Cini Gossips Cinisuddi Fresh Cini News 

ಚೇತನ್ ಲೆಕ್ಕಕ್ಕೆ ಸೇರಿದ ಮತ್ತೊಂದು ವಿವಾದ..!

ಪ್ರಧಾನಿ ಮೋದಿ ಅವರು ಕರೆ ಕೊಟ್ಟಿದ್ದ ಜನತಾ ಕಫ್ರ್ಯೂಗೆ ದೇಶದ ಎಲ್ಲಾ ಚಿತ್ರರಂಗಗಳು ಸರ್ವತ್ರವಾಗಿ ಬೆಂಬಲಿಸಿವೆ. ಮೋದಿ ಅವರನ್ನು ಸದಾ ಟೀಕಿಸುವ ಶತ್ರುಘ್ನಸಿನ್ನ ಕೂಡಾ ಮೋದಿ ಕರೆಯನ್ನು ಎಲ್ಲರೂ ಬೆಂಬಲಿಸಬೇಕು, ಮತ್ತು ಬೆಂಬಲಿಸಿದ್ದಾರೆ, ಮುಖ್ಯವಾಗಿ ಮುಂದೆ ಆಗಬಹುದಾದ ಗಂಡಾಂತರವನು ತಡೆಯಬೇಕು ಎಂದು ಹೇಳಿಕೊಂಡಿದ್ದಾರೆ. ಅಮಿತಾಬ್ ಬಚ್ಚನ್, ಚಿರಂಜೀವಿ, ರಜನೀಕಾಂತ್ ಕೂಡಾ ಈ ಪಟ್ಟಿಯಲ್ಲಿದ್ದಾರೆ. ಕನ್ನಡ ನಟ ಕಿಚ್ಚ ಸುದೀಪ್ ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಧಾನಿ ಅವರ ಸದ್ಯದ ಕಾರ್ಯವೈಖರಿಯನ್ನು ಮನಸಾರೆ ಮೆಚ್ಚಿ, ಇದನ್ನು ಎಲ್ಲರೂ ಬೆಂಬಲಿಸಬೇಕು ಎಂದು ಹೇಳಿ ಪ್ರಕೃತಿ ನಮ್ಮನ್ನು ಸಲಹಿಕೊಂಡು ಬಂದಿದೆ,… Read More
Cini Gossips Cinisuddi Fresh Cini News 

ಭಾವಿ ಪತ್ನಿ ಜೊತೆ ವಿಭಿನ್ನವಾಗಿ ಪ್ರೇಮಿಗಳ ದಿನ ಆಚರಿಸಿದ ನಿಖಿಲ್

ಇಂದು ಪ್ರೇಮಿಗಳ ದಿನ. ಈ ವಿಶೇಷ ದಿನದಂದು ಸ್ಯಾಂಡಲ್ವುಡ್ ನ ಜಾಗ್ವಾರ್ , ಯುವರಾಜ ನಿಖಿಲ್ ಕುಮಾರಸ್ವಾಮಿ ಹಾಗೂ ಭಾವಿ ಪತ್ನಿ ರೇವತಿ ಅವರು ಒಂದು ವಿಶೇಷ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡ ಈ ಜೋಡಿ ಇಂದು ಆರ್. ಆರ್. ನಗರದಲ್ಲಿರುವ ಶ್ರೀ ರಾಜರಾಜೇಶ್ವರಿ ಅಮ್ಮನವರ ಸನ್ನಿಧಾನಕ್ಕೆ ಭೇಟಿ ನೀಡಿ ತಾಯಿಯ ಆಶೀರ್ವಾದ ಪಡೆದು, ಅಲ್ಲಿಯೇ ಪ್ರಸಾದವನ್ನು ಸ್ವೀಕರಿಸಿದ್ದಾರೆ.ಕುಟುಂಬದವರು ನೋಡಿ ಒಪ್ಪಿರುವ ಈ ಮುದ್ದಾದ ಜೋಡಿಯು ಪ್ರೇಮಿಗಳ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ. Read More
Bollywood Cini Gossips Cinisuddi Fresh Cini News 

