“ಚಡ್ಡಿ ದೋಸ್ತ್” ಚಿತ್ರಕ್ಕೆ ಸಂಸದ ಡಿ.ಕೆ. ಸುರೇಶ್ ಚಾಲನೆ
ಕೊರೋನಸ ಹಾವಳಿಯ ನಡುವೆಯೂ ಲಾಕ್ ಡೌನ್ ಸಡಿಲಿಕೆ ಸಮಯದಲ್ಲಿ ಚಿತ್ರ ಚಟುವಟಿಗಳು ಈಗ ಗರಿಗೆದರಿದೆ. ಅನುಭವಿ ನಟ , ನಿರ್ದೇಶಕ ಆಸ್ಕರ್ ಕೃಷ್ಣ ನಿರ್ದೇಶಿಸಿ, ಸೆವೆನ್ ರಾಜ್ ನಿರ್ಮಿಸುತ್ತಿರುವ “ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ” ಚಿತ್ರದ ಮುಹೂರ್ತ ಕಾರ್ಯಕ್ರಮ ಇತ್ತೀಚೆಗೆ ಮುದ್ದಿನ ಪಾಳ್ಯದ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ನೆರವೇರಿತು.
ಸಂಸದ ಶ್ರೀ ಡಿ.ಕೆ ಸುರೇಶ್ ರವರು ಚಿತ್ರದ ಮೊದಲ ಶಾಟ್ ಗೆ ಕ್ಲಾಪ್ ಮಾಡಿದರೆ, ಹಿರಿಯ ನಿರ್ಮಾಪಕ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಕಾರ್ಯದರ್ಶಿಗಳಾದ ಶ್ರೀ ಭಾ.ಮಾ. ಹರೀಶ್ ರವರು ಕ್ಯಾಮೆರಾ ಚಾಲನೆ ಮಾಡಿದರು.
ಲಾಕ್ಡೌನ್ ನಂತರ ದೇವಸ್ಥಾನಗಳನ್ನು ತೆರೆಯಲು ಅನುಮತಿ ದೊರೆತ ನಂತರ ಮುಹೂರ್ತ ಆಚರಿಸಿಕೊಂಡ ಮೊದಲ ಚಿತ್ರ ಇದಾಗಿದೆ.
ಈ ಸಂದರ್ಭದಲ್ಲಿ ಕನ್ನಡ ಚಲನಚಿತ್ರ ನಿರ್ಮಾಪಕ ಸಂಘದ ಅಧ್ಯಕ್ಷರಾದ ಶ್ರೀ ಡಿ.ಕೆ. ರಾಮಕೃಷ್ಣ, ನಿರ್ಮಾಪಕರಾದ ಅವಿನಾಶ್ ಶೆಟ್ಟಿ ಉಪಸ್ಥಿತರಿದ್ದರು. ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ ಚಿತ್ರದ ಮುಖ್ಯ ಪಾತ್ರಗಳಲ್ಲಿ ಆಸ್ಕರ್ ಕೃಷ್ಣ, ಲೋಕೆಂದ್ರ ಸೂರ್ಯ, ಗೌರಿ ನಾಯರ್, ಸೆವೆನ್ ರಾಜ್ ಮುಂತಾದವರು ಅಭಿನಯಿಸುತ್ತಿದ್ದು, ಅನಂತ್ ಆರ್ಯನ್ ರವರ ಸಂಗೀತ, ಗಗನ್ ಕುಮಾರ್ ಛಾಯಾಗ್ರಹಣ ಹಾಗೂ ಪಿ.ಮರಿಸ್ವಾಮಿ ಅವರ ಸಂಕಲನ ಚಿತ್ರಕ್ಕಿದೆ.
ಸರ್ಕಾರದಿಂದ ಅನುಮತಿ ದೊರೆತ ಕೂಡಲೇ ಚಿತ್ರೀಕರಣ ಪ್ರಾರಂಭಿಸುವುದಾಗಿ ನಿರ್ದೇಶಕ ಆಸ್ಕರ್ ಕೃಷ್ಣ ತಿಳಿಸಿದ್ದಾರೆ.