Bollywood Cinisuddi Fresh Cini News 

KVN 04 ಚಿತ್ರಕ್ಕೆ ಬಾಲಿವುಡ್ ವಿತರಕ ಅನಿಲ್ ತಡಾನಿ ಸಾಥ್.

ಏನೇ ಮಾಡಿದ್ರೂ ಭರ್ಜರಿ ಸದ್ದು ಮಾಡುತ್ತಾ ಸಿನಿಮಾರಂಗದಲ್ಲಿ ತನ್ನದೇ ಛಾಪನ್ನು ಮೂಡಿಸಿದ್ದ ಖ್ಯಾತ ನಿರ್ದೇಶಕ ಜೋಗಿ ಪ್ರೇಮ್. KVN ಸಂಸ್ಥೆ ನಿರ್ಮಾಣದಲ್ಲಿ ಧ್ರುವ ಸರ್ಜಾ ನಟನೆ ಹಾಗೂ ಜೋಗಿ ಪ್ರೇಮ್ ನಿರ್ದೇಶನದ ಇನ್ನೂ ಹೆಸರಿಡದ “KVN 04” ಚಿತ್ರ ಪ್ಯಾನ್ ಇಂಡಿಯಾ ಮೂಲಕ ಭಾರೀ ಸದ್ದನ್ನು ಮಾಡಲು ಸಿದ್ಧವಾಗುತ್ತಿದೆ. ಈಗಾಗಲೇ ಬಾಹುಬಲಿ, ಕೆ.ಜಿ.ಎಫ್, ಪುಷ್ಪ ಚಿತ್ರಗಳನ್ನ ಬಾಲಿವುಡ್ ನಲ್ಲಿ ವಿತರಿಸಿದ್ದ ಖ್ಯಾತ ವಿತರಕ , ನಿರ್ಮಾಪಕ ಅನಿಲ್ ತಡಾನಿ KVN ಸಂಸ್ಥೆಯೊಂದಿಗೆ ಕೈ ಜೋಡಿಸುತ್ತಿದೆ. #KVN 04 ಚಿತ್ರದ ಕೆಲಸಕ್ಕಾಗಿ‌ ಮುಂಬೈಗೆ ಹೋಗಿದ್ದ ಸಂದರ್ಭದಲ್ಲಿ ಖ್ಯಾತ ವಿತರಕ ಅನಿಲ್ ರವರನ್ನು ನಿರ್ದೇಶಕ ಪ್ರೇಮ್ ಜೊತೆಗೆ ಕೆವಿಎನ್ ಸಂಸ್ಥೆಯ ಬಿಸಿನೆಸ್ ಹೆಡ್ ಸುಪ್ರೀತ್ ಭೇಟಿಯಾಗಿದ್ದಾರೆ. ಈ ಭೇಟಿ ಪ್ಯಾನ್ ಇಂಡಿಯಾ ಸಿನಿಮಾ ಅಂತ ಹೇಳ್ತಿರೋ #KVN 04 ಮೇಲೆ ಕುತೂಹಲ ಹೆಚ್ಚಿಸಿದೆ. ನಿರ್ದೇಶಕ ಪ್ರೇಮ್ ಸಾರಥ್ಯ ಅಂದರೆ ಪ್ರತಿ ಹಂತದಲ್ಲೂ ಒಂದಲ್ಲ ಒಂದು ವಿಶೇಷತೆಗಳು ಇದ್ದೇ ಇರುತ್ತದೆ. ಇಂಥ ಹಲವು ವಿಷಯಗಳು ನಿಮಗೆ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಸಿಗಲಿದೆ.

Related posts