ಫೋಟೋಗ್ರಾಫರ್ ಜೊತೆ ಫ್ರೀಡಾ ಪಿಂಟೋ ಎಂಗೇಜ್‍ಮೆಂಟ್

ಬಿ-ಟೌನ್‍ನಲ್ಲಿ ವಿದೇಶಿ ತರುಣರ ಜೊತೆ ನಟಿಯರ ನಂಟು ಹೊಸದೇನಲ್ಲ. ಇಂಥ ಅನೇಕ ಪ್ರೇಮ ಪ್ರಸಂಗಗಳು ಹ್ಯಾಪಿ ಎಂಡಿಂಗ್ ಆಗಿವೆ. ಕೆಲವು ಮುರಿದು ಬಿದ್ದಿವೆ. ಪ್ರಿಯಾಂಕಾ ಚೋಪ್ರಾ-ನಿಕ್ ಜೋನ್ಸ್, ಪ್ರೀತಿ ಜಿಂಟಾ-ಜೀನ್ ಗುಡ್‍ಎನಫ್, ಇಲಿಯಾನ ಡಿಕ್ರೂಜ್-ಆಂಡ್ರ್ಯೂ ನೀಬೋನ್ (ಬ್ರೇಕ್ ಅಪ್ ಆಗಿದೆ), ಶ್ರೇಯ ಶರಣ್-ಆಂಡ್ರೀ ಕೋಸ್‍ಚೀವ್, ಲೀಸಾ ರೈ- ಜಾಸನ್ ಡೆಹ್ನಿ ಇತ್ಯಾದಿ ಈಗ ಈ ಸಾಲಿಗೆ ಮತ್ತೊಂದು ಸೇರ್ಪಡೆ ಸ್ಲಮ್ ಡಾಗ್ ಮಿಲೇನಿಯರ್ ಖ್ಯಾತಿ ನಟಿ ಫ್ರೀಡಾ ಪಿಂಟೋ. ಫೋಟೋಗ್ರಾಫರ್ ಕೊರಿ ಟ್ರಾನ್ ಜೊತೆ ಈಕೆಯ ಎಂಗೇಜ್‍ಮೆಂಟ್ ಆಗಿದೆ. ಈ ವಿಷಯವನ್ನು ಫ್ರೀಡಾ, ಇನ್‍ಸ್ಟಾಗ್ರಾಂ… Read More
Cini Gossips Cinisuddi Fresh Cini News 

ಸುದೀಪ್ ಗೂ ಮೊದಲೇ ಥಿಯೇಟರ್‌ಗೆ ಎಂಟ್ರಿ ಕೊಡಲಿದ್ದಾರೆ ಡಿಬಾಸ್ ..!

ಟಾಲಿವುಡ್‍ನಲ್ಲಿ ಸೂಪರ್‍ಸ್ಟಾರ್ ರಜನಿಕಾಂತ್‍ರ ದರ್ಬಾರ್, ಪ್ರಿನ್ಸ್ ಮಹೇಶ್‍ಬಾಬುರ ಸರಿಲೇರು ನೀಕೆವ್ವರು , ಅಲ್ಲು ಅರ್ಜುನ್‍ರ ಅಲಾ ವೈಕುಂಠಪುರಮುಲೋ ಚಿತ್ರಗಳು ಜನವರಿ 10, 11 ಹಾಗೂ 12 ರಂದು ಬಿಡುಗಡೆಯಾಗಲು ರೆಡಿಯಾಗಿದ್ದರೆ, ಇತ್ತ ಸ್ಯಾಂಡಲ್‍ವುಡ್ ಸ್ಟಾರ್ ನಟರುಗಳಾದ ಚಾಲೆಂಜಿಂಗ್‍ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್‍ರ ಚಿತ್ರಗಳು ಪೈಪೋಟಿಗೆ ಬೀಳುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ ಈ ಎರಡು ಚಿತ್ರಗಳು ಪರಸ್ಪರ ವಾರ್ ನಡೆಸದೆ ವಾರದ ಅಂತರಗಳಲ್ಲಿ ಬಿಡುಗಡೆಯಾಗಲು ಅಣಿಯಾಗಿವೆ. ದರ್ಶನ್‍ರ ಒಡೆಯ ಚಿತ್ರವು ಡಿಸೆಂಬರ್ 12 ರಂದು ಬಿಡುಗಡೆಯಾಗುತ್ತಿದ್ದರೆ, ಕಿಚ್ಚ ಸುದೀಪ್ ನಟಿಸಿರುವ ಬಾಲಿವುಡ್‍ನ ದಬಾಂಗ್ 3… Read More
Bollywood Cini Gossips Cinisuddi Fresh Cini News 

ವಿದ್ಯಾ ಬಾಲನ್ ವಿಂಡೋ ಎಂಟ್ರಿ..!

