Uncategorized 

ಬಿಜಿಎಸ್ ಇಂಟರ್ ನ್ಯಾಷನಲ್ ಅಕಾಡೆಮಿ ಹಾಗೂ ಬಿಜಿಎಸ್ ಕ್ರಿಕೆಟ್ ಮೈದಾನ ಉದ್ಘಾಟನೆ

ಬೆಂಗಳೂರು.ಫೆ.9 : ಶಿಕ್ಷಣವು ಮನುಷ್ಯನ ವ್ಯಕ್ತಿತ್ವ ವಿಕಸನಗೊಳಿಸುತ್ತದೆ ಹಾಗೆ ಶಿಕ್ಷಣದಲ್ಲಿ ಕ್ರೀಡೆ ಸಮ್ಮಿಲನಗೊಂಡರೆ ಶಿಕ್ಷಣ ಪರಿಪೂರ್ಣಗೊಳ್ಳುತ್ತದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇಂದಿಲ್ಲಿ ತಿಳಿಸಿದರು. ಕುಂಬಳಗೋಡು ಬಳಿಯ ಬಿಜಿಎಸ್ ನಾಲೆಡ್ಜ್ ಸಿಟಿಯಲ್ಲಿ ಇಂದು ಬಿಜಿಎಸ್ ಇಂಟರ್ ನ್ಯಾಷನಲ್ ಅಕಾಡೆಮಿ ಹಾಗೂ ನೂತನವಾಗಿ ನಿರ್ಮಿಸಿರುವ ಬಿಜಿಎಸ್ ಕ್ರಿಕೆಟ್ ಮೈದಾನ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ಬೌದ್ಧಿಕ ಹಾಗೂ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಶಿಕ್ಷಣದ ಜೊತೆಗೆ ಆಟ ಪರಿಣಾಮ ಬೀರುತ್ತದೆ ಎಂದು ತಿಳಿಸಿದರು .ರಾಜ್ಯ ಸರ್ಕಾರ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬಹಳಷ್ಟು ಶ್ರಮ ವಹಿಸಿದೆ ಮುಂಬರುವ ಒಲಿಂಪಿಕ್ ನಲ್ಲಿ ಪದಕ ಗೆಲ್ಲುವ ನಿಟ್ಟಿನಲ್ಲಿ ಈಗಾಗಲೇ ಯಲಹಂಕ ಬಳಿ ತರಬೇತಿ ಶಾಲೆಯನ್ನು ಕೂಡ ನಡೆಸುತ್ತಿದ್ದೇವೆ ಎಂದು ತಿಳಿಸಿದರು .

ಇಲ್ಲಿ ಶೂಟಿಂಗ್ ಸ್ವಿಮ್ಮಿಂಗ್ ಆರ್ಥ್ರಿಟಿಸ್ ಗಳಿಗೆ ಅನುಕೂಲವಾಗುವಂತಹ ಪರಿಸರವನ್ನ ನಿರ್ಮಿಸಲಾಗುತ್ತಿದ್ದು ಕ್ರೀಡಾಪಟುಗಳಿಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ ಎಂದು ಹೇಳಿದರು .ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೆಚ್ಚಿನ ಆಸಕ್ತಿ ವಹಿಸಿದೆ ಕ್ರೀಡೆ ಸ್ಪರ್ಧೆಯಲ್ಲ ಮನುಷ್ಯನ ಆರೋಗ್ಯ ಮತ್ತು ಬೌದ್ಧಿಕ ಶಕ್ತಿಯ ಮೇಲೂ ಅದು ಪರಿಣಾಮ ಬೀರುತ್ತದೆ ಎಂದು ಹೇಳಿದರು.

ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಮಾಡಿರುವ ಕ್ರಾಂತಿಕಾರಿ ಬದಲಾವಣೆಯನ್ನು ನಾನು ಸದಾ ಸ್ಮರಿಸುತ್ತೇನೆ ಈ ನಿಟ್ಟಿನಲ್ಲಿ ಈಗ ಪರಮಪೂಜ್ಯ ಶ್ರೀ ನಿರ್ಮಲಾನಂದ ಸ್ವಾಮೀಜಿ ಸ್ವಾಮೀಜಿ ಅವರು ಅದನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ತುಂಬಾ ಸಂತಸ ತಂದಿದೆ ಎಂದು ಹೇಳಿದರು.

