Cinisuddi Fresh Cini News 

“4 n 6” ಚಿತ್ರದ ಟೈಟಲ್ ಲಾಂಚ್ ಮಾಡಿದ ನಟ ಶ್ರೀಮುರುಳಿ

ನಾಯಕಿ ಪ್ರಧಾನ ಸಸ್ಪೆನ್ಸ್ , ಥ್ರಿಲ್ಲರ್ ಕಥಾಹಂದರ ಹೊಂದಿರುವ “4 n 6″ ಚಿತ್ರದ ಮುಹೂರ್ತ ಸಮಾರಂಭ ಜೆ.ಪಿ. ನಗರದ ಓಂಶಕ್ತಿ ದೇವಸ್ಥಾನದಲ್ಲಿ ನೆರವೇರಿತು. ಸರಳವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಚಿತ್ರದ ಪ್ರಥಮ‌ ದೃಶ್ಯಕ್ಕೆ ಉದ್ಯಮಿ ಅಜಯ್ ಅವರು ಕ್ಲಾಪ್ ಮಾಡಿದರು. ಫೋರ್ ಎನ್ ಸಿಕ್ಸ್” ಚಿತ್ರದ ಶೀರ್ಷಿಕೆಯನ್ನು ನಟ ರೋರಿಂಗ್ ಸ್ಟಾರ್ ಶ್ರೀಮುರುಳಿ ಅವರು ಬಿಡುಗಡೆ ಮಾಡಿ ಶುಭ ಹಾರೈಸಿದರು. ನಟ ನಿರ್ಮಾಪಕ Md.ಅಫ್ಜಲ್, ಶರತ್ ಹಾಗೂ ಇತರೆ ಗಣ್ಯರು ಆಗಮಿಸಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು. ಲವ್ ಮಾಕ್ಟೇಲ್ ಹಾಗೂ ಲವ್… Read More
Cinisuddi Fresh Cini News 

ಮೇ 20ಕ್ಕೆ “ದಾರಿ ಯಾವುದಯ್ಯಾ ವೈಕುಂಠಕೆ” ದರ್ಶನ

ಬಹಳಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿರುವ ಚಿತ್ರ “ದಾರಿ ಯಾವುದಯ್ಯಾ ವೈಕುಂಠಕ್ಕೆ” ಕಳ್ಳನ ಎದೆಯಲ್ಲಿ ಕಾರುಣ್ಯ ಹುಟ್ಟಿಸುವ ಅಪೂರ್ವ ದೃಶ್ಯ ಕಾವ್ಯವಾಗಿ ಹೊರ ಬಂದಿರುವ ಚಿತ್ರ ಎಂಬ ಮಾತು ಈಗ ಕೇಳಿ ಬರ್ತಿದೆ. ಈಗಾಗಲೇ ಈ ಚಿತ್ರವು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪಾಲ್ಗೊಂಡ ಸುಮಾರು ನೂರಐವತ್ತು ಕ್ಕೂ ಅಧಿಕ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಈಗ ಇದೇ 20ರಂದು ರಾಜ್ಯಾದ್ಯಂತ ಅದ್ದೂರಿಯಾಗಿ “ದಾರಿ ಯಾವುದಯ್ಯ ವೈಕುಂಠಕ್ಕೆ” ಚಿತ್ರ ಬಿಡುಗಡೆಯಾಗುತ್ತಿದೆ. “ಶರಣಪ್ಪ ಎಂ ಕೊಟಗಿ” ಯವರ ಚೊಚ್ಚಲ ನಿರ್ಮಾಣದಲ್ಲಿ “ಶ್ರೀ ಬಸವೇಶ್ವರ ಕ್ರಿಯೇಷನ್ಸ್” ಲಾಂಛನದ, ಇನ್ಪ್ಯಾಂಟ್ ಸಿನಿ ಕ್ರಿಯೇಷನ್ಸ್… Read More
Cinisuddi Fresh Cini News 

