ಫೆಬ್ರವರಿ 5ಕ್ಕೆ ತೆರೆಗೆ ಬರುತ್ತಿದೆ “ಮಂಗಳವಾರ ರಜಾದಿನ” ಚಿತ್ರ
ಶೀರ್ಷಿಕೆಯಲ್ಲೇ ವಿಭಿನ್ನತೆಯಿರುವ “ಮಂಗಳವಾರ ರಜಾದಿನ” ಚಿತ್ರ ಫೆಬ್ರವರಿ 5 ರಂದು ಬಿಡುಗಡೆಯಾಗುತ್ತಿದೆ. ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿಯಿಂದ ಯು/ಎ ಪತ್ರ ನೀಡಿದೆ. ಕ್ಷೌರಿಕನೊಬ್ಬನಿಗೆ ನಟ ಸುದೀಪ್ ಅವರಿಗೆ ಕೇಶವಿನ್ಯಾಸ ಮಾಡಬೇಕೆಂದು ಆಸೆ ಇರುತ್ತದೆ. ಈ ಆಸೆ ಏನಾಗುತ್ತದೆ? ಎನ್ನುವುದೆ ಚಿತ್ರದ ಕಥಾಸಾರಾಂಶ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮೊದಲ ಬಾರಿಗೆ ತಂದೆ – ಮಗನ ಬಾಂಧವ್ಯದ ಹಾಡೊಂದನ್ನು ಹಾಡಿದ್ದಾರೆ. ಗೌಸ್ ಫಿರ್ ಬರೆದಿರುವ ಈ ಹಾಡಿಗೆ ಋತ್ವಿಕ್ ಮುರಳಿಧರ್ ಸಂಗೀತ ನೀಡಿದ್ದಾರೆ. ಗಣರಾಜ್ಯೋತ್ಸವದ ದಿನ ಈ ಹಾಡು ಬಿಡುಗಡೆಯಾಗಲಿದೆ. ಹಾಡಿನ ಪ್ರೋಮೊ ಈಗಾಗಲೇ…
Read More