Cinisuddi Fresh Cini News 

ಶಿವಣ್ಣನ ಹುಟ್ಟುಹಬ್ಬಕ್ಕೆ ” ಭಜರಂಗಿ-2″ ಟೀಸರ್ ಗಿಫ್ಟ್ ..!

ಸ್ಯಾಂಡಲ್ ವುಡ್ ನ ಸೆಂಚುರಿ ಸ್ಟಾರ್, ಹ್ಯಾಟ್ರಿಕ್ ಹೀರೋ ಶಿವಣ್ಣ ಅವರ ಟಗರು ಮತ್ತು ಮಫ್ತಿ ನಂತರ ಹೊಸದೊಂದು ಈಮೇಜ್ ಸೃಷ್ಟಿಯಾಗಿದ್ದು, ಈಗಾಗಲೇ ಯಶಸ್ಸಿನ ದಾರಿಯಲ್ಲಿ ಸಾಗುತ್ತಿರೋ ಕಾಂಬಿನೇಷನ್ ನ ಮತ್ತೊಂದು ಸಿನಿಮಾ ರೆಡಿಯಾಗಿ ನಿಂತಿದೆ.

ಹೌದು, ಭಜರಂಗಿ, ವಜ್ರಕಾಯದಂತ ಸೂಪರ್ ಹಿಟ್ ಸಿನಿಮಾ ಕೊಟ್ಟಂತ ಎ ಹರ್ಷ ಮತ್ತು ಶಿವಣ್ಣ ಕಾಂಬಿನೇಷನ್ ಈಗ ಭಜರಂಗಿ 2ಮೂಲಕ ಮತ್ತೊಮ್ಮೆ ಸ್ಯಾಂಡಲ್ ವುಡ್ ನಲ್ಲಿ ಅಬ್ಬರಿಸಲು ರೆಡಿಯಾಗಿದೆ.

ಈಗಾಗಲೇ ಪೋಸರ್ ಗಳ ಮೂಲಕ ದೊಡ್ಡಮಟ್ಟದ ಸಿನಿಮವಾಗಿ ಗುರುತಿಸಿಕೊಂಡಿದ್ದು, ಇದೇ ಜುಲೈ 12ಕ್ಕೆ ಶಿವಣ್ಣ ಬರ್ತ್ ಡೇ ಪ್ರಯುಕ್ತ 1.14 ನಿಮಿಷ ಟೀಸರ್ ಬಿಡುಗಡೆ ಮಾಡಲಿದ್ದು, ಅಭಿಮಾನಿಗಳಲ್ಲಿ ದೊಡ್ಡ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.

ಅಭಿಮಾನಿಗಳು ಊಹೆಗೆ ಮೀರಿದ ಲುಕ್ ಒಂದು ರಿವೀಲ್ ಆಗಲಿದ್ದು, ಸಿನಿಮಾ ಅಂದ್ಕೊಂಡಿರೋದಕ್ಕಿಂತ ಒಂದು ತೂಕ ಜಾಸ್ತಿ ಬಂದಿದೆ ಎಂಬುದು ತಂಡದ ಮಾತು.

ಭಜರಂಗಿ 2 ಸಿನಿಮಾದ ತಾರಾಬಳಗ ಬಹಳ ವಿಶೇಷವಾಗಿದ್ದು, ಹಲವಾರು ಸರ್ಫ್ರೈಸ್ ಗಳನ್ನು ಕೊಡಲು ಚಿತ್ರತಂಡ ಸಿದ್ಧವಾಗಿದ್ದು, ವಿಡಿಯೋ ಮೂಲಕ ಶಿವಣ್ಣ ಅವರ ಹೊಸ ಪ್ರಚಂಡ ಲುಕ್ ಮತ್ತು ಇನ್ನಿತರ ಕಲಾವಿದರನ್ನು ಪರಿಚಯಿಸುವ ಕೆಲಸ ಮಾಡುತ್ತಿದೆ.

ಕೆಜಿಎಫ್ ಸಿನಿಮಾವನ್ನು ಮೀರಿಸುವ ಮೇಕಿಂಗ್ ಹೊಂದಿದೆ ಎಂಬುದು ಆಪ್ತ ವಲಯದ ಮಾತು. ಭಜರಂಗಿ 2 ಸಿನಿಮಾ ಕನ್ನಡ ಚಿತ್ರರಂಗದಲ್ಲೊಂದು ದಾಖಲೆ ಬರೆಯಲಿ ಹಾಗೂ ನಿರ್ಮಾಪಕರಾದ ಜಯಣ್ಣ ಮತ್ತು ಭೋಗಣ್ಣ ಅವರ ಬೊಕ್ಕಸ ಸಹ ಜೋರಾಗಲಿ ಎಂಬುದೇ ನಮ್ ಆಶಯ.

Share This With Your Friends

Related posts