“ಮೆಟಡೋರ್” ಚಿತ್ರದ ಪ್ರಮೋಷನಲ್ ಸಾಂಗ್ ನಲ್ಲಿ ಮಿಂಚಿದ ಕವಿತಾ ಗೌಡ

ಮೆಟಡೋರ್ ಹೀಗೊಂದು ಡಿಫರೆಂಟ್ ಟೈಟಲ್ ನ ಸಿನಿಮಾವೊಂದು ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡ್ತಿದೆ. ಕಳೆದ ಕೆಲ ತಿಂಗಳ ಹಿಂದಷ್ಟೇ ನಟ ಕಂ ನಿರ್ದೇಶಕ ರಿಷಬ್ ಶೆಟ್ಟಿ, ಡಾಲಿ ಧನಂಜಯ್ ಮೆಟಡೋರ್ ಟ್ರೇಲರ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ರಿಲೀಸ್ ಆಗಿರುವ ಮೆಟಡೋರ್ ಸಿನಿಮಾದ ಪ್ರಮೋಷನಲ್ ಹಾಡು ಯೂಟ್ಯೂಬ್ ನಲ್ಲಿ ಸೌಂಡ್ ಮಾಡ್ತಿದೆ. ಗಾಂಧಾರಿ ಎಂದು ಶುರುವಾಗುವ ಅರ್ಥಪೂರ್ಣ ಗಾನಲಹರಿಗೆ ತಂಗಾಳಿ ನಾಗರಾಜ್ ಸಾಹಿತ್ಯ ಬರೆದಿದ್ದು, ಜೊತೆಗೆ ಮ್ಯೂಸಿಕ್ ನೀಡಿದ್ದಾರೆ. ಅಪೂರ್ವ ಶ್ರೀಧರ್ ಧ್ವನಿಯಾಗಿರುವ ಈ ಹಾಡಿನಲ್ಲಿ ಕವಿತಾ ಗೌಡ ಮಿಂಚಿದ್ದಾರೆ. ಈ ಹಿಂದೆ… Read More
Cinisuddi Fresh Cini News 

‘‘ಕಾಣೆಯಾದವರ ಬಗ್ಗೆ ಪ್ರಕಟಣೆ’’ಯಲ್ಲಿ ಚಂದನ್ ಮತ್ತು ಆಲ್ ಓಕೆ ಹವಾ…

ಸ್ಯಾಂಡಲ್ ವುಡ್ ಸಂಗೀತ ಲೋಕದಲ್ಲಿ ರ್ಯಾಪ್ ಹಾಡುಗಳ ಬಗ್ಗೆ ಹುಚ್ಚು ಹಚ್ಚಿಸಿದವರಲ್ಲಿ ಪ್ರಮುಖರು ಚಂದನ್ ಶೆಟ್ಟಿ ಮತ್ತು ಆಲ್ ಓಕೆ ಖ್ಯಾತಿಯ ಅಲೋಕ್ ಕುಮಾರ್. ಈ ಇಬ್ಬರು ಒಂದು ಕಾಲದಲ್ಲಿ ಒಟ್ಟಿಗೆ ಕನ್ನಡ ರ್ಯಾಪ್ ಸಾಂಗ್ ಗಳನ್ನ ಸೃಷ್ಟಿಸಲು ಮುಂದವರು. ಆದ್ರೆ ಕ್ರಮೆಣ ಅವರೊಂದು ದಾರಿ ಇವ್ರೊಂದು ದಾರಿಯಲ್ಲಿ ತಮ್ಮದೆ ಶೈಲಿಯಲ್ಲಿ ರ್ಯಾಪ್ಸಾಂಗ್ಸ್ ಗಳನ್ನ ಕನ್ನಡಿಗರಿಗೆ ಕೊಟ್ಟವರು ಕನ್ನಡದ ಜೊತೆಗೆ ಸಖಲ ಸಂಗೀತ ಪ್ರೀಯರಿಗೂ ಇಷ್ಟವಾದವರು. ಈಗ ಇದೇ ಆಲ್ ಓಕೆ ಮತ್ತು ಚಂದನ್ ಶೆಟ್ಟಿ ಒಟ್ಟಿಗೆ ಸೇರಿ ಒಂದು ಹೊಸ ರ್ಯಾಪ್ ಸಾಂಗ್… Read More
Cinisuddi Fresh Cini News 

