Cinisuddi Fresh Cini News 

ಬುಲೆಟ್ ಪ್ರಕಾಶ್ ಇನ್ನಿಲ್ಲ …!

ನಮ್ಮ ಸ್ಯಾಂಡಲ್ ವುಡ್ ನ ಹಾಸ್ಯ ಕಲಾವಿದ ಬುಲೆಟ್ ಪ್ರಕಾಶ್ ಇಂದು ನಗರದ ಫೋರ್ಟಿಸ್ ಹಾಸ್ಪಿಟಲ್ನಲ್ಲಿ ನಿಧನ ಗೊಂಡಿದ್ದಾರೆ. ಅನಾರೋಗ್ಯದಿಂದ ಹಾಸ್ಪಿಟಲ್ ದಾಖಲಾಗಿದ್ದ ಪ್ರಕಾಶ್ ಪತ್ನಿ , ಇಬ್ಬರು ಪುತ್ರರು ಹಾಗೂ ತಾಯಿಯನ್ನು ಅಗಲಿದ್ದಾರೆ. 44 ವರ್ಷದ ಬುಲೆಟ್ ಪ್ರಕಾಶ್ ಸುಮಾರು 325 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ಹೆಬ್ಬಾಳ ಸಮೀಪದ ಎಸ್ಟೀಮ್ ಮಾಲ್ ಭಾಗದ ಕೆಂಪಾಪುರದ ನಿವಾಸಿಯಾದ ಪ್ರಕಾಶ್ ಸಿನಿಮಾ ಸೇರಿದಂತೆ ಬಿಜೆಪಿ ಪಕ್ಷದಲ್ಲೂ ಸಕ್ರಿಯರಾಗಿ ಪಾಲ್ಗೊಂಡಿದ್ದಾರೆ . 2017 ರಲ್ಲಿ ದೇಹದ ತೂಕವನ್ನು ಇಳಿಸಿಕೊಂಡ ಪ್ರಕಾಶ್ ದೇಹದಲ್ಲಿ ಬಹಳಷ್ಟು ಏರುಪೇರುಗಳು ಎದುರಾಗಿತoತೆ. ಕ್ರ

ಮೇಣವಾಗಿ ಸುಧಾರಿಸುತ್ತಿದ್ದು ಪ್ರಕಾಶ್ ಇತ್ತೀಚಿನ ಕೆಲವು ತಿಂಗಳ ಹಿಂದೆ ಮತ್ತೆ ಅನಾರೋಗ್ಯ ಕಾಡಿದ್ದು ಆಸ್ಪತ್ರೆಗೆ ದಾಖಲಾಗಿದ್ದು ಇಂದು ಮುಂಜಾನೆ ನಿಧನ ಗೊಂಡಿದ್ದಾರೆ .

ಬಣ್ಣದ ಬದುಕನ್ನು ಬಹಳ ಪ್ರೀತಿಸಿದ್ದ ಬುಲೆಟ್ ಪ್ರಕಾಶ್ ಕ್ರೇಜಿಸ್ಟಾರ್ ರವಿಚಂದ್ರನ್, ಶಿವರಾಜ್ ಕುಮಾರ್ , ದರ್ಶನ್, ಸುದೀಪ್, ಉಪೇಂದ್ರ ಚಿತ್ರಗಳಾದ ಧ್ರುವ , ಪಾರ್ಥ, ಏಕೆ -47, ಸ ಓ ನನ್ನ ನಲ್ಲೆ , ಅಹಂ ಪ್ರೇಮಾಸ್ಮಿ , ಮಳೆ, ಓಂಕಾರ, ಅಂಬಿ, ಗಂಗಾ, ಅಕಿರ ಸೇರಿದಂತೆ ಹಲವಾರು ಚಿತ್ರಗಳಲ್ಲಿ ತಮ್ಮ ಹಾಸ್ಯ ಚಟಾಕಿಯನ್ನು ತೋರಿಸುವ ಮೂಲಕ ಪ್ರೇಕ್ಷಕರ ಮನಸ್ಸಲ್ಲಿ ಮನೆ ಮಾಡಿದರು.

Share This With Your Friends

Related posts