ಟು ಗೆಳೆಯನೊoದಿಗೆ ಸ್ವಂತ ಬಿಸಿನೆಸ್ ಮಾಡಿ ಬೆಳೆಯಬೇಕು ಎಂಬ ಕನಸು ಕಂಡರೆ. ಗಡಾರಿ ಸಿಕ್ಕ ಸಿಕ್ಕ ಹೆಣ್ಣುಮಕ್ಕಳೊಂದಿಗೆ ಲಲ್ಲೆ ಹೊಡೆಯುತ್ತಾ ತನ್ನ ಏರಿಯಾದ ಎಂ .ಎಲ್. ಎ ಆಶೀರ್ವಾದದೊಂದಿಗೆ ಎಲ್ಲರನ್ನ ಪಟಾಯಿಸಿ ತನ್ನ ಕೆಲಸವನ್ನು ಮಾಡಿಕೊಂಡು ಮೆರೆಯುತ್ತಿರುತ್ತಾನೆ.

ಇದರ ನಡುವೆ ನಾಯಕ ನಾಯಕಿಯ ಪ್ರೇಮ ಕತೆಯ ಎಳೆಯು ಸಾಗುತ್ತ ಹೋಗುತ್ತದೆ. ಎಂ. ಎಲ್. ಎ( ಸೆವೆನ್ ರಾಜ್) ತನಗೆ ಆಗಬೇಕಾದ ಕೆಲಸಕ್ಕೆ ಡಿ.ಸಿ. ಯಿಂದ ಅಡ್ಡಿ ಬರುತ್ತದೆ. ಇದಕ್ಕೆ ಕೋಪಗೊಂಡು ಆಕೆಯನ್ನು ಮುಗಿಸಲು ಸುಪಾರಿ ನೀಡುತ್ತಾನೆ. ತನ್ನ ಬಂಟ ಗಡಾರಿಗೆ ಇದರ ಉಸ್ತುವಾರಿ ನೀಡುತ್ತಾನೆ. ಆಗ ಗೆಳೆಯ ರಾಜ ಇದಕ್ಕೆ ಒಪ್ಪದೆ ನಿರಾಕರಿಸುತ್ತಾನೆ. ಆದರೂ ಇದರ ನಡುವೆ ಇಬ್ಬರು ಗೆಳೆಯರು ಡಿಸಿ ಮನೆ ಪ್ರವೇಶ ಮಾಡುತ್ತಾರೆ.

ಆಗ ಅಚಾನಕವಾಗಿ ನಡೆಯುವ ಡಿಸಿಯ ಕೊಲೆ ಮತ್ತೊಂದು ತಿರುವಿಗೆ ನಾಂದಿ ಹಾಡುತ್ತದೆ. ಈ ಕೊಲೆಯ ಕೇಸ್‌ ನಿoದ ಹೊರಬರಲು ಇಬ್ಬರು ಗೆಳೆಯರು ಹಾಗೂ ಗೆಳತಿಯೊಂದಿಗೆ ಅಲೆದಾಡುತ್ತಾರೆ. ಇವರನ್ನು ಹಿಡಿಯಲು ಪೊಲೀಸರು ಹರಸಾಹಸವನ್ನೇ ಮಾಡುತ್ತಾರೆ. ಇಡೀ ಸಿನಿಮಾದ ಕಥಾಹಂದರ ಬೇರೆ ಬೇರೆ ತಿರುವುಗಳು ತೆರೆದುಕೊಳ್ಳುತ್ತಾ ಹೋಗುತ್ತದೆ. ನಿಜವಾಗಿಯೂ ಡಿಸಿ ಕೊಲೆ ಮಾಡಿದ್ದು ಯಾರು…?
ಇದಕ್ಕೆ ಸುಪಾರಿ ಕೊಟ್ಟ ಎಂ. ಎಲ್. ಎ. ಏನು ಮಾಡುತ್ತಾನೆ…?
ಈ ಚಡ್ಡಿದೋಸ್ತ್ ಗಳ ಮಧ್ಯೆ ಕಡ್ಡಿ ಅಲ್ಲಾಡಿಸಿದ್ದು ಯಾರು…?
ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಬೇಕಾದರೆ ಎಲ್ಲರೂ ಚೆಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ ಚಿತ್ರವನ್ನ ಚಿತ್ರಮಂದಿರದಲ್ಲಿ ನೋಡಬೇಕು.