“ಶುಗರ್ ಫ್ಯಾಕ್ಟರಿ” ಚಿತ್ರದ ಶೂಟಿಂಗ್ ಕಂಪ್ಲೀಟ್

ಚಿತ್ರೀಕರಣ ಆರಂಭದ ದಿನದಿಂದಲ್ಲೂ ಸಾಕಷ್ಟು ಕುತೂಹಲ ಹುಟ್ಟಿಸಿರುವ “ಶುಗರ್ ಫ್ಯಾಕ್ಟರಿ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.ಇತ್ತೀಚೆಗೆ ನೆಲಮಂಗಲದ ಬಳಿಯ ಅಂಕಿತ್ ವಿಸ್ತಾದಲ್ಲಿ ಕೊನೆಯ ಸನ್ನಿವೇಶವನ್ನು ಚಿತ್ರಿಸಿಕೊಳ್ಳುವುದರೊಂದಿಗೆ ನಿರ್ದೇಶಕ ದೀಪಕ್ ಅರಸ್ ಚಿತ್ರೀಕರಣ ಪೂರ್ಣಗೊಳಿಸಿ, ಕುಂಬಳಕಾಯಿ ಒಡೆದಿದ್ದಾರೆ. ಚಿತ್ರೀಕರಣ ಮುಕ್ತಾಯ ದಿನದ ಸಂಭ್ರಮವನ್ನು ಚಿತ್ರತಂಡ ಸಂತಸದಿಂದ ಆಚರಿಸಿದೆ. ಗೋವಾ, ಬೆಂಗಳೂರು, ಮೈಸೂರು ಹಾಗೂ ಕಜಾಕಿಸ್ಥಾನದಲ್ಲಿ ‍55 ದಿನಗಳ ಚಿತ್ರೀಕರಣ ನಡೆದಿದೆ. ಅದ್ದೂರಿ ಸೆಟ್ ಗಳು ಈ ಚಿತ್ರದ ಪ್ರಮುಖ ಆಕರ್ಷಣೆ. ವಿಭಿನ್ನ ಪೋಸ್ಟರ್, ವಿನೂತನ ಪ್ರಚಾರದ ಮೂಲಕ “ಶುಗರ್ ಫ್ಯಾಕ್ಟರಿ” ಈಗಾಗಲ್ಲೇ ಸಿನಿರಸಿಕರಲ್ಲಿ ಕುತೂಹಲ ಹುಟ್ಟಿಸಿದೆ‌. “ಶುಗರ್… Read More
Cinisuddi Fresh Cini News 

ಎಪಿಜೆ ಅಬ್ದುಲ್ ಕಲಾಂ ಹೇಳಿದ ಆ ವಿಷಯವೇ “ಓರಿಯೋ’ ಚಿತ್ರಕ್ಕೆ ಸ್ಫೂರ್ತಿ

ಪ್ರತಿಯೊಬ್ಬರೂ ನೋಡಲೇ ಬೇಕಾದ ಈ ಚಿತ್ರವನ್ನು ನಾನು ಮಾಡುತ್ತಿದ್ದೇನೆ. ಸರಿಸುಮಾರು 6ವರ್ಷ ಈ ಚಿತ್ರದ ಕಥೆಗಾಗಿ ನಾನು ಕೆಲಸ ಮಾಡಿದ್ದೇನೆ. ಈ ಚಿತ್ರಕ್ಕೆ “ಓರಿಯೋ” ಎಂದು ಟೈಟಲ್ ಇಟ್ಟಿದ್ದೇನೆ. ಅದು ಯಾಕೆ… ಏನು… ಎಂಬ ಪ್ರಶ್ನೆಗೆ ಉತ್ತರ ತೆರೆಮೇಲೆ ಕಾಣುತ್ತದೆ. ಇದು ಬಹಳ ವಿಶೇಷವಾದ ಕಥಾಹಂದರವುಳ್ಳ ಚಿತ್ರವಾಗಲಿದೆ ಎಂದರು. ಬಿಎಂಟಿಸಿ ನಿರ್ವಾಹಕರಾಗಿದ್ದ ನಂದನ್‌ಪ್ರಭು ಈ ಹಿಂದೆ ‘ಪ್ರೀತಿಯ ಲೋಕ’ ಹಾಗೂ ‘ಲವ್ ಈಸ್ ಪಾಯಸನ್’ ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದರು. ಈಗ ಆರೇಳು ವರ್ಷಗಳ ನಂತರ ನಂದನ್ ಪ್ರಭು “ಓರಿಯೋ” ಚಿತ್ರದ ಮೂಲಕ ಬೆಳ್ಳಿಪರದೆಗೆ ಬರುತ್ತಿದ್ದಾರೆ.… Read More
Cinisuddi Fresh Cini News 

