Cinisuddi Fresh Cini News 

‘ಬಿಚ್ಚುಗತ್ತಿ’ ಚಿತ್ರದ ಶೂಟಿಂಗ್ ಕಂಪ್ಲೀಟ್

ಮೊದಲ ಫೋಸ್ಟರ್ ಮೂಲಕವೇ ಸ್ಯಾಂಡಲ್ ವುಡ್ ನ ಸಿನಿಮಂದಿಯನ್ನು ಗಮನ ಸೆಳೆದಿದ್ದ ಬಿಚ್ಚು ಗತ್ತಿ ಸಿನಿಮಾ ಚಿತ್ರೀಕರಣ ಮುಕ್ತಾಯಗೊಂಡಿದೆ. ಇದೊಂದು ಐತಿಹಾಸಿಕ ಸಿನಿಮಾವಾಗಿದ್ದು, ಇದಕ್ಕೆ ಖ್ಯಾತ ಕಾದಂಬರಿಕಾರ ಬಿ.ಎಲ್.ವೇಣು ಚಿತ್ರಕತೆ ಬರೆದಿದ್ದರು.

ವಿಶೇಷವೆಂದರೆ ಇದು ಬಿ.ಎಲ್. ವೇಣು ಅವರ ಬಿಚ್ಚುಗತ್ತಿ ಭರಮಣ್ಣ ನಾಯಕ ಕಾದಂಬರಿ ಆಧಾರಿತ ಚಿತ್ರವೂ ಕೂಡ. ವಿಕ್ಟರಿ 2 ಬಳಿಕ ಹರಿ ಸಂತೋಷ್ ಈ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದರು.

ಇನ್ನು ಬಿಚ್ಚುಗತ್ತಿ ಭರಮಣ್ಣ ನಾಯಕನಾಗಿ ಹಿರಿಯ ನಟ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ದನ್ ಅಭಿನಯಿಸುತ್ತಿದ್ದು, ಹರಿಪ್ರಿಯ ಚಿತ್ರದ ನಾಯಕಿಯಾಗಿದ್ದಾರೆ. ಬಹುತೇಕ ವೈವಿದ್ಯಮಯ ಪಾತ್ರಗಳನ್ನೇ ಇತ್ತೀಚಿಗೆ ಆರಿಸಿಕೊಳ್ಳುತ್ತಿರುವ ಹರಿಪ್ರಿಯಾ ಅವರಿಗೂ ಬಿಚ್ಚುಗತ್ತಿ ಹೊಸ ಅನುಭವ ಕೂಡ.

ಇನ್ನು ಬಿಚ್ಚುಗತ್ತಿಯಲ್ಲಿ ಬಾಹುಬಲಿ ಖ್ಯಾತಿಯ ಪ್ರಭಾಕರ್, ಶ್ರೀನಿವಾಸ್ ಮೂರ್ತಿ, ಕಲ್ಯಾಣಿ, ಶಿವರಾಮ್, ರೇಖಾ, ರಮೇಶ್ ಪಂಡಿತ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಬಿಚ್ಚುಗತ್ತಿ ಚಿತ್ರವು ಶ್ರೀ ಕೃಷ್ಣ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗಲಿದೆ. ಅಂದಹಾಗೆ ಕೆ.ಎಂ. ಪ್ರಕಾಶ್ ಸಂಕಲನದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ಎಡ್ವರ್ಡ್ ಕೆನಡಿ ಕಲಾ ನಿರ್ದೇಶಕರಾಗಿ ಬಿಚ್ಚುಗತ್ತಿಯಲ್ಲಿ ಕಾರ್ಯನಿವರ್ಹಿಸಿದ್ದಾರೆ.

ನಾದಬ್ರಹ್ಮ ಹಂಸಲೇಖ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆಯನ್ನು ಮಾಡಿರುವುದು ವಿಶೇಷವಾಗಿದೆ. ಈ ಚಿತ್ರವು ಎರಡು ಪಾರ್ಟ್ ಗಳಲ್ಲಿ ಬರಲಿದ್ದು, ಚಾಪ್ಟರ್ 1 ದಳವಾಯಿ ದಂಗೆಯಕಥೆ ಹೇಳುತ್ತದೆ.

Share This With Your Friends

Related posts