ನವೆಂಬರ್ 25ಕ್ಕೆ ‘ಸದ್ದು ವಿಚಾರಣೆ ನಡೆಯುತ್ತಿದೆ’ ಚಿತ್ರ ಬಿಡುಗಡೆ.
ಎಂ. ಎಂ. ಸಿನಿಮಾಸ್ ಬ್ಯಾನರ್ ನಡಿ ಭಾಸ್ಕರ್ ಆರ್ ನೀನಾಸಂ ನಿರ್ದೇಶಿಸಿರುವ ಸದ್ದು ವಿಚಾರಣೆ ನಡೆಯುತ್ತಿದೆ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಇಂಟ್ರಸ್ಟಿಂಗ್ ಟ್ರೇಲರ್, ಚೆಂದದ ಹಾಡುಗಳ ಮೂಲಕ ಚಿತ್ರ ಪ್ರೇಮಿಗಳ ಮನಗೆದ್ದಿರುವ ಚಿತ್ರ ನವೆಂಬರ್ 25ಕ್ಕೆ ಪ್ರೇಕ್ಷಕರೆದುರು ಬರಲು ರೆಡಿಯಾಗಿದೆ. ರಂಗಭೂಮಿ ಪ್ರತಿಭೆ ಭಾಸ್ಕರ್ ಆರ್ ನೀನಾಸಂ ನಿರ್ದೇಶನದ ಮೊದಲ ಸಿನಿಮಾವಿದು. ಚಿತ್ರಕ್ಕೆ ಅಶ್ವಿನಿ ಕೆ ಎನ್ ಕಥೆ ಬರೆದಿದ್ದು, ಭಾಸ್ಕರ್ ಆರ್ ನೀನಾಸಂ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ನೈಜ ಘಟನೆಗಳಿಂದ ಸ್ಪೂರ್ತಿ ಪಡೆದು ಹೆಣೆದ ಈ ಚಿತ್ರ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ…
Read More