ವಿದ್ಯಾ ಬಾಲನ್-ಬೆಳ್ಳಿ ಪರದೆ ಮೇಲೆ ತನ್ನ ಮ್ಯಾಜಿಕ್ ಮೂಲಕ ಅಭಿಮಾನಿಗಳಿಗೆ ಎಂದೂ ನಿರಾಶೆಗೊಳಿಸಿಲ್ಲ. ಸಹಜ ಸೌಂದರ್ಯ ಮತ್ತು ಅದ್ಭುತ ಪ್ರತಿಭೈ ಮೂಲಕ ಬಹುಭಾಷಾ ತಾರೆ ಅಭಿಮಾನಿಗಳ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದ್ದಾಳೆ. ಗಂಭೀರ ಪಾತ್ರಗಳಿರಲಿ ಅಥವಾ ಹಾಸ್ಯಮಯ ಪಾತ್ರಗಳಿರಲಿ ಅದಕ್ಕೆ ಜೀವ ತುಂಬುವ ಪ್ರತಿಭಾನ್ವಿತೆ. ಅಭಿಮಾನಿಗಳನ್ನು ರಂಜಿಸಲು ಸದಾ ಹಾತೊರೆಯುವ ವಿದ್ಯಾ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿರುವ ವಿಡಿಯೋವೊಂದು ಗಮನಸೆಳೆದಿದೆ. ಹೃಷಿಕೇಶ್ ಮುಖರ್ಜಿ ನಿರ್ದೇಶನದ 1979ರ ಸೂಪರ್‍ಹಿಟ್ ಸಿನಿಮಾ ಗೋಲ್‍ಮಾಲ್‍ನಲ್ಲಿ ಆಗಿನ ನಟಿ ದಿನಾ ಪಾಠಕ್ ಅಭಿನಯಿಸಿದ್ದ ಹಾಸ್ಯ ದೃಶ್ಯವೊಂದನ್ನು ಮರುಸೃಷ್ಟಿಸಿ ಹಾಸ್ಯದ ಹೊನಲು ಹರಿಸಿದ್ದಾಳೆ.… Read More
Bollywood Cini Gossips Cinisuddi 

ಹುಲಿ ಡ್ರೆಸ್‍ನಲ್ಲಿ ಮಿಂಚಿದ `ಇಲಿ’ಯಾನಾ

ಬಳಕುವ ಸೋಂಟದ ಮೋಹಕ ನಟಿ ಇಲಿಯಾನ ಡಿಕ್ರೂಜ್ ಬಾಲಿವುಡ್ ಆಪ್ತವಲಯದಲ್ಲಿ ಇಲಿ ಎಂದೇ ಪರಿಚಿತಳು. ಇಲಿಯಾನಾ ಸೋಷಿಯಲ್ ಮೀಡಿಯಾ ಲವರ್. ಇನ್‍ಸ್ಟಾಗ್ರಾಂನಲ್ಲಿ ಇತ್ತೀಚಿನ ದಿನಗಳಲ್ಲಿ ಈಕೆ ಸಕ್ರಿಯ. ಆಗಾಗ ಅಲ್ಟ್ರಾ ಮಾಡ್ರನ್ ಉಡುಪುಗಳು ಮತ್ತು ಬಿಕಿನಿ ಧರಿಸಿ ಫೋಟೋಗಳನ್ನು ಅಪ್‍ಲೋಡ್ ಮಾಡಿ ಎಲ್ಲರ ಗಮನ ಸೆಳೆಯುತ್ತಾಳೆ. ಇಲಿ ಬಿಂದಾಸ್ ಲುಕ್‍ಗೆ ಪಡ್ಡೆಗಳಂತೂ ಥ್ರಿಲ್ ಆಗುತ್ತಾರೆ.ರುಸ್ತುಂ ಖ್ಯಾತಿಯ ನಟಿ ಟೈಗರ್ ಪ್ರಿಂಟೆಡ್ ಪ್ಯಾಂಟ್‍ಸೂಟ್‍ನಲ್ಲಿ ಭರ್ಜರಿಯಾಗಿ ಕಾಣಿಸಿಕೊಂಡಿದ್ದಾರೆ. ತನ್ನ ಹೊಸ ಲುಕ್‍ಗಳ ಸರಣಿ ಫೋಟೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾಳೆ. ಈ ಬೆಡಗಿ ಫ್ಯಾಷನ್ ಪ್ರಿಯೆ ಎಂಬುದನ್ನು ಬಿಡಿಸಿ… Read More
Cini Gossips Cinisuddi Fresh Cini News 

ಕ್ರೇಜಿಸ್ಟಾರ್ ರವಿಚಂದ್ರನ್ ಅವರ 30 ವರ್ಷದ ಕನಸಿನ ಚಿತ್ರ ಇದು..!

