Cinisuddi Fresh Cini News 

ನೈಜ ಘಟನೆಯಾಧಾರಿತ ‘ಭ್ರಮೆ’

ಹಿರಿಯ ನಿರ್ದೇಶಕ ತಿಪಟೂರು ರಘು ಅವರ ಪುತ್ರ ನವೀನ್ ಈಗ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಕುಂದಾಪುರದಲ್ಲಿ ನಡೆದ ನೈಜ ಘಟನೆಯೊಂದನ್ನು ಆಧಾರವಾಗಿಟ್ಟುಕೊಂಡು ನಿರ್ಮಿಸಲಾಗಿರುವ ಈ ಚಿತ್ರದ ಹೆಸರು ಭ್ರಮೆ.

ನವೀನ್ ಜೊತೆ ಅಂಜನಾಗೌಡ ಹಾಗೂ ಇಶಾನಾ ಇಬ್ಬರು ನಾಯಕಿಯರು ಈ ಚಿತ್ರದಲ್ಲಿದ್ದು, ಇದೊಂದು ಹಾರರ್ ಕಾಮಿಡಿ ಸಬ್ಜೆಕ್ಟ್ ಆಗಿದ್ದು, ಈ ಚಿತ್ರಕ್ಕೆ ಚರಣರಾಜ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚರಣರಾಜ್ ಈ ಹಿಂದೆ ಸುಬ್ಬ ಮತ್ತು ಸುಬ್ಬಿ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು.

ಆದರೆ ಕಾರಣಾಂತರಗಳಿಂದ ಆ ಚಿತ್ರ ಅರ್ಧಕ್ಕೇ ನಿಂತಿತ್ತು. ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಸೆ.5ರ ಶಿಕ್ಷಕರ ದಿನಾಚರಣೆಯ ದಿನವೇ ಬಿಡುಗಡೆಯಾದದ್ದು ವಿಶೇಷ.

ಕನ್ನಡ ಚಿತ್ರರಂಗಕ್ಕೆ ಹಲವಾರು ಎವರ್‍ಗ್ರೀನ್ ಹಿಟ್ ಚಿತ್ರಗಳನ್ನು ನೀಡಿದ ಭಗವಾನ್ ಅವರು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ಚಿತ್ರದಲ್ಲಿ ಕೆಲಸ ಮಾಡಿರುವ ಬಹುತೇಕರು ಇವರ ಶಿಶ್ಯಂದಿರೇ ಆಗಿದ್ದಾರಲ್ಲದೆ ಶಿಕ್ಷಕರ ದಿನದ ಸಂದರ್ಭದಲ್ಲಿ ಗುರುಗಳೇ ಬಂದು ಹಾರೈಸಿದ್ದು ಮತ್ತೊಂದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಚರಣರಾಜ್ ನನ್ನ ಮೊದಲ ಚಿತ್ರ ಅರ್ಧಕ್ಕೆ ನಿಂತಿತು. ಕುಂದಾಪುರದಲ್ಲಿ ನಡರೆದಂಥ ನೈಜ ಘಟನೆಯನ್ನು ಇಟ್ಟುಕೊಂಡು ಈ ಚಿತ್ರ ಮಾಡಿದ್ದೇವೆ. ನಾಯಕ ಆಸ್ಪತ್ರೆಯೊಂದರಲ್ಲಿ ಮೇಲ್ ನರ್ಸ್.

ತುಂಬಾ ಎಫರ್ಟ್ ಹಾಕಿ, ವರ್ಕ್‍ಷಾಪ್ ಮಾಡಿ ಈ ಚಿತ್ರ ಮಾಡಿದ್ದೇವೆ. ಇದೇ ನವೆಂಬರ್ ಒಂದರಂದು ನಮ್ಮ ಫ್ಲಿಕ್ಟ್ ಓಟಿಟಿಯಲ್ಲಿ ಈ ಚಿತ್ರವನ್ನು ರಿಲೀಸ್ ಮಾಡುತ್ತಿದ್ದೇವೆ. ಆನ್‍ಲೈನ್ ಟಿಕೆಟ್ ಥರ ಸೇಲ್ ಮಾಡಿ ಚಿತ್ರ ರಿಲೀಸ್ ಮಾಡುತ್ತಿದ್ದೇವೆ.

