Cinisuddi Fresh Cini News 

ಶಿವಣ್ಣನ ಹುಟ್ಟು ಹಬ್ಬಕ್ಕೆ “ಭಜರoಗಿ-2” ಸ್ಪೆಷಲ್ ಪೋಸ್ಟರ್ ಲಾಂಚ್

ಸ್ಯಾಂಡಲ್ ವುಡ್ ನಲ್ಲಿ ಈಗ ಎಲ್ಲೆಲ್ಲೂ ಪ್ಯಾನ್ ಇಂಡಿಯಾ ಹವಾ ಎನ್ನಬಹುದು. ಕೆ.ಜಿ.ಎಫ್ ಯಶಸ್ಸಿನ ನಂತರ ಬಹಳಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿರುವ ಚಿತ್ರವೇ ಭಜರಂಗಿ-2. ಜುಲೈ 12 ಸೆಂಚುರಿ ಸ್ಟಾರ್ , ಹ್ಯಾಟ್ರಿಕ್ ಹೀರೋ, ಶಿವರಾಜ್ ಕಮಾರ್ ಹುಟ್ಟುಹಬ್ಬ .

ಅಂದು ಭಜರಂಗಿ -2 ಚಿತ್ರತಂಡ ವಿಶೇಷವಾದ ಪೋಸ್ಟರ್ ಬಿಡುಗಡೆ ಮಾಡಲಿದೆ. ಈ ವಿಶೇಷ ಪೋಸ್ಟರ್ ನಲ್ಲಿ ಭಜರಂಗಿ-2 ಚಿತ್ರದ ಎಲ್ಲಾ ಕಲಾವಿದರ ಫಸ್ಟ್ ಲುಕ್ ಹೊರಬರಲಿದೆಯoತೆ.

ಈಗಾಗಲೇ ಸಂಕ್ರಾಂತಿಯ ಹಬ್ಬದಲ್ಲಿ ಬಿಡುಗಡೆಗೊಂಡಿರುವ ಭಜರoಗಿ ಚಿತ್ರದ ಪೋಸ್ಟರ್ ಈಗ ಎಲ್ಲೆಡೆ ಭಾರಿ ಸದ್ದು ಮಾಡಿದೆ.ಭಗವಾನ್ ಶ್ರೀ ಆಂಜನೇಯನ ಪರಮಭಕ್ತ ನಂದೇ ಗುರ್ತಿಸಿಕೊಂಡಿರುವ ಎ.ಹರ್ಷ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ಬಹು ನಿರೀಕ್ಷಿತ ಭಜರಂಗಿ- 2 ಬಹಳಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ.

ನಮ್ಮ ಸೆಂಚುರಿ ಸ್ಟಾರ್ ಶಿವಣ್ಣ ಅವರ ಬೆಂಕಿ ಲುಕ್ಕಿನ ಪೋಸ್ಟರ್ ಮುಂದೆ ಚಾಣಾಕ್ಷ ಪಂಜು ಹಿಡಿದಿರುವುದು ನೋಡುವುದಕ್ಕೆ ಮೈ ಜುಮ್ಮೆನಿಸುತ್ತದೆ. ಇನ್ನು ಶಿವಣ್ಣನ ಬರ್ತ್ಡೇಗೆ ಬರುತ್ತಿರುವ ಹೊಸ ಪೋಸ್ಟರ್ ಬಹಳಷ್ಟು ಕುತೂಹಲವನ್ನು ಹುಟ್ಟಿಸಿದೆ.

ಏನೇ ಕೆಲಸ ಮಾಡಿದರೂ ವಿಭಿನ್ನವಾಗಿ ಇರಬೇಕು ನೋಡುಗರ ಗಮನ ಸೆಳೆಯಬೇಕು ಒಂದು ಉತ್ತಮ ಚಿತ್ರ ಕೊಡಬೇಕು ಎಂಬ ಹಂಬಲವಿರುವ ನಿರ್ದೇಶಕ ಹರ್ಷ ರವರ ಈ ಕೆಲಸ ಮೆಚ್ಚುವಂಥದ್ದೆ.

ಜಯಣ್ಣ ಫಿಲಂಸ್ ಮೂಲಕ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ಇನ್ನು ಶಿವಣ್ಣನ ಹುಟ್ಟುಹಬ್ಬಕ್ಕೆ ಬಿಡುಗಡೆಗೊಳ್ಳಲಿರುವ ಭಜರoಗಿ-2 ನ ಹೊಸ ಪೋಸ್ಟರ್ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.

Share This With Your Friends

Related posts