ಸ್ಯಾಂಡಲ್ ವುಡ್ ನ ಕನಸುಗಾರ, ಉತ್ತಮ ತಂತ್ರಜ್ಞ, ಸದಾ ವಿಭಿನ್ನತೆಯನ್ನು ಬಯಸುವ ಏಕಾಂಗಿ , ಕೇಜ್ರಿ ಲೋಕದ ದೊರೆ, ಪ್ರೇಮಿಗಳ ಹೃದಯದ ರಣಧೀರ, ಪ್ರೇಮಲೋಕದ ದೊರೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮೂವತ್ತು ವರ್ಷದ ಕನಸು ಈಗ ಅರಳತೊಡಗಿದೆ. ಹೌದು ಅವರ ಮಹದಾಸೆಯ ಒಂದು ಮ್ಯೂಸಿಕಲ್ ಸಿನಿಮಾ ಮಾಡುವುದು. ಚಿತ್ರ ಒಂದೇ ತಮ್ಮ ಪ್ರಪಂಚ ಎಂದು ನಂಬಿರುವ ಕ್ರೇಜಿಸ್ಟಾರ್ ರವಿಚಂದ್ರನ್ ತಾವು ಯಾವುದೇ ಚಿತ್ರ ಮಾಡುವಾಗ ಅವರ ಹೃದಯ ಹೇಳಿದಂತೆ ಕೆಲಸ ಮಾಡಲು ನಿರ್ಧರಿಸುತ್ತಾರಂತೆ. ತಮ್ಮ ಮೂರು ದಶಕದ ಕನಸು ಚಿಗುರೊಡೆದಿದೆಯoತೆ. ಪ್ರೇಮಲೋಕ ಆರಂಭದ ಮುಂಚೆಯೇ… Read More
Bollywood Cini Gossips Cinisuddi Fresh Cini News 

ಇನ್ಫೋಸಿಸ್ ಸುಧಾಮೂರ್ತಿ ಪಾತ್ರದಲ್ಲಿ ಅಲಿಯಾ ಭಟ್

ಬಿ ಟೌನ್ ಟ್ಯಾಲೆಂಟೆಡ್ ಬ್ಯೂಟಿ ಅಲಿಯಾ ಭಟ್ ಮತ್ತೊಂದು ಪ್ರಮುಖ ಪಾತ್ರ ನಿರ್ವಹಿಸಲು ಸಜ್ಜಾಗುತ್ತಿದ್ದಾರೆ. ಇನ್ಫೋಸಿಸ್ ಸಹ ಸಂಸ್ಥಾಪಕ ಹಾಗೂ ಮನುಕುಲ ಸೇವಾ ಯಶಸ್ವಿ ಉದ್ಯಮಿ ಇನ್ಫೋಸಿಸ್ ನಾರಾಯಣಮೂರ್ತಿ ಅವರ ಜೀವನ ಮತ್ತು ಸಾಧನೆ ಕುರಿತ ಬಯೋಪಿಕ್‍ನಲ್ಲಿ ಅಲಿಯಾ ಭಟ್, ಇನ್ಪೀ ಮೂರ್ತಿಯವರ ಪತ್ನಿ, ಲೇಖಕಿ ಮತ್ತು ಸಮಾಜ ಸೇವಕಿ ಸುಧಾ ಮೂರ್ತಿ ಅವರ ಪಾತ್ರ ಪೋಷಣೆ ಮಾಡಲಿದ್ದಾಳೆ. ಅಶ್ವಿನಿ ಅಯ್ಯರ್ ತಿವಾರಿ ನಾರಾಯಣ ಮೂರ್ತಿ ಅವರ ಜೀವನಗಾಥೆ ಸಿನಿಮಾ ವನ್ನು ನಿರ್ದೇಶಿಸುತ್ತಿದ್ದು, ಸುಧಾ ಮೂರ್ತಿ ಪಾತ್ರಕ್ಕೆ ಅಲಿಯಾ ಸೂಕ್ತ ಎಂದು ನಿರ್ಧರಿಸಿ ಆಫರ್… Read More
Bollywood Cini Gossips Cinisuddi Fresh Cini News 

ಸನ್ನಿ ಲಿಯೋನ್ ಡ್ಯಾನ್ಸ್ ಶೂಟಿಂಗ್‍ಗೆ ವಿಘ್ನ..!