ಹಲವು ಸಂಕಷ್ಟ ಸಂದರ್ಭದಲ್ಲಿ ನಾನು ಬಾಲಗಂಗಾಧರನಾಥ ಶ್ರೀಗಳ ಅವರ ಮಾರ್ಗದರ್ಶನ ಅಲ್ಲಿ ಅವರು ನೀಡುತ್ತಿದ್ದ ಸಲಹೆಗಳು ಮತ್ತು ತಿಳುವಳಿಕೆ ನನಗೆ ಸಾಕಷ್ಟು ಕಲಿಸಿದೆ ಎಂದು ಹೇಳಿದರು .ಆದಿಚುಂಚನಗಿರಿ ಮಹಾಸಂಸ್ಥಾನದ ಜೊತೆಗೆ ನಾನು ನಿಕಟ ಸಂಪರ್ಕ ಹೊಂದಿದ್ದೇನೆ ಶ್ರೀಗಳ ಮಾರ್ಗದರ್ಶನ ಆಶೀರ್ವಾದ ನಾನು ಸದಾ ಬಯಸುತ್ತೇನೆ ಎಂದು ಹೇಳಿದರು ಇಂದು ಇಲ್ಲಿ ಆರಂಭಗೊಂಡಿರುವ ಬಿಜಿಎಸ್ ಕ್ರಿಕೆಟ್ ಮೈದಾನ ಅತ್ಯುತ್ತಮವಾಗಿದ್ದು ಇದು ಸದುಪಯೋಗವಾಗಲಿ ಮತ್ತು ಹೊಸ ಕ್ರೀಡಾಪಟುಗಳು ಬೆಳೆಯುವಂತಾಗಲಿ ಎಂದು ಅವರು ಆಶಿಸಿದರು .

ಬಿಜಿಎಸ್ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ ಶಿಕ್ಷಣ ಆರೋಗ್ಯ ಅನ್ನದಾಸೋಹ ದಲ್ಲೂ ಕೂಡ ತನ್ನದೇ ಆದ ಪಾತ್ರವನ್ನು ವಹಿಸುತ್ತಿದೆ ಮಠ ಕೈಗೊಳ್ಳುವ ಜನಪರ ಯೋಜನೆಗಳಿಗೆ ಸರ್ಕಾರ ಸದಾ ಸ್ಪಂದಿಸುತ್ತದೆ ಎಂದು ತಿಳಿಸಿದರು ಉಪಮುಖ್ಯಮಂತ್ರಿ ಡಾ ಅಶ್ವಥ್ ನಾರಾಯಣ ಅವರು ಮಾತನಾಡಿ ಕ್ರೀಡೆ ಮನುಷ್ಯನ ಆರೋಗ್ಯ ಮತ್ತು ಮನಸ್ಸನ್ನ ಸ್ಥಿಮಿತದಲ್ಲಿಡುತ್ತದೆ.

ಯುವ ಸಮುದಾಯ ಇಂದು ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕಾಗಿದೆ ಇದಕ್ಕೆ ಕ್ರೀಡೆ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು .ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಆರಂಭದಲ್ಲೇ ಕ್ರೀಡಾ ಸ್ಫೂರ್ತಿಯ ಮಾತುಗಳನ್ನಾಡಿ ಕ್ರೀಡೆಯಲ್ಲಿ ನಾವು ಪ್ರೀತಿಸಬೇಕು ಸಹ ಆಟಗಾರನ ಗೌರವಿಸಬೇಕು ನಮ್ಮ ತಂಡದ ಆಟಗಾರರನ್ನು ಹುರಿದುಂಬಿಸಬೇಕು ಗೌರವಿಸಬೇಕು ಅಂತೆಯೇ ಅಂಪೈರ್ ಆಗಿ ನಿಂತಿರುವಂತಹ ಅವರ ತೀರ್ಪನ್ನುಕ್ರೀಡಾ ಮನೋಭಾವ ದಲ್ಲಿ ಗೌರವಿಸಬೇಕು ಮತ್ತು ಎದುರಾಳಿ ತಂಡವನ್ನು ಕೂಡ ಸಮಾನವಾಗಿ ಗೌರವಿಸಬೇಕು ಬೀಜದ ಕೊಲೆಯಲ್ಲಿ ಫಲಿತಾಂಶ ಏನೇ ಆದರೂ ಸಹ ಪರಸ್ಪರ ಹಿಲ್ಡಾ ಸ್ಫೂರ್ತಿಯಲ್ಲೇ ಆಟವನ್ನ ಗೌರವಿಸಬೇಕು ಎಂದು ಹೇಳಿದರು.