ಫಿಲ್ಮ್ ಇಂಡಸ್ಟ್ರಿಗೆ ಬರ್ತಿರುವ ಬ್ಯೂಟಿ ಆರ್ತಿ ಬೇಡಿ ಯಾರು ಗೊತ್ತಾ.?

ಲಕ್ ಅನ್ನೋದು ಯಾರಿಂದ… ಯಾವಾಗ… ಎಲ್ಲಿಂದ… ಬೇಕಾದರೂ ಕರ್ಕೊಂಡು ಮುಂದೆ ಹೋಗುತ್ತೆ. ಹಾಗೆಯೇ ರಾತ್ರೋರಾತ್ರಿ ಈ ಬ್ಯೂಟಿ ಸ್ಟಾರ್ ಡಮ್ ಪಡೆದಿದ್ದು ಹೇಗೆ ಗೊತ್ತಾ. ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಹೈ ಸ್ಕೋರ್ ಪಂದ್ಯ ಅಭಿಮಾನಿಗಳನ್ನು ಸೀಟಿನ ತುದಿಗೆ ತಂದು ಕುರಿಸಿತ್ತು. ಈ ಪಂದ್ಯದ ಮಧ್ಯೆ ಎಲ್ಲರ ಗಮನ ಸೆಳೆದಿದ್ದು ಆ ಬ್ಯೂಟಿ. ಅವ್ರೇ ಆರ್ತಿ ಬೇಡಿ. ಈ ಪಂದ್ಯದಲ್ಲಿ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಯಾದ ಆರ್ತಿ ಬೇಡಿ ರಾತ್ರೋ ರಾತ್ರಿ ಸೆನ್ಸೇಷನಲ್ ಸ್ಟಾರ್ ಆಗಿಬಿಟ್ಟರು‌. ಇಂಟರ್ ನೆಟ್ ಜಗತ್ತಿನಲ್ಲಿ ಎಲ್ಲೆಡೆ… Read More
Cinisuddi Fresh Cini News 

“ಶುಭಮಂಗಳ” ಚಿತ್ರದ ಟೀಸರ್ ಬಿಡುಗಡೆ

70ರ ದಶಕದಲ್ಲಿ ಬಂದಂಥ ಖ್ಯಾತ ನಿರ್ದೇಶಕ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಲ್ ನಿರ್ದೇಶನದ ಶುಭಮಂಗಳ ಸಿನಿಮಾ ಯಾರಿಗೆ ತಾನೆ ಗೊತ್ತಿಲ್ಲ. ಈ ಎವರ್ ಗ್ರೀನ್ ಸಿನಿಮಾವನ್ನು ಯಾರಾದ್ರೂ ಮರೆಯುದುಂಟೇ. .? ಇದೇ ಟೈಟಲ್ ಇಟ್ಟುಕೊಂಡು ಸ್ಯಾಂಡಲ್ ವುಡ್ ನಲ್ಲಿ ಹೊಸ ಸಿನಿಮಾ ಸೆಟ್ಟೇರಿರೋದು ಹಳೆ ವಿಷ್ಯ. ಇದೀಗ ಶುಭಮಂಗಳ ಸಿನಿಮಾ ಅಂಗಳದಿಂದ ಸಖತ್ ಮಜವಾಗಿರುವ ಟೀಸರ್ ತುಣುಕು ಬಿಡುಗಡೆಯಾಗಿದ್ದು, ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಈ ಹಿಂದೆ ಸಿಲ್ಕ್ ಬೋರ್ಡ್, ಮಹಾ ಸಂಪರ್ಕ ಸೇರಿದಂತೆ 20ಕ್ಕೂ ಹೆಚ್ಚು ಕಿರುಚಿತ್ರಗಳ ನಿರ್ಮಾತೃ ಸಂತೋಷ್ ಗೋಪಾಲ್ ನಿರ್ದೇಶನದಲ್ಲಿ ತಯಾರಾಗಿರುವ… Read More
Cinisuddi Fresh Cini News 