ಸನ್ನಿ ಲಿಯೋನ್-ಮಾದಕ ಮೈಮಾಟದಿಂದ ಪಡ್ಡೆಗಳಲ್ಲಿ ಸಮೂಹ ಸನ್ನಿ ಸೃಷ್ಟಿಸಿರುವ ಸೆಕ್ಸಿ ಡಾಲ್. ಈ ವರ್ಷ ಕೂಡ ಯೂ-ಟ್ಯೂಬ್‍ನಲ್ಲಿ ಜನರಿಂದ ಅತಿ ಹೆಚ್ಚು ಸರ್ಚ್‍ಗೆ ಒಳಗಾಗುತ್ತಿದ್ದ ಹೆಗ್ಗಳಿಕೆ ಈಕೆಯದ್ದು, ಸನ್ನಿ ಚಿತ್ರಗಳೆಂದರೆ ಅದು ಒಂದಿಲ್ಲೊಂದು ಕಾರಣಗಳಿಗೆ ಸದಾ ಸುದ್ದಿಯಲ್ಲಿರುತ್ತದೆ. ಆದರೆ ಇದು ಸನ್ನಿ ಅಭಿಮಾನಿಗಳಿಗೆ ಕೊಂಚ ಬೇಸರವಾಗುವ ಸುದ್ದಿ. ಕಾರಣ ಜಿಸ್ಮ್ ಖ್ಯಾತಿಯ ನಟಿಯ ಸ್ಪೆಷಲ್ ಸಾಂಗ್ ಮತ್ತು ಡ್ಯಾನ್ಸ್ ಶೂಟಿಂಗ್‍ಗೆ ವಿಘ್ನವಾಗಿದೆ. ಇದಕ್ಕೆ ಕಾರಣವೇನು..?ಮೋತಿದೂರ್ ಚಕ್ನಾಚೂರ್ ಚಿತ್ರಕ್ಕಾಗಿ ನವಾಜುದ್ದೀನ್ ಸಿದ್ದಿಖಿ ಮತ್ತು ಸನ್ನಿಲಿಯೋನ್ ಕಾಂಬಿನೇಷನ್‍ನ ಸ್ಪೆಷಲ್ ನಂಬರ್ ಸಾಂಗ್ ಶೂಟಿಂಗ್‍ಗೆ ಮುಂಬೈನ ಗೋರೆಗಾಂವ್‍ನ ಫಿಲ್ಮಿಸ್ತಾನ್… Read More
Cini Gossips Cinisuddi Fresh Cini News Tollywood 

ಖ್ಯಾತ ತೆಲುಗು ಹಾಸ್ಯ ನಟ ವೇಣು ಮಾಧವ್ ಇನ್ನಿಲ್ಲ ..!

ತೆಲುಗು ಖ್ಯಾತ ಕಾಮಿಡಿ ನಟ ವೇಣು ಮಾಧವ್ (39) ಅನಾರೋಗ್ಯದಿಂದ ಇಂದು ಹೈದರಾಬಾದ್ ನಲ್ಲಿ ವಿಧಿವಶರಾಗಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ವೇಣು ಮಾಧವ್ ರನ್ನು ಸಿಕಂದರಾಬಾದ್ ನಲ್ಲಿರುವ ಯಶೋಧಾ ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ಕೆಲದಿನಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ. ವೇಣು ಮಾಧವ್ ಅವರಿಗೆ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಮಂಗಳವಾರ ಅವರ ಆರೋಗ್ಯ ಸ್ಥಿತಿ ಇನ್ನಷ್ಟು ಕ್ಷೀಣಿಸಿದ ಕಾರಣ ಐಸಿಯುಗೆ ರವಾನಿಸಲಾಗಿತ್ತು. ಆದರೆ ಮಧ್ಯಾಹ್ನ 12.20ಕ್ಕೆ ಅವರು ಕೊನೆಯುಸಿರೆಳೆದಿದ್ದಾರೆ. ಚಿರಂಜೀವಿಯವರ ‘ಮಾಸ್ಟರ್’ ಸಿನಿಮಾ ಮೂಲಕ ಸಿನಿಮಾಗೆ ಎಂಟ್ರಿ ಕೊಡುತ್ತಾರೆ… Read More