99 ರೂ.ಗಳನ್ನು ಪಾವತಿಸಿ ಟಿಕೆಟ್ ಖರೀದಿಸಿ, ಅದರಲ್ಲಿರುವ ನಂಬರನ್ನು ಸ್ಕ್ರ್ಯಾಚ್ ಮಾಡಿ ನಮ್ಮ ಫ್ಲಿಕ್ಸ್ ಆಪ್‍ನಲ್ಲಿ ಎಂಟ್ರಿ ಮಾಡಿಕೊಂಡು ತಮ್ಮ ಮೊಬೈಲಿನಲ್ಲಿಯೇ ಚಿತ್ರವನ್ನು ವೀಕ್ಷಿಸಬಹುದು. ಚಿಕ್ಕಮಗಳೂರಿನ ರಾಣಿಝರಿ ಎಂಬಲ್ಲಿ ಈವರೆಗೂ ಯಾರೂ ಶೂಟ್ ಮಾಡಿರದಂಥ ಲೊಕೇಶನ್ ಹುಡುಕಿ ಹಾಡನ್ನು ಚಿತ್ರೀಕರಿಸಿದ್ದೇವೆ ಎಂದು ಹೇಳಿದರು.

ನಂತರ ನಾಯಕನಟ ನವೀನ್ ಮಾತನಾಡಿ ನಮ್ಮ ತಂದೆ ಒಬ್ಬ ನಿರ್ದೇಶಕರಾಗಿದ್ದು, ನನಗೆ ಮನೆಯಲ್ಲೇ ಒಂದಷ್ಟು ಕಲಿಯುವಂಥ ಅವಕಾಶ ಸಿಕ್ಕಿತ್ತು. ನಂತರ ಭಗವಾನ್ ಸರ್ ಅವರ ಜೊತೆ ಇನ್‍ಸ್ಟಿಟ್ಯೂಟ್‍ನಲ್ಲಿ ಟ್ರೈನಿಂಗ್ ಪಡೆದೆ.

ಇದೊಂದು ಹಾರರ್ ಕಾಮಿಡಿ ಚಿತ್ರ. ತುಂಬಾ ಮಜಾ ಕೊಡುತ್ತೆ. ಡಾ. ನಾಗೇಂದ್ರ ಪ್ರಸಾದ್ ಅವರು ಲಿರಿಕ್ ಬರೆದು ಸಂಗೀತ ಸಂಯೋಜನೆ ಮಾಡಿಕೊಟ್ಟಿದ್ದಾರೆ. ಇಶಾನಾ ಮತ್ತು ಅಂಜನಾಗೌಡ ಅಲ್ಲದೆ ನಟ ಪವನ್ ಕೂಡ ನನ್ನ ಜೊತೆ ಆ್ಯಕ್ಟ್ ಮಾಡಿದ್ದಾರೆ, ನನ್ನ ಸಹೋದರಿಯೇ ಈ ಚಿತ್ರದಲ್ಲಿ ಕೋ ಡೈರೆಕ್ಟ್‍ರ್ ಆಗಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ನಾಯಕಿ ಅಂಜನಾಗೌಡ ಮಾತನಾಡಿ ಇಂಥ ಪ್ಯಾನಿಕ್ ಸಿಚುಯೇಶನ್‍ನಲ್ಲೂ ಈ ಕಾರ್ಯಕ್ರಮ ನಡೆಯುತ್ತಿರುವುದು ಖುಷಿ ನೀಡಿದೆ. ಎಲ್ಲರೂ ಒಂದೇ ಮನೆಯವರ ಥರ ಸೇರಿ ಕೆಲಸ ಮಾಡಿದ್ದೇವೆ. ಚಿತ್ರದಲ್ಲಿ ನನ್ನ ಪಾತ್ರಕ್ಕೆ ಅವಕಾಶ ಕಮ್ಮಿ ಇದ್ದರೂ ನೋಡುಗರ ನೆನಪಲ್ಲುಳಿಯುತ್ತದೆ ಎಂದು ಹೇಳಿದರು.

