Cinisuddi Fresh Cini News 

“ಭಜರಂಗಿ-2” ಮೋಷನ್ ಪೋಸ್ಟರ್ ಬಿಡುಗಡೆಗೆ ರೆಡಿ

ಚಂದನವನದ ಕರುನಾಡ ಚಕ್ರವರ್ತಿ , ಸೆಂಚುರಿ ಸ್ಟಾರ್ , ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷೆಯ ಭಜರಂಗಿ-2 ಚಿತ್ರದ ಮೋಷನ್ ಪೋಸ್ಟರ್ ಹಾಗೂ ಟೈಟಲ್ ಟ್ರ್ಯಾಕ್ ಫೆಬ್ರುವರಿಯಲ್ಲಿ ಬಿಡುಗಡೆ. ಈಗ ಎಲ್ಲೆಲ್ಲೂ ಪ್ಯಾನ್ ಇಂಡಿಯಾ ಹವಾ ಎನ್ನಬಹುದು. ಆ ನಿಟ್ಟಿನಲ್ಲಿ ಸದ್ಯ ಬರುತ್ತಿರುವ ಬಹುತೇಕ ಚಿತ್ರಗಳ ಪ್ರಮೋಶನ್ ಕೂಡಾ ಅದ್ದೂರಿಯಾಗಿ ನಡೆಯುತ್ತಿದೆ.

ಈಗಾಗಲೇ ತನ್ನ ಪೋಸ್ಟರ್ ಮೂಲಕವೇ ಬಹಳಷ್ಟು ಸದ್ದನ್ನ ಮಾಡಿರುವ ಈ ಚಿತ್ರವನ್ನ ಅನುಭವಿ ನಿರ್ದೇಶಕ ಎ .ಹರ್ಷ ಸಾರಥ್ಯ ವಹಿಸಿಕೊಂಡಿದ್ದಾರೆ. ಈ ಹಿಂದೆ ಭಜರಂಗಿ ಕೂಡ ಭರ್ಜರಿ ಯಶಸ್ಸನ್ನು ಕಂಡಿತ್ತು , ಈಗ ಭರ್ಜರಿ -2 ಹವಾ ಜೋರಾಗಿದೆ.

ಹಂತ ಹಂತವಾಗಿ ಸೆಳೆಯುತ್ತಿರುವ ಈ ಚಿತ್ರದ ಪೋಸ್ಟರ್ ಗಳು ಪ್ರೇಕ್ಷಕರ ಮನಸ್ಸನ್ನು ಗೆದ್ದಿದೆ. ಏನೇ ಕೆಲಸ ಮಾಡಿದರೂ ವಿಭಿನ್ನವಾಗಿ ಇರಬೇಕು ನೋಡುಗರ ಗಮನ ಸೆಳೆಯಬೇಕು ಒಂದು ಉತ್ತಮ ಚಿತ್ರ ಕೊಡಬೇಕು ಎಂಬ ಉದ್ದೇಶವನ್ನು ನಿರ್ದೇಶಕ ಎ. ಹರ್ಷ ಹೊಂದಿದ್ದಾರೆ.

ಈ ಚಿತ್ರವನ್ನು ಜಯಣ್ಣ ಫಿಲಂಸ್ ಮೂಲಕ ನಿರ್ಮಾಣವಾಗುತ್ತಿದೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ಮುಂದಿನ ತಿಂಗಳು ಅದ್ದೂರಿ ಯಾಗಿ ಚಿತ್ರದ ಮೋಷನ್ ಪೋಸ್ಟರ್ ಹಾಗೂ ಟೈಟಲ್ ಟ್ರ್ಯಾಕ್ ಪ್ರೇಕ್ಷಕರ ಮುಂದೆ ತರಲಿದ್ದಾರೆ. ಇನ್ನು ಅಭಿಮಾನಿಗಳು ಕೂಡ ಈ ಭಜರಂಗಿ-2 ಚಿತ್ರದ ಮೋಷನ್ ಪೋಸ್ಟರ್ ಯಾವ ರೀತಿ ಬರುತ್ತದೆ ಎಂದು ಕಾಯುತ್ತಿದ್ದಾರೆ.

Related posts