ಇಡೀ ಚಿತ್ರವನ್ನು ತನ್ನ ಮಾತಿನ ಮೂಲಕ ಅಬ್ಬರಿಸಿದ ನಟ ಲೋಕೇಂದ್ರ ಸೂರ್ಯ. 2 ಚಿತ್ರಕ್ಕಾಗುವಷ್ಟು ಸಂಭಾಷಣೆ ಈ ಚಿತ್ರದಲ್ಲಿ ಕಾಣುತ್ತಿದೆ. ಲೀಲಾಜಾಲವಾಗಿ ಹೆಣ್ಣುಮಕ್ಕಳ ಸೆಳೆಯುವ ತಂತ್ರ ಅದರಿಂದ ಹೊರಬರುವ ಕುತಂತ್ರ ಎರಡನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ತನ್ನ ನಟನಾ ಸಾಮರ್ಥ್ಯ ಹಾಗೂ ಬರವಣಿಗೆಯ ಶಕ್ತಿಯನ್ನು ಈ ಚಿತ್ರದಲ್ಲಿ ಪ್ರದರ್ಶಿಸಿರುವುದು ಮೆಚ್ಚಲೇಬೇಕು. ಮುಂದೆ ಉತ್ತಮ ಭವಿಷ್ಯವಿರುವ ಯುವ ಪ್ರತಿಭೆ ಎಂದು ಹೇಳಬಹುದು.

ಇನ್ನು ಈ ಚಿತ್ರವನ್ನ ನಿರ್ದೇಶನ ಮಾಡಿರುವ ಆಸ್ಕರ್ ಕೃಷ್ಣ ವಿಭಿನ್ನ ಕಥೆಯನ್ನು ತೆರೆ ಮೇಲೆ ತರುವಲ್ಲಿ ಯಶಸ್ವಿಯಾಗಿದ್ದರೆ. ಇನ್ನು ನಟನೆ ವಿಚಾರಕ್ಕೆ ಬಂದರೆ ಮತ್ತಷ್ಟು ತಾಲೀಮು ಅಗತ್ಯವಿದೆ ಎನಿಸುತ್ತದೆ. ಹಾಗೆಯೇ ಇನ್ನು ನಾಯಕಿಯ ಪಾತ್ರ ಮಾಡಿರುವ ಗೌರಿ ನಾಯರ್ ಸಿಕ್ಕ ಪಾತ್ರವನ್ನು ಚೊಕ್ಕವಾಗಿ ಅಭಿನಯಿಸಿದ್ದಾರೆ.

ಇನ್ನು ಈ ಚಿತ್ರವನ್ನ ನಿರ್ಮಿಸಿರುವಂತ ಸೆವೆನ್ ರಾಜ್ ಧೈರ್ಯವನ್ನು ಮೆಚ್ಚಲೇಬೇಕು. ಅದ್ದೂರಿ ಪ್ರಚಾರವನ್ನು ಮಾಡುವ ಮೂಲಕ ಪ್ರೇಕ್ಷಕರನ್ನ ಸೆಳೆಯುವುದರಲ್ಲಿ ಯಶಸ್ವಿಯಾಗಿದೆ. ಅಂದಹಾಗೆ ಈ ಚಿತ್ರದಲ್ಲಿ ಎಂ.ಎಲ್.ಎ ಪಾತ್ರದಲ್ಲಿ ವಿಲನ್ ಆಗಿ ತಕ್ಕಮಟ್ಟಿಗೆ ನಿಭಾಯಿಸುವ ಮೂಲಕ ಬೆಳ್ಳಿ ಪರದೆ ಮೇಲೆ ಮತ್ತಷ್ಟು ಚಿತ್ರಗಳಲ್ಲಿ ಅಭಿನಯಿಸುವ ಭರವಸೆಯನ್ನು ಮೂಡಿಸಿದ್ದಾರೆ.

ಇನ್ನು ಈ ಚಿತ್ರಕ್ಕೆ ಸಂಗೀತ ನೀಡಿರುವ ಅನಂತ್ ಆರ್ಯನ್ ಕೆಲಸ ಉತ್ತಮವಾಗಿದೆ. ಚಿತ್ರದ ಐಟಂ ಹಾಡು ಅಬ್ಬರದಿಂದ ಗಮನ ಸೆಳೆಯುತ್ತದೆ. ಇನ್ನು ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿರುವ ಗಗನ್ ಕುಮಾರ್ ಕೆಲಸ ಉತ್ತಮವಾಗಬೇಕಿತ್ತು. ಇನ್ನು ಉಳಿದಂತೆ ಇನ್ಸ್ ಪೆಕ್ಟರ್ ಪಾತ್ರಧಾರಿ ಸೇರಿದಂತೆ ಹಲವು ಪ್ರತಿಭೆಗಳ ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಸದ್ಯ ಮನರಂಜನೆ ದೃಷ್ಟಿಯಿಂದ ಬಿಡುಗಡೆಯಾಗಿರುವ ಈ ಚಿತ್ರ ಸಿನಿ ಪ್ರಿಯರನ್ನು ಸೆಳೆಯುತ್ತಿದೆ.

Related posts