ತಮ್ಮ ನಾಯಕನನ್ನು ನಮ್ಮ ಸಹ ಆಟಗಾರರನ್ನು ಕ್ರೀಡಾ ಕಾರು ತೀರ್ಪುಗಾರರನ್ನು ಹಾಗೂ ತಂಡವಾದ ಮುಖ್ಯಸ್ಥರನ್ನು ಗೌರವಿಸಿ ಕೆಲ ಸಂದರ್ಭಗಳಲ್ಲಿ ನಿಮ್ಮ ವಿರುದ್ಧವೇ ಇದ್ದರೂ ಸೌಜನ್ಯದಿಂದ ವರ್ತಿಸಿ ಅದೇ ನಿಜವಾದ ಕ್ರೀಡಾ ಸ್ಫೂರ್ತಿ ಎಂದು ಹೇಳಿದರು .ನಟ ನಿರ್ಮಾಪಕ ನಿರ್ದೇಶಕ ಕಿಚ್ಚ ಸುದೀಪ್ ಮಾತನಾಡಿ ಇಂದು ಈ ಸುಂದರ ಸಂಜೆಯಲ್ಲಿ ಪಾಲ್ಗೊಳ್ಳುತ್ತಿರುವುದು ನನಗೆ ಖುಷಿ ಕೊಟ್ಟಿದೆ ಅದರಲ್ಲೂ ಇಂಥ ಮಹನೀಯರ ನಡುವೆ ಇರುವುದೇ ನನ್ನ ಸೌಭಾಗ್ಯ ಎಂದು ಭಾವಿಸುತ್ತೇನೆ ಎಂದು ಹೇಳಿದರು ನಾನು ಆದಿಚುಂಚನಗಿರಿ ಮಠದ ಸದ್ಭಕ್ತರು ಭಕ್ತನಾಗಿದ್ದು ಶ್ರೀಗಳ ಆಶೀರ್ವಾದ ಸೌಭಾಗ್ಯ ದೊರೆತಿದೆ ಇದು ನನ್ನ ಪುಣ್ಯ ಎಂದು ಹೇಳಿದರು .

ಮುಂದಿನ ದಿನಗಳಲ್ಲಿ ನಾನೂ ಕೂಡ ನಾನು ಹಾಗೂ ರಾಹುಲ್ ದ್ರಾವಿಡ್ ಇದೇ ಮೈದಾನದಲ್ಲಿ ಆಡುವಂತಹ ಸಂದರ್ಭ ಬರಲಿ ಎಂದು ಅವರು ಆಶಿಸಿದರು .ಆರ್ಟ್ ಆಫ್ ಲಿವಿಂಗ್ ನ ಶ್ರೀ ರವಿಶಂಕರ್ ಗುರೂಜಿ ಮಾತನಾಡಿ ಇಂದಿನ ಯುವ ಸಮುದಾಯ ಮೊಬೈಲ್ ಕಂಪ್ಯೂಟರ್ ನಲ್ಲೇ ಕೂತಲ್ಲೇ ಕೂತು ಕಾಲ ಕಳೆಯುತ್ತಿದೆ .

ಈಗ ಮೇಲೆದ್ದು ಮೈದಾನಕ್ಕಿಳಿದು ಆಟವಾಡುವಂತಹ ಸಂದರ್ಭ ಎದುರಾಗಿದೆ ಇದರಿಂದ ಆರೋಗ್ಯವೂ ಮಾನಸಿಕ ನೆಮ್ಮದಿಯೂ ಸಿಗುತ್ತದೆ ಎಂದು ಹೇಳಿದರು ಮಕ್ಕಳ ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹ ಅಗತ್ಯ ಎಂದು ಹೇಳಿದರು .ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿ.

ಆರೋಗ್ಯವಂತ ಜೀವನಕ್ಕೆ ವ್ಯಾಯಾಮದ ಜತೆಗೆ ಕ್ರೀಡೆ ಅವಶ್ಯಕ .ಆಟದಲ್ಲಿ ಸ್ಪರ್ಧೆ ಅನಿವಾರ್ಯ ಅಂತಹ ಸಂದರ್ಭದಲ್ಲಿ ನಾವು ಮಾನಸಿಕವಾಗಿ ಕ್ರೀಡಾಸ್ಫೂರ್ತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು .ಶ್ರೀ ಪ್ರಕಾಶನಾಥ ಸ್ವಾಮೀಜಿ ಕೆಎಸ್ ಸಿಎ ಮೆನನ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಆದಿಚುಂಚನಗಿರಿ ಶಾಖಾ ಮಠದ ಸ್ವಾಮಿಗಳು ಹಲವು ಗಣ್ಯರು ಕಾರ್ಯಕ್ರಮದಲ್ಲಿ ಸಾಕ್ಷಿಯಾದರು ಕಾರ್ಯಕ್ರಮ ಆರಂಭಕ್ಕೂ ಮುನ್ನ ಮೈದಾನ ಉದ್ಘಾಟನೆ ಲೇಸರ್ ಲೈಟ್ ಗಳು ಹಾಗೂ ಝಗಮಗಿಸುವ ದೀಪಾಲಂಕಾರದ ಸಂಗೀತಾ ಹಾಗೂ ಸಿಡಿಮದ್ದುಗಳ ಪ್ರದರ್ಶನ ನೆರೆದಿದ್ದವರ ವಿದ್ಯಾರ್ಥಿಗಳನ್ನ ರಂಜಿಸಿತ್ತು

Related posts