Cinisuddi Fresh Cini News 

ನೈಜ ಘಟನೆಯ “ಭಾನು ವೆಡ್ಸ್ ಭೂಮಿ”

ಪೂರ್ವಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಕಿಶೋರ್ ಶೆಟ್ಟಿ ನಿರ್ಮಾಣದ ‘ಭಾನು ವೆಡ್ಸ್ ಭೂಮಿ’ ಚಿತ್ರಕ್ಕೆ ಎ.ಎಂ.ನೀಲ್ ನೇತೃತ್ವದಲ್ಲಿ ಹಿನ್ನೆಲೆ ಸಂಗೀತ ಕಾರ್ಯ ರಾಜೇಶ್ ರಾಮನಾಥ್ ಸ್ಟುಡಿಯೋವಿನಲ್ಲಿ ಪೂರ್ಣಗೊಂಡಿತು. ಈ ಚಿತ್ರವನ್ನು ಜಿ.ಕೆ. ಆದಿ ನಿರ್ದೇಶಿಸುತ್ತಿದ್ದಾರೆ.

ಈ ಚಿತ್ರದ ಛಾಯಾಗ್ರಹಣ – ಗಣೇಶ್ ಹೆಗ್ಡೆ, ಸಂಗೀತ- ಎ.ಎಂ. ನೀಲ್, ಸಂಕಲನ- ಶ್ರೀನಿವಾಸ್ ಪಿ ಬಾಬು, ನಿರ್ವಹಣೆ – ಗಂಡಸಿ ರಾಜು, ತಾರಾಗಣದಲ್ಲಿ – ಸೂರ್ಯಪ್ರಭ್, ರಕ್ಷತಾ ಮಲ್ನಾಡ್. ಶೋಭರಾಜ್, ಗಿರೀಶ್, ಮೈಕೋ ಮಂಜು, ಸಿಲ್ವಾಮೂರ್ತಿ, ಹಂಸಾ, ಸೂರ್ಯಕಿರಣ್, ಪಲ್ಲವಿ ಶೆಟ್ಟಿ, ಹೆಚ್.ಎಂ.ಟಿ. ವಿಜಿ, ಪ್ರವೀಣ್, ಮಿಮಿಕ್ರಿ ರಾಜು, ಹಾಗೂ ವಿಶೇಷ ಪಾತ್ರದಲ್ಲಿ ರಂಗಾಯಣ ರಘು ಅಭಿನಯಿಸುತ್ತಿದ್ದಾರೆ.

ಈ ಚಿತ್ರದ ಕಥೆಯು ಒಂದು ನೈಜ ಘಟನೆಯನ್ನು ಆಧಾರವಾಗಿಟ್ಟುಕೊಂಡು ಹೆಣೆಯಲಾಗಿದೆ. ತುಂಬಾ ತಿರುವುಗಳಿಲ್ಲದಿದ್ದರೂ, ನೈಜತೆಯಿಂದ ಕೂಡಿದ ಕಥೆ ‘ಭಾನು ಮತ್ತು ಭೂಮಿ’ ಒಬ್ಬರನ್ನೊಬ್ಬರು ನೋಡುತ್ತಾ ಸನಿಹ ಸೇರಲೆಂದು ಹಪಹಪಿಸುತ್ತಿದ್ದರೂ ಸಾಧ್ಯವಾಗದೇ ತಮ್ಮಲ್ಲೇ ಇರುವ ಭಾವನೆಗಳನ್ನು ಹೇಗೆ ವ್ಯಕ್ತಪಡಿಸುತ್ತಾರೆಂಬುದೇ ವಿಷಯ.

Share This With Your Friends

Related posts