ಹೋಂ ಕ್ವಾರಂಟೈನ್ ನಲ್ಲಿ ಬಾಲಿವುಡ್ ನಟ ಆಮಿರ್ ಖಾನ್
ಬಾಲಿವುಡ್ ನಟ ಕಂ ನಿರ್ದೇಶಕ ಅಮೀರ್ ಖಾನ್ ಅವರ ಮನೆಗೂ ಈಗ ಕೊರೋನಾ ವೈರಸ್ ದಾಳಿ ಇಟ್ಟಿದೆ. ಅಮೀರ್ ಖಾನ್ ಅವರ ಮನೆಯಲ್ಲಿ ಕೆಲಸ ಮಾಡುವ ಕೆಲವರಿಗೆ ಈಗ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ನಟ ಅಮೀರ್ ಖಾನ್ ಅವರು ಹೋಂ ಕ್ವಾರಂಟೈನ್ ಆಗಿದ್ದಾರೆ.
ಸ್ವತ: ಅಮೀರ್ ಖಾನ್ ಅವರೇ ಈ ಬಗ್ಗೆ ಟ್ವಿಟ್ ಮಾಡಿದ್ದು, ನಮ್ಮ ಕುಟುಂಬದ ಎಲ್ಲರಿಗೂ ಕೊರೋನಾ ಪರೀಕ್ಷೆ ಮಾಡಿಸಿದ್ದು, ನಮ್ಮಲ್ಲಿ ಯಾರಿಗೂ ಕೊರೋನಾ ಬಂದಿಲ್ಲ ಎಂದು ತಿಳಿಸಿದ್ದಾರೆ. ಈಗ ಅಮೀರ್ ಖಾನ್ ಅವರು ತಮ್ಮ ತಾಯಿಯನ್ನು ಕೂಡ ಕೊರೋನಾ ಪರೀಕ್ಷೆಗೆ ಒಳಪಡಿಸಿದ್ದಾರೆ.
ಹೀಗಾಗಿ ತಮ್ಮ ತಾಯಿಗೆ ಕೊರೋನಾ ನೆಗೆಟಿವ್ ಬರಲಿ ಎಂದು ಪ್ರಾರ್ಥಿಸಿ ಅಂತ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ನಮ್ಮ ಮನೆಯ ಕೆಲವು ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಬಂದಿದೆ. ತಕ್ಷಣ ನಾವು ಹೋಮ್ ಕ್ವಾರಂಟೈನ್ ಆಗಿದ್ದೇವೆ.
ಬಿಎಂಸಿ (ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ) ಅಧಿಕಾರಿಗಳು ಸಿಬ್ಬಂದಿಯನ್ನು ಚಿಕಿತ್ಸೆಗಾಗಿ ತ್ವರಿತವಾಗಿ ಆಸ್ಪತೆಗೆ ಕರೆದುಕೊಂಡು ಹೋದರು. ಆದ್ದರಿಂದ ಶೀಘ್ರವೇ ಕಾಳಜಿ ವಹಿಸಿದ್ದಕ್ಕಾಗಿ ಮತ್ತು ಕಟ್ಟಡವನ್ನು ಸೋಂಕು ನಿವಾರಕ ದ್ರಾವಣದಿಂದ ಸ್ವಚ್ಛಗೊಳಿಸಿದ್ದಕ್ಕಾಗಿ ಬಿಎಂಸಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಅವರು ಬರೆದುಕೊಂಡಿದ್ದಾರೆ.
ನಮ್ಮ ಕುಟುಂಬವರೆಲ್ಲ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದು, ಎಲ್ಲರದ್ದು ನೆಗೆಟಿವ್ ವರದಿ ಬಂದಿದೆ. ಇದೀಗ ನಾನು ನನ್ನ ತಾಯಿಯನ್ನು ಕೊರೊನಾ ಪರೀಕ್ಷೆಗಾಗಿ ಕರೆದುಕೊಂಡು ಹೋಗುತ್ತಿದ್ದೇನೆ. ಅವರಿಗೆ ಕೊರೊನಾ ನೆಗೆಟಿವ್ ಬರಲಿ ಎಂದು ದಯವಿಟ್ಟು ಪ್ರಾರ್ಥಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಅಷ್ಟೇ ಅಲ್ಲದೇ ಆಸ್ಪತ್ರೆ, ಅಲ್ಲಿನ ವೈದ್ಯರು, ನರ್ಸ್ ಮತ್ತು ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ತಕ್ಷಣವೇ ಸಹಾಯ ಮಾಡಿದ ಬಿಎಂಸಿಗೆ ಮತ್ತೊಮ್ಮೆ ಧನ್ಯವಾದ ತಿಳಿಸಿದ್ದಾರೆ.