ಮೇ 20ರಂದು ಜೀ5 OTTಯಲ್ಲಿ “RRR” ರಿಲೀಸ್

ಕನ್ನಡ, ತಮಿಳು, ಹಿಂದಿ,‌ ಮಲಯಾಳಂ, ಮರಾಠಿ, ಗುಜರಾತಿ, ಬೆಂಗಾಲಿ ಹೀಗೆ ನಾನಾ ಭಾಷೆಗಳ‌, ವಿಭಿನ್ನ ಕಥಾಹಂದರ ಹೊಂದಿರುವ ಸಿನಿಮಾಗಳನ್ನು ಚಿತ್ರಪ್ರೇಮಿಗಳ ಹಾಕುತ್ತಿರುವ ಪ್ರತಿಷ್ಠಿತ ಒಟಿಟಿ ಸಂಸ್ಥೆ ಜೀ5 ಈ ವರ್ಷದ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ RRR ಚಿತ್ರವನ್ನು ಪ್ರೇಕ್ಷಕರ ಮುಂದೆ ಪ್ರಸ್ತುತಪಡಿಸ್ತಿದೆ. ಎಸ್ ಎಸ್ ರಾಜಮೌಳಿ, ಜೂನಿಯರ್ ಎನ್ ಟಿಆರ್ ಹಾಗೂ ರಾಮ್ ಚರಣ್ ಕಾಂಬಿನೇಷನ್ ನಲ್ಲಿ ಮೂಡಿಬಂದಿದ್ದ ಮೆಗಾ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಆರ್ ಆರ್ ಆರ್ ಬಾಕ್ಸಾಫೀಸ್ ಕೊಳ್ಳೆ ಹೊಡೆದು, 1100 ಕೋಟಿ ಹಣ ಲೂಟಿ ಮಾಡಿತ್ತು. ರಾಮ್-ಭೀಮ್… Read More
Cinisuddi Fresh Cini News 

“ಧರಣಿ ಮಂಡಲ ಮಧ್ಯದೊಳಗೆ” ಹೈಪರ್ ಶೈಲಿಯ ಕ್ರೈಂ ಡ್ರಾಮಾ

ಯುವ ಪಡೆಗಳು ಸೇರಿಕೊಂಡು ಒಂದು ವಿಭಿನ್ನ ಬಗೆಯ ಹೈಪರ್ ಲಿಂಕ್ ಶೈಲಿಯ ಕ್ರೈಂ ಡ್ರಾಮಾ ಕಥಾನಕವನ್ನು ಸಿದ್ಧಪಡಿಸಲು ಮುಂದಾಗಿದ್ದಾರೆ. ಈ ರೀತಿಯ ವಿಭಿನ್ನ ಕಥಾನಕ ಬಂದಿಲ್ಲ ಎಂಬ ಮಾತು ಚಿತ್ರತಂಡದ್ದು. ಈ ಹಿಂದೆ ಗುಳ್ಟು ಚಿತ್ರದ ಮೂಲಕ ಗಮನ ಸೆಳೆದ ಯುವ ನಟ ನವೀನ್ ಶಂಕರ್ ಮತ್ತು ವಾಸ್ತುಪ್ರಕಾರದ ಬೆಡಗಿ ಐಶಾನಿ ಶೆಟ್ಟಿ ಸೇರಿದಂತೆ ಇಡೀ ಚಿತ್ರತಂಡ ಮಾಧ್ಯಮದವರ ಮುಂದೆ ಹಾಜರಾಗಿ ತಮ್ಮ ಚಿತ್ರದ ಅನುಭವಗಳನ್ನು ಹಂಚಿಕೊಂಡರು. ಈ “ಧರಣಿ ಮಂಡಲ ಮಧ್ಯದೊಳಗೆ” ಎಂಬ ಪುಣ್ಯಕೋಟಿಯ ಪದ್ಯ ಯಾರಿಗೆ ತಾನೇ ತಿಳಿದಿಲ್ಲ. ಇದೀಗ ಇದೇ… Read More