ಮತ್ತೊಬ್ಬ ನಾಯಕಿ ಇಶಾನಾ ಮಾತನಾಡಿ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಇದೇ ನವೆಂಬರ್‍ನಲ್ಲಿ ರಿಲೀಸ್ ಆಗುತ್ತಿದೆ ಎಂದು ಹೇಳಿದರು. ಚಿತ್ರದಲ್ಲಿ ಕಾಮಿಡಿ ಪಾತ್ರ ನಿರ್ವಹಿಸಿರುವ ನಟ ಪವನ್ ಮಾತನಾಡಿ ಇದು ನೈಜ ಘಟನೆ ಇಟ್ಟುಕೊಂಡು ಮಾಡಿರುವ ಚಿತ್ರ. ನನ್ನದು ಹಾಸ್ಪಿಟಲ್‍ನಲ್ಲಿ ಅಟೆಂಡರ್ ಪಾತ್ರ.

ಕಾಮಿಡಿಯಾಗಿದೆ ಎಂದು ಹೇಳಿಕೊಂಡರು. ಗೀತಾ ಆರ್. ಪಟ್ಟಣ ಶೆಟ್ಟಿ ಹಾಗೂ ರವಿಕಿರಣ್ ಶೆಟ್ಟಿ ಸೇರಿ ಚಿತ್ರದ ಪೋಸ್ಟರ್ ರಿಲೀಸ್ ಮಾಡಿದರು. ಕಾಮಿಡಿ ಕಿಲಾಡಿಗಳು ಮುತ್ತುರಾಜ್ ಹಾಗೂ ಗಾಯಕ ಹರ್ಷ ಕೂಡ ಈ ಸಂದರ್ಭದಲ್ಲಿ ಹಾಜರಿದ್ದರು. ನಮ್ಮ ಫ್ಲಿಕ್ಸ್‍ನ ವಿಜಯಪ್ರಕಾಶ್ ಕೂಡ ಈ ಸಂದರ್ಭದಲ್ಲಿ ಹಾಜರಿದ್ದು, 2010-11ರಲ್ಲಿ ನಾನೂ ಐಐಎಫ್‍ಟಿ ವಿದ್ಯಾರ್ಥಿಯಗಿದ್ದೆ.

ನಮ್ಮ ಫ್ಲಿಕ್ಸ್ ನಲ್ಲಿ ಪ್ರೀಮಿಯರ್ ಆಗುತ್ತಿರುವ ಮೊದಲ ಕನ್ನಡ ಚಿತ್ರವಿದು. ಕೋವಿಡ್ ಸ್ಟಾರ್ಟ್ ಆದಾಗ ನಮ್ಮ ಆ್ಯಪ್ ಇನ್ನೂ ಆರಂಭವಾಗಿರಲಿಲ್ಲ, ರೆವಲ್ಯೂಷನ್‍ನಲ್ಲಿ ಎಲ್ಲಾ ಬದಲಾವಣೆ ಆಗುವುದು ಸಹಜ. ಮುಂದಿನ 5 ವರ್ಷಗಳಲ್ಲಿ ಎಲ್ಲರೂ ಓಟಿಟಿಗೆ ಬದಲಾಗುತ್ತಾರೆ. ವಿತರಕರಿಗೆ ಕೊಡುವಂಥ ಹಣವನ್ನೇ ನಾವು ಪ್ರೇಕ್ಷಕರಿಗೆ ಬಹುಮಾನದ ರೂಪದಲ್ಲಿ ನೀಡುತ್ತಿದ್ದೇವೆ ಎಂದು ಹೇಳಿದರು.

Share This With Your Friends

Related posts